AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಅಡಿಕೆಯಲ್ಲಿ ಎಲೆ ಹಳದಿರೋಗದ ಬಾಧೆಯ ಲಕ್ಷಣಗಳು ಮತ್ತು ಹತೋಟಿ ಕ್ರಮಗಳು
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಅಡಿಕೆಯಲ್ಲಿ ಎಲೆ ಹಳದಿರೋಗದ ಬಾಧೆಯ ಲಕ್ಷಣಗಳು ಮತ್ತು ಹತೋಟಿ ಕ್ರಮಗಳು
ಬಾಧೆಯ ಲಕ್ಷಣಗಳು: ಹಳದಿ ಬಣ್ಣಕ್ಕೆ ತಿರುಗಿ ಈ ನಂತರ ಪೂರ್ತಿ ಎಲೆಯು ಹಳದಿ ಮತ್ತು ಹಸಿರು ಪಟ್ಟಿಗಳಿಂದ ಮಿಶ್ರಿತವಾಗಿರುತ್ತದೆ. ನಂತರ ಹಂತದಲ್ಲಿ ಎಲೆಗಳ ರೋಗವನ್ನು ನಿಯಂತ್ರಣದಲ್ಲಿಡಲು ಮತ್ತು ಬಾಧಿತ ಮರಗಳ ಒಣಗುವಿಕೆಯನ್ನು ಕಾಣುತ್ತೇವೆ. ಅಡಿಕೆಯು ಕಂದು ಬಣ್ಣದ್ದಾಗಿದ್ದು ತಿನ್ನಲು ಯೋಗ್ಯ ವಾಗಿರುವುದಿಲ್ಲ. ಬೇರುಗಳ ತುದಿಯು ಗಡುಸಾಗಿದ್ದು ಕಪ್ಪು ಬಣ್ಣಕ್ಕೆ ತಿರುಗಬಹುದು.
ಹತೋಟಿ ಕ್ರಮಗಳು : ಒಣಗಿದ ಗಿಡಗಳನ್ನು ಬೇರು ಸಹಿತ ಸುಟ್ಟು ಹಾಕಬೇಕು. ಬಳಕೆಯಲ್ಲಿರುವ ಸಸ್ಯ ಸಂರಕ್ಷಣಾ ಕ್ರಮಗಳಿಂದ ರೋಗವನ್ನು ನಿಯಂತ್ರಿಸಲು ಸಾಧ್ಯವಿಲ್ಲದೇ ಇರುವುದರಿಂದ ಬಾಧೆಗೊಳಗಾದ ಗಿಡದ ಇಳುವರಿಯನ್ನು ಹೆಚ್ಚಿಸಲು ಈ ಕೆಳಗಿನ ನಿರ್ವಹಣಾ ಕ್ರಮ ಗಳನ್ನು ತೆಗೆದುಕೊಳ್ಳಬಹುದು. ಬೇಸಿಗೆಯಲ್ಲಿ ನೀರನ್ನು ಕೊಟ್ಟು ನೀರಾವರಿಯ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದು. ಶಿಫಾರಸ್ಸು ಮಾಡಿದ ರಸಗೊಬ್ಬರಗಳನ್ನು ಹಾಗೂ ಲಘಪೊಷಕಾಂಶಗಳನ್ನು ಒದಗಿಸುವುದು. ಹಸಿರೆಲೆ ಮತ್ತು ಕೊಟ್ಟಿಗೆಗೊಬ್ಬರಗಳನ್ನು ಒದಗಿಸಬೇಕು. ಒಂದು ಕಿ.ಗ್ರಾಂ. ಫಾಸ್ಪೇಟ್ ಗೊಬ್ಬರ, 2. ಕಿ.ಗ್ರಾಂ. ಬೇವಿನ ಹಿಂಡಿಯನ್ನು ಎರಡು ಕಂತುಗಳಲ್ಲಿ ಪ್ರತಿ ಗಿಡಕ್ಕೆ ಕೊಡಬೇಕು. ಮೂಲ: ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
7
0