AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಆರಂಭಿಕ ಹಂತದಲ್ಲಿ ಗೋಧಿ ಮತ್ತು ದ್ವಿದಳ ಧಾನ್ಯಗಳ ಬಿತ್ತನೆಯಲ್ಲಿ ತಡವಾಗಲಿದೆ
ಕೃಷಿ ವಾರ್ತಾಔಟ್ ಲುಕ್ ಕೃಷಿ
ಆರಂಭಿಕ ಹಂತದಲ್ಲಿ ಗೋಧಿ ಮತ್ತು ದ್ವಿದಳ ಧಾನ್ಯಗಳ ಬಿತ್ತನೆಯಲ್ಲಿ ತಡವಾಗಲಿದೆ
ಪ್ರವಾಹ ಮತ್ತು ಅಕಾಲಿಕ ಮಳೆ ದೇಶದ ಹಲವು ರಾಜ್ಯಗಳಲ್ಲಿ ಬೆಳೆ ಬಿತ್ತನೆ ಮೇಲೆ ಪರಿಣಾಮ ಬೀರಿದೆ. ಪ್ರಮುಖ ಹಿಂಗಾರಿನ ಬೆಳೆಯಾದ ಗೋಧಿಯೊಂದಿಗೆ ದ್ವಿದಳ ಧಾನ್ಯಗಳ ಬಿತ್ತನೆ ಆರಂಭಿಕ ಹಂತಗಳಲ್ಲಿ ತಡವಾಗಲಿದೆ, ಆದರೂ ಪ್ರಮುಖ ಎಣ್ಣೆಕಾಳು ಬೆಳೆಯಾದ ಸಾಸಿವೆ ಬೀಜದ ಬಿತ್ತನೆ ಹೆಚ್ಚಾಗಿದೆ.
ಕೃಷಿ ಸಚಿವಾಲಯದ ಪ್ರಕಾರ, ಇದುವರೆಗೆ ಒಟ್ಟು ಹಿಂಗಾರು ಬೆಳೆಗಳನ್ನು 95.35 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದ್ದು, ಕಳೆದ ವರ್ಷದ ಈ ಸಮಯದವರೆಗೆ 112.24 ಲಕ್ಷ ಹೆಕ್ಟೇರ್‌ಗೆ ಹೋಲಿಸಿದರೆ,ಇದುವರೆಗೆ ಕೇವಲ 9.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಧಿಯನ್ನು ಬಿತ್ತಲಾಗಿದೆ, ಇದು ಮುಖ್ಯ ಹಿಂಗಾರಿನ ಬೆಳೆ, ಕಳೆದ ವರ್ಷದಲ್ಲಿ ಇದನ್ನು 15.35 ಲಕ್ಷ ಹೆಕ್ಟೇರ್ನಲ್ಲಿ ಬಿತ್ತಲಾಗಿತ್ತು. ಅಂತೆಯೇ, ದ್ವಿದಳ ಧಾನ್ಯಗಳ ಬಿತ್ತನೆಯನ್ನು ಇಲ್ಲಿಯವರೆಗೆ 27.85 ಲಕ್ಷ ಹೆಕ್ಟೇರ್‌ಗೆ ಇಳಿಸಲಾಗಿದೆ, ಆದರೆ ಕಳೆದ ವರ್ಷ ಇಲ್ಲಿಯವರೆಗೆ 39.93 ಲಕ್ಷ ಹೆಕ್ಟೇರ್ ಬಿತ್ತನೆ ಮಾಡಲಾಗಿತ್ತು. ಹಿಂಗಾರು ದ್ವಿದಳ ಧಾನ್ಯಗಳ ಮುಖ್ಯ ಬೆಳೆಯಾದ ಕಡಲೆ ಬಿತ್ತನೆ ಹಿಂಗಾರು ಹಂಗಾಮಿನಲ್ಲಿ 19.82 ಲಕ್ಷ ಹೆಕ್ಟೇರ್‌ನಲ್ಲಿ ಮಾಡಲಾಗಿದೆ. ಹಿಂಗಾರು ಹಂಗಾಮಿನ ಬೆಳೆಗಳ ಬಿತ್ತನೆ ಇನ್ನೂ ಆರಂಭಿಕ ಹಂತದಲ್ಲಿದೆ ಮತ್ತು ಬಿತ್ತನೆ ಮತ್ತಷ್ಟು ಬೇಗನೆ ಆಗಬಹುದು. ಮೂಲ - ಔಟ್‌ ಲುಕ್ ಅಗ್ರಿಕಲ್ಚರ್, 9 ನವೆಂಬರ್ 2019 ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಈ ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
120
0