AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಉತ್ತಮ ಗುಣಮಟ್ಟದ ಈರುಳ್ಳಿಯ ಬೀಜ ಉತ್ಪಾದನೆಯ ಬಗ್ಗೆ ಮಾಹಿತಿ
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಉತ್ತಮ ಗುಣಮಟ್ಟದ ಈರುಳ್ಳಿಯ ಬೀಜ ಉತ್ಪಾದನೆಯ ಬಗ್ಗೆ ಮಾಹಿತಿ
ಯಾವುದೇ ತಳಿಯ ಉತ್ಪಾದನಾ ಸಾಮರ್ಥ್ಯವು ಅದರಲ್ಲಿರುವ ಅನುವಂಶಿಕ ಗುಣಲಕ್ಷಣಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ, ಅದರ ಉತ್ಪಾದನಾ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬೇಕಾದರೆ, ಬೀಜ ಉತ್ಪಾದನೆಯಲ್ಲಿ ಯಾವುದೇ ಕಲಬೆರಕೆ ಇಲ್ಲ ಎಂಬುದನ್ನು ಖಚಿತಪಡಿಸಿ ಕೊಳ್ಳಬೇಕು. ಈರುಳ್ಳಿ ಬೀಜಗಳ ಉತ್ಪಾದನೆಯನ್ನು ತೆಗೆದುಕೊಳ್ಳಲು, ಈರುಳ್ಳಿ ಗೆಡ್ಡೆಗಳನ್ನು ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣಿನಲ್ಲಿ ಬಿತ್ತನೆ ಮಾಡಬೇಕು. ಈರುಳ್ಳಿ ಬೀಜ ಉತ್ಪಾದನೆಗೆ ತಂಪಾದ ಹವಾಗುಣ ಬೇಕು. ಈರುಳ್ಳಿಯ ಆಯ್ಕೆಯನ್ನು ಹೀಗೆ ಮಾಡಬೇಕು? : 1. ಬೀಜಕ್ಕಾಗಿ 6 ತಿಂಗಳ ಹಳೆಯ ಗೆಡ್ಡೆಗಳನ್ನು ನಾಟಿ ಮಾಡಬೇಕು. ಬೀಜೋತ್ಪಾದನೆಗಾಗಿ ಎರಡು ಈರುಳ್ಳಿಗಳು ಒಟ್ಟಿಗೆ ಅಂಟಿಕೊಂಡಿರುವ ಈರುಳ್ಳಿಯನ್ನು ನಾಟಿ ಮಾಡಬಾರದು. 2. ಬಿತ್ತನೆ ಮಾಡುವ ಮೊದಲು ಆಯ್ದ ಈರುಳ್ಳಿಯ ಗೆಡ್ಡೆಗಳನ್ನು 1/3 ಭಾಗಗಳಾಗಿ ಕತ್ತರಿಸಿ ಶಿಲೀಂಧ್ರನಾಶಕದಿಂದ ಉಪಚರಿಸಬೇಕು. ಆದ್ದರಿಂದ ಎರಡು ಈರುಳ್ಳಿ ನಾಟಿ ಮಾಡಿದ ಹೊಲಗಳ ನಡುವಿನ ಅಂತರವು 500 ರಿಂದ 600 ಮೀಟರ್‌ಗಿಂತ ಹೆಚ್ಚಿರಬೇಕು. 3. ಈರುಳ್ಳಿ ಬೆಳೆಯಲ್ಲಿ ಪರಾಗಸ್ಪರ್ಶಕ ಕ್ರಿಯೆಯಲ್ಲಿ ಜೇನುನೊಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದಕ್ಕಾಗಿ ಚೆಂಡು ಹೂ , ಸೇವಂತಿಗೆ ಮುಂತಾದ ಬೆಳೆಗಳನ್ನು ಹೊಲದಲ್ಲಿ ಅಂತರಬೆಳೆಗಳಾಗಿ ನಾಟಿ ಮಾಡಬೇಕು. 4. ನೀರಿನ ನಿರ್ವಹಣೆಗೆ ಹನಿ ನೀರಾವರಿ ಅಥವಾ ಪ್ರವಾಹ ನೀರಾವರಿಯನ್ನು ಒದಗಿಸಿ. ತುಂತುರು ನೀರಾವರಿ ಮತ್ತು ರಸಗೊಬ್ಬರ ಮತ್ತು ಕಳೆಗಳ ಬಳಕೆಯನ್ನು ತಪ್ಪಿಸುವುದನ್ನು ಸಹ ಸರಿಯಾಗಿ ನಿರ್ವಹಣೆ ಮಾಡಬೇಕು. 5. ಮೋಡ ಕವಿದ ವಾತಾವರಣದಲ್ಲಿ ಬೀಜಗಳು ಉತ್ತಮ ಗುಣಮಟ್ಟವು ದೊರೆಯುವುದಿಲ್ಲ.ಹೂಬಿಡುವ ನಂತರ, ಚೀಲೇಟೆಡ್ ಕ್ಯಾಲ್ಸಿಯಂ @ 0.5 ಗ್ರಾಂ, ಬೋರಾನ್ @ 1 ಗ್ರಾಂ ಮತ್ತು ಪ್ಲಾನೊಫಿಕ್ಸ್ @ 0.25 ಮಿಲಿ ಲೀಟರ್ ನೀರಿಗೆ ಸಿಂಪಡಿಸಬೇಕು. 6. ಬೀಜ ಉತ್ಪಾದನೆಯಲ್ಲಿ ಥ್ರಿಪ್ಸ್ ನುಶಿ, ಸಸ್ಯ ಹೇನು ಮತ್ತು ಬೇರು ಕೊಳೆ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಹೂ ಬರುವ ಹಂತದಲ್ಲಿ ಹೊಲವನ್ನು ಯಾವಾಗಲೂ ವೀಕ್ಷಿಸಿ, ಕೀಟ ಮತ್ತು ರೋಗದಿಂದ ಬಾಧಿತ ಸಸ್ಯಗಳನ್ನು ನಾಶಪಡಿಸಬೇಕು. 7. ಈರುಳ್ಳಿಯು ನಾಟಿ ಮಾಡಿದ 3 ತಿಂಗಳೊಳಗೆ ಹೂವಿನ ಕಟಾವು ಪ್ರಾರಂಭವಾಗುತ್ತದೆ. ಹೂವನ್ನು 2 ರಿಂದ 3 ಹಂತಗಳಲ್ಲಿ ಕಟಾವು ಮಾಡಬೇಕು. ಮೂಲ - ಅಗೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ,ಈ ಫೋಟೋ ಕೆಳಗಿನ ಹಳದಿ ಹೆಬ್ಬೆರಳು ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!
294
0