AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕರಗುವ ರಸಗೊಬ್ಬರಗಳ ಲಾಭಗಳು
ಸಲಹಾ ಲೇಖನವಾರದ ರೈತ
ಕರಗುವ ರಸಗೊಬ್ಬರಗಳ ಲಾಭಗಳು
ನೀರಿನಲ್ಲಿ ಸಂಪೂರ್ಣವಾಗಿ ಕರಗುವ ರಸಗೊಬ್ಬರಗಳನ್ನು ಕರಗುವ ರಸಗೊಬ್ಬರಗಳು ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕರಗುವ ರಸಗೊಬ್ಬರಗಳ ಲಾಭಗಳನ್ನು ರೈತರು ಅರಿತಿರುವುದರಿಂದ, ಅವರು ಮೊದಲಿಗಿಂತಲೂ ಹೆಚ್ಚಾಗಿ ಇದನ್ನೇ ಬಳಸುತ್ತಿದ್ದಾರೆ. ಈಗ ನಾವು ಕರಗುವ ರಸಗೊಬ್ಬರಗಳ ಲಾಭಗಳನ್ನು ಈ ಕೆಳಗಿನಂತೆ ತಿಳಿಯೋಣ. • ಇವು ನೀರಿನಲ್ಲಿ ಕರಗುವ ಕಾರಣ, ಬೆಳೆಗಳಿಗೆ ಶೀಘ್ರವಾಗಿ ಲಭ್ಯವಾಗುತ್ತವೆ. • ಬೆಳೆಗೆ ನೀರು ಮತ್ತು ಪೌಷ್ಟಿಕಾಂಶಗಳು ನಿಯಮಿತ ರೂಪದಲ್ಲಿ ಸಿಗುವ ಕಾರಣದಿಂದಾಗಿ, ಇಳುವರಿಯ ಉತ್ಪಾದನೆ ಕೂಡ ಗಣನೀಯವಾಗಿ ಏರುತ್ತದೆ. • ಒಳ್ಳೆಯ ರಫ್ತು ಮಾಡಬಲ್ಲ ಗುಣಮಟ್ಟದ ಇಳುವರಿ ಸಿಗುತ್ತದೆ. • ಬೆಳೆಯ ಅವಶ್ಯಕತೆ ಮತ್ತು ಬೆಳೆಯ ಹಂತದ ಅನುಗುಣವಾಗಿ ಕರಗುವ ರಸಗೊಬ್ಬರಗಳನ್ನು ಬೆಳೆಗಳಿಗೆ ದೈನಂದಿನ ಅಥವಾ ದಿನ ಬಿಟ್ಟು ದಿನ ನೀಡಬಹುದು. • ಕರಗುವ ರಸಗೊಬ್ಬರಗಳನ್ನು ಬೆಳೆಯ ಬೇರುಗಳಿಗೆ ನೇರವಾಗಿ ಹಾಕಬಹುದು, ಇದರಿಂದ ಬೇರುಗಳು ಶೀಘ್ರವಾಗಿ ಇದನ್ನು ಹೀರಿಕೊಳ್ಳುತ್ತವೆ. • ಕರಗುವ ರಸಗೊಬ್ಬರಗಳನ್ನು ಸೌಮ್ಯ ದ್ರಾವಣದಲ್ಲಿ ನೀಡುವ ಕಾರಣ, ಇದು ಬೇರುಗಳಿಗೆ ಹಾನಿಯನ್ನುಂಟುಮಾಡುವುದಿಲ್ಲ.
• ಈ ರೀತಿಯ ರಸಗೊಬ್ಬರಗಳನ್ನು ಸಿಂಪಡಿಸುವುದು ಸರಳ ಮತ್ತು ಅನುಕೂಲಕರವಾಗಿರುವ ಕಾರಣ, ಕಾರ್ಮಿಕ ವೆಚ್ಚಗಳು ಉಳಿಯುತ್ತವೆ. • ಈ ರಸಗೊಬ್ಬರಗಳನ್ನು ದಿನಾಲೂ ಅಥವಾ ಪರ್ಯಾಯ ದಿನಗಳಂದು ನೀಡುವುದರಿಂದ, ಪೌಷ್ಟಿಕಾಂಶಗಳು ಸಹ ಪೋಲಾಗುವುದಿಲ್ಲ. • ಈ ರಸಗೊಬ್ಬರ ಆಮ್ಲಿಯ ಗುಣವನ್ನು ಹೊಂದಿರುವುದರಿಂದ, ಇದು ಮಣ್ಣಿನ pH ನಿಯಂತ್ರಿಸಲು ಸಹಾಯಮಾಡುತ್ತದೆ. ಜೊತೆಗೆ ಇದರಲ್ಲಿರುವ ಖನಿಜಗಳು ಹನಿ ನೀರಾವರಿ ಪದ್ಧತಿಯ ರಂಧ್ರಗಳಲ್ಲಿ ಸಂಗ್ರಹವಾಗುವುದಿಲ್ಲ. ಅದ್ದರಿಂದ ರಂಧ್ರಗಳು ಮುಚ್ಚುವುದಿಲ್ಲ. • ಈ ಕರಗುವ ರಸಗೊಬ್ಬರಗಳು ಹಾನಿಕಾರಕ ರಾಸಾಯನಿಕಗಳಾದಂತಹ ಸೋಡಿಯಂ ಕ್ಲೋರೈಡ್ ನಿಂದ ಮುಕ್ತವಾಗಿದೆ, ಆದ್ದರಿಂದ ಮಣ್ಣಿನ ರಚನೆಗೆ ಕೂಡ ಹಾನಿಯಾಗುವುದಿಲ್ಲ. ಮತ್ತು ಇಳುವರಿಯ ಗುಣಮಟ್ಟ ಸಹ ವೃದ್ಧಿಯಾಗುತ್ತದೆ. • ಕಡಿಮೆ ಫಲವತ್ತಾದ ಮಣ್ಣಿನಲ್ಲೂ ಸಹ, ಫಲೀಕರಣದ ಮೂಲಕ ಅಧಿಕ ಇಳುವರಿಯನ್ನು ಪಡೆಯಬಹುದು. ವಾರದ ರೈತ
248
0