AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬೇಸಿಗೆಯ ಶೇಂಗಾ ಬೆಳೆಯಲ್ಲಿ ಎಲೆ ತಿನ್ನುವ ಮರಿಹುಳುವಿನ ಹಾನಿ ಮತ್ತು ನಿಯಂತ್ರಣ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಬೇಸಿಗೆಯ ಶೇಂಗಾ ಬೆಳೆಯಲ್ಲಿ ಎಲೆ ತಿನ್ನುವ ಮರಿಹುಳುವಿನ ಹಾನಿ ಮತ್ತು ನಿಯಂತ್ರಣ
ಶೇಂಗಾ ಬೆಳೆಯನ್ನು ಬೇಸಿಗೆಯಲ್ಲಿ ಹೆಚ್ಚಿನ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಬೆಳೆಯ ಆರಂಭಿಕ ಹಂತದಲ್ಲಿ ಈ ಕೀಟದ ಬಾಧೆ ಸಾಮಾನ್ಯವಾಗಿ ಹೆಚ್ಚು. ಹೆಚ್ಚಿನ ಆರ್ದ್ರತೆಯ ಇದ್ದಲ್ಲಿ , ಎಲೆ ತಿನ್ನುವ ಮರಿಹುಳುಗಳ ಬಾಧೆಯು ಹೆಚ್ಚುತ್ತದೆ._x000D_ _x000D_ ಮರಿಹುಳುಗಳ ಆರಂಭಿಕ ಹಂತವು ಎಲೆಗಳ ಪತ್ರ ಹರಿತ್ತಿನ ಅಂಶವನ್ನು ಕೆರೆದು ತಿನ್ನುತ್ತದೆ. ಮತ್ತು ಹೊಸತಾಗಿ ಬರುವ ಎಲೆಗಳಿಗೆ ಬಾಧಿಸುತ್ತದೆ, ಆದರೆ ನಂತರದ ಹಂತದಲ್ಲಿ, ಎಲೆಗಳನ್ನು ತಿನ್ನದು ಶಿರನಾಳಗಳನ್ನು ಅಷ್ಟೇ ಉಳಿಸುತ್ತದೆ._x000D_ ಸಂಜೆಯ ಹೊತ್ತಲ್ಲಿ, ಮರಿಹುಳುಗಳು ಸಸಿಗಳ ಕಾಂಡದ ಬಳಿ ಮಣ್ಣಿನ ಬಿರುಕುಗಳಲ್ಲಿ ಅಡಗಿಕೊಂಡಿತ್ತವೆ._x000D_ _x000D_ ಬೀಜೋತ್ಪತಿ ಹಂತದಲ್ಲಿ ಇದರ ಸಂಖ್ಯೆಯನ್ನು ಗಮನಿಸಿದರೆ, ಅವು ಮಣ್ಣಿನಲ್ಲಿ ಬೆಳೆಯುತ್ತಿರುವ ಕಾಯಿಗಳನ್ನು ಸಹ ಹಾನಿಗೊಳಿಸುತ್ತವೆ._x000D_ _x000D_ ಮೋಹಕ ಬಲೆಗಳನ್ನು ಸ್ಥಾಪಿಸಿ._x000D_ _x000D_ ಬಾಧೆಯ ಆರಂಭದಲ್ಲಿ, ಬೇವಿನ ಆಧಾರಿತ ಸೂತ್ರೀಕರಣ @ ೪೦ ಮಿಲಿ ಅಥವಾ ಬ್ಯೂವೇರಿಯಾ ಬಾಸ್ಸಿಯಾನಾ, ಶಿಲೀಂಧ್ರ ಆಧಾರಿತ ಕೀಟನಾಶಕ @ ೪೦ ಗ್ರಾಂ ಅಥವಾ ಬ್ಯಾಸಿಲಸ್ ಥುರಿಂಜಿಯೆನ್ಸಿಸ್, ದುಂಡಾಣು ಆಧಾರಿತ ಕೀಟನಾಶಕ @ ೧೦ ಗ್ರಾಂ ಅಥವಾ ಎಸ್‌ಎಲ್ಎನ್‌ಪಿವಿ ೨೫೦ ಎಲ್‌ಇ @ ೧೫ ಲೀಟರ್ ನೀರಿಗೆ ೧೦ ಮಿಲಿಯನ್ನು ೧೫ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು._x000D_ _x000D_ ಕೀಟಗಳ ಬಾಧೆ ಆರಂಭವಾಗುವ ೧೫ ದಿನಗಳ ಮಧ್ಯಂತರದಲ್ಲಿ ಎರಡು ದ್ರವೌಷಧದಗಳನ್ನು ಪೊಂಗೆಮಿಯಾ (ಕರಂಜ ಎಣ್ಣೆ) ಎಣ್ಣೆ ಅಥವಾ ಬೇವಿನ ಎಣ್ಣೆ@ 30 ಮಿಲಿಯನ್ನು ೧೫ ಲೀಟರ್ ನೀರಿಗೆ ೧೫ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ. ಬೇವಿನ ಎಣ್ಣೆ ೪೫೦ ಮಿಲಿ + ಪೊಂಗಾಮಿಯಾ ಎಣ್ಣೆ (ಕರಂಜ್ ಎಣ್ಣೆ) ೪೫೦ ಮಿಲಿ + 100 ಗ್ರಾಂ ನಿರ್ಮಾ ಪುಡಿ (ತೇವಗೊಳಿಸುವ ದಳ್ಳಾಲಿ) ಮಿಶ್ರಣ ಮಾಡಿ ಸಿಂಪಡಿಸಿ._x000D_ _x000D_ ಹೆಚ್ಚಿನ ಪ್ರಮಾಣದಲ್ಲಿ,ಥಿಯಾಮೆಥಾಕ್ಸಮ್ 12.6% + ಲ್ಯಾಂಬ್ಡಾ ಸಿಹೆಲೋಥ್ರಿನ್ 9.5% ಝೆಡ್ ಸಿ @ 4 ಮಿಲಿ ಅಥವಾ ಮೆಥೊಮಿಲ್ 40 ಎಸ್‌ಪಿ @ 12 ಗ್ರಾಂ ೧೫ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು._x000D_ _x000D_ ಮೂಲ: ಆಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ _x000D_ ಈ ಮಾಹಿತಿಯು ನಿಮಗೆ ಉಪಯುಕ್ತವೆಂದು ಅನಿಸಿದರೆ, ಅದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಲು ಮತ್ತು ಲೈಕ್ ಮಾಡಲು ಮರೆಯಬೇಡಿ._x000D_ _x000D_
39
3