AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕಿತ್ತಳೆ ಹಣ್ಣಿನ ತೋಟದ ಬೆಳೆಯಲ್ಲಿ ಕೀಟಪೀಡೆಯ ನಿರ್ವಹಣಾ ಕ್ರಮಗಳು
ಸಾವಯವ ಕೃಷಿKVK Mokokchung, Nagaland
ಕಿತ್ತಳೆ ಹಣ್ಣಿನ ತೋಟದ ಬೆಳೆಯಲ್ಲಿ ಕೀಟಪೀಡೆಯ ನಿರ್ವಹಣಾ ಕ್ರಮಗಳು
ಭಾರತದಲ್ಲಿ ನಿಂಬೆ ಹಣ್ಣಿನ ಗುಂಪಿಗೆ ಸೇರಿದ ಹಣ್ಣಿನ ಒಟ್ಟು ಪ್ರದೇಶವು ಸುಮಾರು 40% ಮ್ಯಾಂಡರಿನ್ (ಕಿತ್ತಳೆ ) ಆಕ್ರಮಿಸಿ ಕೊಂಡಿದೆ. ಭಾರತದ ಪ್ರಮುಖ ವಾಣಿಜ್ಯ ಕಿತ್ತಳೆ ತಳಿಗಳೆಂದರೆ ಮ್ಯಾಂಡರಿನ್ (ಸಿಟ್ರಸ್ ರೆಟಿಕ್ಯುಲಾಟಾ), ಸಿಹಿ ಕಿತ್ತಳೆ (ಸಿಟ್ರಸ್ ಸಿನೆನ್ಸಿಸ್) ಮತ್ತು ಆಸಿಡ್ ಲೈಮ್ (ಸಿಟ್ರಸ್ ರಂಟಿಫೋಲಿಯಾ) ದೇಶದಲ್ಲಿ ಉತ್ಪತ್ತಿಯಾಗುವ ಎಲ್ಲಾ ಕಿತ್ತಳೆ ಹಣ್ಣುಗಳಲ್ಲಿ ಕ್ರಮವಾಗಿ 41, 23 ಮತ್ತು 23% ಎಲ್ಲಾ ಕಿತ್ತಳೆಯ ತಳಿಗಳನ್ನು ಬೆಳೆಯಲಾಗುತ್ತದೆ.
ಅನುಸರಿಸಬೇಕಾದ ಕೀಟಗಳ ನಿರ್ವಹಣಾ ಪದ್ಧತಿಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ ಹೆಚ್ಚಿನ ಗಿಡಗಳ ಸಾಂದ್ರತೆ ಮತ್ತು ಉತ್ತಮ ನೀರಿನ ಕಾಲುವೆಯ ವ್ಯವಸ್ಥೆ. ಕಪ್ಪು ನೊಣ ಮತ್ತು ಸಿಟ್ರಸ್ ಸೈಲಾ ಕೀಟದ ಬಾಧೆಯನ್ನು ತಡೆಯಲು ಆಶ್ರಯ ಸಸ್ಯಗಳಾದ ಪೇರಲ, ಸಪೋಟಾ, ಮತ್ತು ದಾಳಿಂಬೆ, ಕರಿಬೇವು ಕಿತ್ತಳೆ ಹಣ್ಣಿನ ಬಳಿ ಬೆಳೆಯಬಾರದು. ನರ್ಸರಿ ಮತ್ತು ಹಣ್ಣಿನ ತೋಟಗಳಲ್ಲಿ ಕೀಟಗಳ ವಿವಿಧ ಹಂತಗಳನ್ನು ಸಂಗ್ರಹಿಸಿ ಮತ್ತು ನಾಶಪಡಿಸಿ. ಎಲೆ ಸುರಂಗ ಕೀಟದಿಂದ ಬಾಧೆಗೊಂಡಿರುವ ಶಾಖೆಗಳನ್ನು ಅಥವಾ ಸೈಲಾದಿಂದ ಬಾಧೆಗೊಂಡ ಒಣಗಿದ ಎಲೆಗಳನ್ನು ಚಾಟಣಿ ಮಾಡುವುದು ಅಥವಾ ಕಪ್ಪು ನೊಣಗಳಿಂದ ಎಲೆಗಳ ಮೇಲೆ ಕಪ್ಪು ಶಿಲಿಂದ್ರದ ಬೆಳವಣಿಗೆಯಿಂದ ಶಾಖೆಗಳನ್ನು ಬಾಧೆಗೊಂಡದನ್ನು ಚಳಿಗಾಲದಲ್ಲಿ ಚಾಟಣಿಯನ್ನು ಮಾಡಬೇಕು. ಉದುರಿಬಿದ್ದ ಬಿದ್ದ ಹಣ್ಣುಗಳನ್ನು ಆಳವಾಗಿ ಮಣ್ಣಿನಲ್ಲಿ ಹೂತುಹಾಕುವ ಮೂಲಕ ನಾಶಪಡಿಸಬೇಕು. ಸಂಜೆ ಹೊತ್ತಲ್ಲಿ 2 ಗಂಟೆಗಳ ಕಾಲ ಹಣ್ಣಿನ ತೋಟದಲ್ಲಿ ಹೊಗೆಯಾಡಿಸುವುದು (ಕೃಷಿ ತ್ಯಾಜ್ಯ ಅಥವಾ ಎಲೆಗಳನ್ನು ಸುಡುವುದು) ಹಣ್ಣಿನ ರಸ ಹೀರುವ ಪತಂಗಗಳ ಪ್ರೌಢವನ್ನು ನಿಯಂತ್ರಿಸಬಹುದು ಮರದ ಕಾಂಡದ ಸುತ್ತಲಿನ ಪ್ರದೇಶದ ಮಣ್ಣನ್ನು ಸಡಿಲಗೊಳಿಸಬೇಕು. ಎಣ್ಣೆಯಿಂದ ಹೊದಿಸಿದ ಜಿಗುಟಾದ ಬ್ಯಾಂಡನ್ನು ಮರದ ಕಾಂಡದ ಸುತ್ತಲೂ ಕಟ್ಟಬೇಕು. ಇದು ಹಿಟ್ಟು ತಿಗಣೆಯ ಬಾಧೆಯನ್ನು ನಿಯಂತ್ರಿಸುತ್ತದೆ. ಹಣ್ಣಿನ ರಸ ಹೀರುವ ಪತಂಗದ ವಿಷ ಪಾಶಾಣ - 2 ಲೀಟರ್ ನೀರಿನಲ್ಲಿ ಕಿತ್ತಳೆ ರಸವನ್ನು 60 ವ್ಯಾಟ್ನ ಬಲ್ಬ್ನೊಂದಿಗೆ ಟ್ರೇನಲ್ಲಿ ಟ್ರೇನಲ್ಲಿ ಹಾಕಿಡಬೇಕು. ಪ್ರತಿ ಗಿಡಕ್ಕೆ 500 ಪ್ರೌಢ ಟ್ರೈಕೊಗ್ರಾಮಾ ಚಿಲೋನಿಸ್ ಬಿಡುಗಡೆ ಮಾಡಿದರೆ ನಿಂಬೆ ಚಿಟ್ಟೆ ಕೀಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ತೊಗಟೆ ತಿನ್ನುವ ಕೀಟದ ಮೂಲಕ ಮರದ ಕಾಂಡದಲ್ಲಿ ರಂದ್ರಗಳು ಕಂಡರೆ ತಂತಿಯನ್ನು ತೆಗೆದುಕೊಂಡು ಮರಿಹುಳುವನ್ನು ಸಾಯಿಸಿ ಮತ್ತು 10 ಮಿಲಿ ಪೆಟ್ರೋಲ್ ಅಥವಾ ಸೀಮೆಎಣ್ಣೆಯಲ್ಲಿ ನೆನೆಸಿದ ಹತ್ತಿಯ ಉಂಡೆಯನ್ನು ಇರಿಸಿ. ಎಲೆ ಸುರಂಗ ಕೀಟ , ಕಪ್ಪು ನೊಣದ ವಿರುದ್ಧ ಪರಿಣಾಮಕಾರಿ ನಿರ್ವಹಣೆಗಾಗಿ ಬೇವಿನ ಬೀಜದ ಕಷಾಯ 5% ಅಥವಾ ಬೇವಿನ ಎಣ್ಣೆ @ 2 ಮಿಲಿ ಪ್ರತಿ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ. ನೀರಿನ ಬರದಿಂದಾಗಿ ಮೈಟ್ ನುಶಿ ಸಮಸ್ಯೆಯಾಗುತ್ತದೆ. ಆದ್ದರಿಂದ, ಬೇಸಿಗೆಯ ಕೊನೆಯಲ್ಲಿ ನೀರಿನ ಬರದ ಸಮಯದಲ್ಲಿ ಮರಕ್ಕೆ ಚೆನ್ನಾಗಿ ನೀರಾವರಿ ಒದಗಿಸಬೇಕು. ಬಸವನ ಹುಳುವಿನ ಬಾಧೆಯನ್ನು ಪರೀಕ್ಷಿಸಲು, 2 ಕೆಜಿ ಬೆಲ್ಲ, 25 ಗ್ರಾಂ ಯೀಸ್ಟ್ ನ್ನು ಕರಗಿಸಿ ವಿಷ ಪಾಶಾಣ ತಯಾರಿಸಿ. ಗೋಧಿ ಅಥವಾ ಭತ್ತದ ಹೊಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹುದುಗುವಿಕೆಗಾಗಿ ಸುಮಾರು 10-12 ಗಂಟೆಗಳ ಕಾಲ ಇರಿಸಿ ಮತ್ತು 100 ಗ್ರಾಂ ಮೆಥೊಮಿಲ್ 10 ಲೀಟರ್ ನೀರಿನಲ್ಲಿ ಸೇರಿಸಿ ಸಿಂಪಡಿಸಿ . ಅಂತಹ ವಿಷ ಪಾಶಾಣ ಆಹಾರವನ್ನು ನೀಡಿದ ನಂತರ ಬಸವನ ಹುಳು ಆಕರ್ಷಿತವಾಗುತ್ತದೆ ಮತ್ತು ಸಾಯುತ್ತವೆ. ಮೂಲ: ಕೆವಿಕೆ, ಮೊಕೊಕ್ಚುಂಗ್, ನಾಗಾಲ್ಯಾಂಡ್ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
2
0