ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಪಶುಸಂಗೋಪನೆಪಶುವೈದ್ಯ ವಿಜ್ಞಾನ ಕೇಂದ್ರ, ಆನಂದ್ ಕೃಷಿ ವಿಶ್ವವಿದ್ಯಾಲಯ.
ಗರ್ಭಸ್ಥ ಪ್ರಾಣಿಗಳ ಸರಿಯಾದ ಆರೈಕೆ
ಕರು ಹಾಕುವ ಅವಧಿ ಬಗ್ಗೆ ಏಕೆ ಕಾಳಜಿವಹಿಸಬೇಕು? ಹಾಲು ಕರೆಯುವ ಪ್ರಾಣಿಗಳಾದ ಹಸುಗಳು ಎಮ್ಮೆಗಳು ಪ್ರತಿ 13 ಅಥವಾ 14 ತಿಂಗಳಿಗೆ ಆರೋಗ್ಯವಂತ ಕರುಗಳನ್ನು ಹಾಕಬೇಕು. ಅದಕ್ಕಾಗಿ ಪ್ರಾಣಿಗಳು ಕರು ಹಾಕಿದ 3-4 ತಿಂಗಳುಗಳ ನಂತರ ಮತ್ತೆ ಗರ್ಭ ಧಾರಣೆ ಮಾಡಲು ಸಿದ್ದವಾಗಿರಬೇಕು ಮತ್ತು 1-2 ಬಾರಿ ಫಲೀಕರಣದ ನಂತರ ಗರ್ಭ ಧಾರಣೆ ಮಾಡಬೇಕು. ಗರ್ಭಾವಸ್ಥೆಯ ಕೊನೆಯ 3 ತಿಂಗಳು. 1. ಪ್ರಾಣಿ ಹೆಚ್ಚು ಸಮಯದವರೆಗೆ ನೀರಿನಲ್ಲಿ ಇರಬಾರದು ಅಥವಾ ಗುಡ್ಡಗಾಡು ಅಥವಾ ತಗ್ಗು ಪ್ರದೇಶಗಳಲ್ಲಿ ಚಲಿಸಬಾರದು, ಇದು ತುಂಬಾ ಮುಖ್ಯವಾದ ಅಂಶ ಏಕೆಂದರೆ ಭ್ರೂಣದ ಚಲನೆಯ ಕಾರಣ ಪ್ರಾಣಿಗಳ ಸಂತಾನೋತ್ಪತ್ತಿ ಅಂಗ ಅಥವಾ ಗರ್ಭಾಶಯ ಹಾನಿಗೊಳಗಾಗಬಹುದು. ಇದರಿಂದಾಗಿ ಕರು ಹಾಕುವಾಗ ಅತೀವ ನೋವು ಉಂಟುಮಾಡಬಹುದು ಅಥವಾ ತಾಯಿ ಪ್ರಾಣಿ ಮತ್ತು ಭ್ರೂಣ ಎರಡೂ ಜೀವಗಳ ಸಾವು ಸಂಭವಿಸಬಹುದು. 2. ಪ್ರಾಣಿಗಳಿಗೆ ಹೊಟ್ಟೆ ಉಬ್ಬುವಿಕೆ (ಗ್ಯಾಸ್ )ಆಗುವಂತಹ ಯಾವುದೇ ಮೇವು ಅಥವಾ ಆಹಾರ ಹಾಕಬಾರದು. 3. ಪ್ರಾಣಿಯಲ್ಲಿ ಗರ್ಭ ಜಾರುವ/ಹೊರಬರುವ ತೊಂದರೆ ಇದ್ದರೆ(ಕರು ಹಾಕುವ ಸಮಯಕ್ಕಿಂತ ಮುಂಚೆ ಒಂದು ಅಥವಾ ಹೆಚ್ಚು ಮೂತ್ರಾಂಗ ಮತ್ತು ಜನನೇಂದ್ರಿಯಅಂಗಗಳ ಹೊರಚಾಚುವಿಕೆ) ಪ್ರಾಣಿಗಳನ್ನು ಪಶುವೈದ್ಯರ ಬಳಿ ಕರೆದುಕೊಂಡು ಹೋಗಬೇಕು ಮತ್ತು ವೈದ್ಯರ ಸಲಹೆಯನ್ನು ಪಡೆಯಬೇಕು. 4. ಪ್ರಾಣಿಗಳಲ್ಲಿ ಗರ್ಭ ಜಾರುವ/ಹೊರಬರುವ ತೊಂದರೆ ಇದ್ದಲ್ಲಿ ಅವುಗಳ ಮುಂಭಾಗದ ಕಾಲುಗಳು ಇಳಿಜಾರಿನಲ್ಲಿ ಉಳಿಯುವ ರೀತಿಯಲ್ಲಿ ಕಟ್ಟಬೇಕು.
5. ಹಸುಗಳು-ಎಮ್ಮೆಗಳಲ್ಲಿ ಗರ್ಭಾವಸ್ಥೆಯ ಕೊನೆಯ ಮೂರು ತಿಂಗಳುಗಳು ಬಹಳ ಮುಖ್ಯ. ಹಸು-ಎಮ್ಮೆಯ ಆರೈಕೆಯ ಜೊತೆಗೆ ಗರ್ಭದಲ್ಲಿ ಇರುವ ಕರುವಿನ ಕಾಳಜಿವಹಿಸಬೇಕು. ಆದ್ದರಿಂದ, ಈ ಸಮಯದಲ್ಲಿ, ಪೌಷ್ಟಿಕಾಂಶದ ಆಹಾರ (ಖನಿಜ, ಉಪ್ಪು ಮಿಶ್ರಣದೊಂದಿಗೆ ಒಣ-ಹಸಿರು ಮೇವು) ಸಾಕಷ್ಟು ಪ್ರಮಾಣದಲ್ಲಿ ನೀಡಬೇಕು, ಜಾನುವಾರುಗಳ ಕೊಟ್ಟಿಗೆ ಶುದ್ಧೀಕರಣವನ್ನು ಮಾಡಬೇಕು ಮತ್ತು ಪ್ರಾಣಿಗಳಿಗೆ ವಿಶೇಷವಾದ ಚಿಕಿತ್ಸೆಯನ್ನು ಒದಗಿಸಬೇಕು. ಉಲ್ಲೇಖ: ಪಶುವೈದ್ಯ ವಿಜ್ಞಾನ ಕೇಂದ್ರ, ಆನಂದ್ ಕೃಷಿ ವಿಶ್ವವಿದ್ಯಾಲಯ. ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
764
0
ಕುರಿತು ಪೋಸ್ಟ್