AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕೀಟಗಳ ಜೀವನ ಚಕ್ರಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಸಸ್ಯ ಹೇನಿನ ಜೀವನ ಚಕ್ರದ ಮಾಹಿತಿ
ಬಾಧೆಯ ಲಕ್ಷಣಗಳು : - ಸಸ್ಯ ಹೇನಿನ ಅಪ್ಸರೆ ಮತ್ತು ಪ್ರೌಢ ಕೀಟಗಳು ರಸವನ್ನು ಹೀರುವ ಮೂಲಕ ಕಾಂಡ, ಎಲೆಗಳು, ಹೂವುಗಳನ್ನು ಹಾನಿಗೊಳಿಸುತ್ತವೆ, ಜೊತೆಗೆ ರಸವನ್ನು ಹೀರುವಾಗ ಎಲೆಗಳ ಮೇಲೆ ಸಕ್ಕರೆ ಪಾಕದಂತಹ ಸ್ರವಿಕೆಯನ್ನು ಹೊರ ಸೂಸುತ್ತವೆ. ಇದರಿಂದಾಗಿ ಕಪ್ಪು ಶಿಲೀಂಧ್ರವು ಎಲೆಗಳ ಮೇಲೆ ಹರಡುತ್ತದೆ ಮತ್ತು ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅಡ್ಡಿಯಾಗುತ್ತದೆ. ಈ ಕೀಟದ ಬಾಧೆಯು ಡಿಸೆಂಬರ್ ನಿಂದ ಮಾರ್ಚ್ ವರೆಗೆ ಇರುತ್ತದೆ. ಈ ಕೀಟದಿಂದ 50% ನಷ್ಟ ಉಂಟಾಗುತ್ತದೆ.
ಜೀವನ ಚಕ್ರ: - ಅಪ್ಸರೆ: - ಆರಂಭದಲ್ಲಿ, ಈ ಕೀಟವು ನವೆಂಬರ್ ತಿಂಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಹೆಣ್ಣು ಕೀಟಗಳಿರುತ್ತವೆ. ಹೆಣ್ಣು ಕೀಟಗಳು ಅಪ್ಸರೆ ಕೀಟಗಳಿಗೆ ನೇರವಾಗಿ ಜನ್ಮ ನೀಡುತ್ತವೆ. ಅಪ್ಸರೆಗಳು 3-6 ದಿನಗಳಲ್ಲಿ ಪ್ರೌಢ ಕೀಟಗಳಾಗಿ ಪರಿವರ್ತನೆಯಾಗುತ್ತವೆ. ಪ್ರೌಢ: - ಪ್ರೌಢ ಕೀಟಗಳು ರೆಕ್ಕೆ ಮತ್ತು ರೆಕ್ಕೆಗಳಿಲ್ಲದವು ಆಗಿರುತ್ತವೆ. ಅವುಗಳ ಬಣ್ಣ ಹಸಿರು ಮತ್ತು ತಿಳಿ ಬೂದು ಬಣ್ಣವಾಗಿರುತ್ತದೆ. ನಿರ್ವಹಣೆ : - ಬಾಧೆಯು ಅಧಿಕವಾಗಿದ್ದಾಗ - ಆಕ್ಸಿಡೆಮೆಟನ್ ಮೀಥೈಲ್ 25% ಇಸಿ @ 1000 ಮಿಲಿಯನ್ನು 500 ಲೀಟರ್ ನೀರಿನಲ್ಲಿ ಬೇರೆಸಿ ಸಿಂಪಡಿಸಿ. ಥಿಯಾಮೆಥೊಕ್ಸಮ್ 25 ಡಬ್ಲ್ಯೂಜಿ @ 100 ಗ್ರಾಂ / ಎಕರೆಗೆ 500 ಲೀಟರ್ ನೀರಿನಲ್ಲಿ ಬೇರೆಸಿ ಸಿಂಪಡಿಸಿ. ಅಸೆಟಾಂಪ್ರಿಡ್ 1.1% + ಸೈಪರ್ಮೆಥ್ರಿನ್ 5.5% ಇಸಿ @ 175 ಮಿಲಿ/ಎಕರೆಗೆ 500 ಲೀಟರ್ ನೀರಿನಲ್ಲಿ ಬೇರೆಸಿ ಸಿಂಪಡಿಸಬೇಕು. ಸೂಚನೆ : - ವಿವಿಧ ಬೆಳೆಗಳಿಗೆ ಅನುಗುಣವಾಗಿ ಕೀಟನಾಶಕಗಳ ಪ್ರಮಾಣವು ಬದಲಾಗಬಹುದು. ಮೂಲ: ಆಗ್ರೊಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
243
0