AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಆಲೂಗೆಡ್ಡೆ ಟ್ಯೂಬರ್ ಚಿಟ್ಟೆ ಅಥವಾ ಆಲೂಗೆಡ್ಡೆ ಟ್ಯೂಬರ್ ಪತಂಗದ ಜೀವನ ಚಕ್ರ
ಕೀಟಗಳ ಜೀವನ ಚಕ್ರಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಆಲೂಗೆಡ್ಡೆ ಟ್ಯೂಬರ್ ಚಿಟ್ಟೆ ಅಥವಾ ಆಲೂಗೆಡ್ಡೆ ಟ್ಯೂಬರ್ ಪತಂಗದ ಜೀವನ ಚಕ್ರ
ಅತಿಥಿ ಸಸ್ಯಗಳು: ಆಲೂಗಡ್ಡೆ, ಟೊಮೆಟೊ, ಬಿಳಿಬದನೆ, ತಂಬಾಕು ಇತ್ಯಾದಿ. ಗುರುತಿಸುವಿಕೆಯ ಲಕ್ಷಣಗಳು: - ಸಂಪೂರ್ಣವಾಗಿ ಬೆಳೆದ ಮರಿ ಹುಳು ಸುಮಾರು 15-20 ಮಿ.ಮೀ. ಇದು ಉದ್ದವಾಗಿರುತ್ತದೆ ಮತ್ತು ದೇಹದ ಬಣ್ಣ ತಿಳಿ ಹಸಿರು ಮತ್ತು ತಲೆಯ ಬಣ್ಣ ಕಂದು ಬಣ್ಣದ್ದಾಗಿರುತ್ತದೆ. ಪ್ರೌಢ ಪತಂಗಗಳು ಕಂದು ಬಣ್ಣ ಬಣ್ಣದಲ್ಲಿರುತ್ತವೆ. ಹಾನಿಯ ಲಕ್ಷಣಗಳು : - ಈ ಕೀಟದ ಮರಿ ಹುಳುವಿನ ಹಂತವು ಹಾನಿಯನ್ನುಂಟು ಮಾಡುತ್ತದೆ. ಈ ಕೀಟವು ಆಲೂಗಡ್ಡೆಯನ್ನು ಉಗ್ರಾಣದಲ್ಲಿ ಮತ್ತು ಹೊಲಗಳಲ್ಲಿಯೂ ಸಹ ಹಾನಿಯನ್ನುಂಟು ಮಾಡುತ್ತದೆ. ಉಗ್ರಾಣಗಳಲ್ಲಿ ಸಂಗ್ರಹವಾಗಿರುವ ಆಲೂಗಡ್ಡೆಗಳು ಗೆಡ್ಡೆಗಳನ್ನು ಕೊರೆದು ತಿನ್ನುತ್ತವೆ ಮತ್ತು ಬಾಧಿತ ಗೆಡ್ಡೆಗಳ ಮೇಲ್ಮೈಯಲ್ಲಿ ಕಪ್ಪು ಬಣ್ಣದ ಹಿಕ್ಕೆಗಳನ್ನು ಬಿಡುತ್ತದೆ. ಬಾಧಿತ ಎಲೆಗಳು ಉದುರುವುದು ಮತ್ತು ಕೊಂಬೆಗಳನ್ನು ಉದುರುವುದು, ಈ ರೀತಿಯಾಗಿ ಬೆಳೆಯಲ್ಲಿ ಕೀಟಗಳ ಹಾನಿಯ ಲಕ್ಷಣಗಳನ್ನು ಕಾಣಬಹುದು. ಹತೋಟಿ: ಆರೋಗ್ಯಕರ ಮತ್ತು ಪ್ರಮಾಣೀಕೃತ ಗಡ್ಡೆಯ ಬೀಜವನ್ನು ಬಳಸಿ, ಗಡ್ಡೆಯ ಕಣ್ಣಿನ ಸುತ್ತಲೂ ಕಪ್ಪು ಕಲೆಗಳನ್ನು ಹೊಂದಿದ ಗಡ್ಡೆಯ ಆಯ್ಕೆಯನ್ನು ಮಾಡಬೇಡಿ. ನವೆಂಬರ್ 15 ರಂದು ಅಥವಾ ಮೊದಲು ಬೆಳೆಯ ಬಿತ್ತನೆ ಮಾಡಬೇಕು. ಸಮಯಕ್ಕೆ ಸರಿಯಾಗಿ ಬೆಳೆಯಲ್ಲಿ ಮಣ್ಣು ಏರಿಸುವುದನ್ನು ಮಾಡಿ ಮತ್ತು ಅಗತ್ಯವಿರುವಂತೆ ನೀರಾವರಿಯನ್ನು ಕೊಡಿ, ಇಲ್ಲದಿದ್ದರೆ ಮಣ್ಣಿನಲ್ಲಿ ಬಿರುಕುಗಳು ಕಾಣಿಸಿಕೊಂಡು ಗೆಡ್ಡೆಗಳು ತೆರೆಯಬಹುದು.
ಶೇಕಡಾ 75% ರಷ್ಟು ಎಲೆಗಳು ಒಣಗಿದಾಗ ಗೆಡ್ಡೆಗಳನ್ನು ಹೊರತೆಗೆಯಬೇಕು. ಅಗೆದು ತೆಗೆದ ಗೆಡ್ಡೆಗಳಿಂದ ಆರೋಗ್ಯಕರ ಗೆಡ್ಡೆಗಳನ್ನು ಆಯ್ಕೆ ಮಾಡಿ ಮತ್ತು ಅವುಗಳನ್ನು ಉಗ್ರಾಣಗಳಲ್ಲಿ 25 ಸೆಂ.ಮೀ ಮರಳನ್ನು ಹರಡಿ ಅದರ ಮೇಲೆ ಗಡ್ಡೆಗಳನ್ನು ಸಂಗ್ರಹಿಸಿ. ಆದ್ದರಿಂದ ಹೆಣ್ಣು ಪತಂಗ ಗೆಡ್ಡೆಗಳ ಮೇಲೆ ಮೊಟ್ಟೆ ಇಡಲು ಸಾಧ್ಯವಾಗದಂತೆ ಅದನ್ನು ನಿರ್ವಹಣೆ ಮಾಡ್ಬಹುದು . ಮೂಲ: - ವಿಕ್ಟೋರಿಯಾ ನೌರೆಮ್ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ವಿಡಿಯೋ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ .
31
0