AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬೆಳೆಗಳಲ್ಲಿ ಗಂಧಕದ ಪ್ರಾಮುಖ್ಯತೆ
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಬೆಳೆಗಳಲ್ಲಿ ಗಂಧಕದ ಪ್ರಾಮುಖ್ಯತೆ
ಬೆಳೆಗಳಲ್ಲಿ ಬಳಸುವ ಪ್ರಮುಖ ದ್ವಿತೀಯಕ ಪೋಷಕಾಂಶಗಳಲ್ಲಿ ಗಂಧಕವು ಒಂದಾಗಿದೆ.ಗಂಧಕವನ್ನು ಮುಖ್ಯವಾಗಿ ಕೀಟನಾಶಕ ಮತ್ತು ಶಿಲೀಂಧ್ರನಾಶಕವಾಗಿ ಪೋಷಕಾಂಶಗಳ ಜೊತೆಗೆ ಬಳಸಲಾಗುತ್ತದೆ. ದ್ಯುತಿಸಂಶ್ಲೇಷಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುವುದರಿಂದ ಪೋಷಕಾಂಶಗಳಲ್ಲಿನ ಗಂಧಕವು ಬೆಳೆಯ ಬೆಳವಣಿಗೆಗೆ ಮುಖ್ಯವಾಗಿದೆ.
ಗಂಧಕವನ್ನು ಬಳಸುವುದರ ಉಪಯೋಗಗಳು:_x000D_ ಬೆಳೆಯಲ್ಲಿ ಎಣ್ಣೆ ಅಂಶ, ಸುವಾಸನೆ, ಪ್ರೋಟೀನ್ ಮತ್ತು ಸಕ್ಕರೆ ಅಂಶವನ್ನು ಹೆಚ್ಚಿಸಲು ಗಂಧಕ ಉಪಯುಕ್ತವಾಗಿದೆ ಮತ್ತು ಉತ್ಪನ್ನದ ಗುಣಮಟ್ಟವನ್ನು ಸುಧಾರಿಸುತ್ತದೆ. ಆದ್ದರಿಂದ ಮೊದಲಿನಿಂದಲೂ ಈರುಳ್ಳಿ, ಅರಿಶಿನ, ಶುಂಠಿ, ಸೋಯಾಬೀನ್, ನೆಲಗಡಲೆ, ಕಬ್ಬು ಮತ್ತು ಹಣ್ಣಿನಂತಹ ಬೆಳೆಗಳಲ್ಲಿ ಗಂಧಕವನ್ನು ಬಳಸಬೇಕು._x000D_ ಸಾರಜನಕ, ರಂಜಕ, ಕಬ್ಬಿಣ , ಸತು ಮತ್ತು ಬೋರಾನ್ ನಂತಹ ಪೋಷಕಾಂಶ ಲಭ್ಯತೆಗೆ ಗಂಧಕವು ಸಹಾಯ ಮಾಡುತ್ತದೆ._x000D_ ಗಂಧಕವು ಪೋಷಕಾಂಶಗಳಲ್ಲಿನ ಉಷ್ಣತೆಯ ಮೂಲವಾಗಿದೆ, ಆದ್ದರಿಂದ ಮಳೆಗಾಲದಲ್ಲಿ ಹೆಚ್ಚಿನ ತೇವಾಂಶವಿದ್ದರೆ ಅದನ್ನು ಮಣ್ಣನ್ನಲಿರುವ ನೀರು ಭಾಷ್ಪಿಭವನವಾಗಲು ಸಹ ಬಳಸಬಹುದು, ಮತ್ತು ಇದು ಚಳಿಗಾಲದಲ್ಲಿ ಬೆಳೆಯಲ್ಲಿ ಉಷ್ಣತೆಯನ್ನು ನಿರ್ಮಾಣ ಮಾಡುವುದರ ಮೂಲಕ ಉತ್ತಮ ಬೆಳೆ ಬೆಳೆಯಲು ನೇರವಾಗುತ್ತದೆ._x000D_ _x000D_ ಕೀಟ ರೋಗ ನಿಯಂತ್ರಣ:_x000D_ ಬೂದಿ ರೋಗ ಮತ್ತು ಕೆಂಪು ಜೇಡರ ಕೀಟಗಳನ್ನು ನಿಯಂತ್ರಿಸಲು ಗಂಧಕವನ್ನು ಬೆಳೆಗೆ ಸಿಂಪಡಿಸಲಾಗುತ್ತದೆ. ಗಂಧಕವನ್ನು ಪ್ರತಿ ಲೀಟರ್ ನೀರಿಗೆ ಗಂಧಕ ೮೦% @ ೩ ಗ್ರಾಂ ಸಿಂಪಡಿಸಲು ಬಳಸಲಾಗುತ್ತದೆ._x000D_ ಗಂಧಕದ ಕೊರತೆಯ ಲಕ್ಷಣಗಳು:_x000D_ ಬೆಳೆಯಲ್ಲಿ ಗಂಧಕದ ಕೊರತೆಯಿದ್ದರೆ, ಹೊಸ ಕುಡಿಯಿಂದ ಬರುವ ಎಲೆಗಳ ದೇಟಿನ ಹತ್ತಿರ ಸುಟ್ಟನಂತೆ ಕಾಣುತ್ತದೆ._x000D_ ಸಾವಯವ ವಸ್ತುಗಳು ವಿರಳವಾಗಿರುವ ಅಥವಾ ಮರಳು ಮಿಶ್ರಿತ ಮಣ್ಣಿರುವ ಪ್ರದೇಶಗಳಲ್ಲಿ ಗಂಧಕದ ಕೊರತೆ ಕಾಣಿಸಿಕೊಳ್ಳುತ್ತದೆ._x000D_ ಗಂಧಕದ ಬಳಕೆಗೆ ಮೂಲ:_x000D_ ಗಂಧಕದ ಬಳಕೆಗಾಗಿ, ಆರಂಭದಲ್ಲಿ ರಸಗೊಬ್ಬರಗಳನ್ನು ತಳದ ಪ್ರಮಾಣದಲ್ಲಿ ಅಥವಾ ಬೆಳೆದು ನಿಂತಿರುವ ಬೆಳೆಗಳಲ್ಲಿ ಹನಿ ನೀರಾವರಿ ಮೂಲಕ ಮತ್ತು ಇತರ ರಸಗೊಬ್ಬರಗಳಾದ ಬೆನೆಸಲ್ಫ್ 90%, ಕೊಸಾವೇಟ್ ಫರ್ಟಿಸ್ 90%, ಸಲ್ಫಾಮ್ಯಾಕ್ಸ್ ಗ್ರೊಮೋರ್ 90%, ಜುವಾರಿ ಸಲ್ಫರ್ 90% ನ್ನು ಬಳಸಬಹುದು._x000D_ _x000D_ ರಸಗೊಬ್ಬರಗಳಾದ ಸಿಂಗಲ್ ಸೂಪರ್ ಫಾಸ್ಫೇಟ್, ಸಲ್ಫೇಟ್ ಆಫ್ ಪೊಟ್ಯಾಶ್, 20:20:0:13, 00:00:50 ಕರಗುವ ರಸಗೊಬ್ಬರಗಳನ್ನು ಉಪಯೋಗಿಸಬಹುದು._x000D_ ವಹಿಸ ಬೇಕಾದ ಕಾಳಜಿ:_x000D_ ಗಂಧಕದಿಂದ ಉತ್ಪತ್ತಿಯಾಗುವ ಉಷ್ಣದಿಂದಾಗಿ ಬೇಸಿಗೆಯಲ್ಲಿ ಗಂಧಕವನ್ನು ಬಳಸುವುದನ್ನು ತಪ್ಪಿಸುವುದು ಉತ್ತಮ._x000D_ ಮೂಲ: ಅಗ್ರೋಸ್ಟಾರ್ ಅಗ್ರೋನೋಮಿ ಸೆಂಟರ್ ಆಫ್ ಎಕ್ಸೆಲೆನ್ಸ್_x000D_ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
56
2