ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಕೃಷಿ ವಾರ್ತಾಔಟ್ ಲುಕ್ ಕೃಷಿ
ತಡವಾಗಿ ಘಾಣ ಹೀಡಿದ ಕಾರಣ ಎರಡು ತಿಂಗಳಲ್ಲಿ ಸಕ್ಕರೆ ಉತ್ಪಾದನೆಯು 54% ರಷ್ಟು ಕಡಿಮೆ
ಅಕ್ಟೋಬರ್ 1, 2019 ರಿಂದ ಪ್ರಾರಂಭವಾದ ಪ್ರಸಕ್ತ ಸಾಲಿನ ಘಾಣ ಹೀಡಿಯುವ 2019 ರ ಹಂಗಾಮಿನ ಮೊದಲ ಎರಡು ತಿಂಗಳಲ್ಲಿ ಸಕ್ಕರೆ ಉತ್ಪಾದನೆಯು ಮಹಾರಾಷ್ಟ್ರದಲ್ಲಿ ಘಾಣ ಹೀಡಿಯಲು ವಿಳಂಬವಾದ ಕಾರಣ 54% ರಷ್ಟು ಇಳಿದು 18.85 ಲಕ್ಷ ಟನ್‌ಗಳಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 40.69 ಲಕ್ಷ ಟನ್ ಸಕ್ಕರೆ ಉತ್ಪಾದಿಸಲಾಗಿತ್ತು. ಭಾರತೀಯ ಸಕ್ಕರೆ ಕಾರ್ಖಾನೆ ಸಂಘಗಳ (ಇಸ್ಮಾ) ಪ್ರಕಾರ, ಪ್ರಸಕ್ತ ಘಾಣ ಹೀಡಿಯುವ ಹಂಗಾಮಿನಲ್ಲಿ ಸಕ್ಕರೆ ಉತ್ಪಾದನೆಯು ಕೇವಲ 260 ಲಕ್ಷ ಟನ್ ಎಂದು ಅಂದಾಜಿಸಲಾಗಿದ್ದರೆ, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು 273 ಲಕ್ಷ ಟನ್ ಎಂದು ಅಂದಾಜಿಸಿದೆ. ಮಹಾರಾಷ್ಟ್ರದ ಕೇವಲ 43 ಸಕ್ಕರೆ ಕಾರ್ಖಾನೆಗಳಲ್ಲಿ ಘಾಣ ಹೀಡಿಯುವಿಕೆ ಪ್ರಾರಂಭವಾಗಿದೆ. ಕಳೆದ ಘಾಣ ಹೀಡಿಯುವ ಹಂಗಾಮಿನಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ 18.89 ಲಕ್ಷ ಟನ್ಗಳಿಗೆ ಹೋಲಿಸಿದರೆ ರಾಜ್ಯವು ನವೆಂಬರ್ 30 ರವರೆಗೆ ಕೇವಲ
67,000 ಟನ್ ಸಕ್ಕರೆಯನ್ನು ಉತ್ಪಾದಿಸಿದೆ. ಆದರೆ, ಉತ್ತರ ಪ್ರದೇಶದಲ್ಲಿ ಈ ಎರಡು ತಿಂಗಳಲ್ಲಿ ಸಕ್ಕರೆ ಉತ್ಪಾದನೆಯು 10.81 ಲಕ್ಷ ಟನ್‌ಗಳಿಗೆ ಏರಿಕೆಯಾಗಿದ್ದು, ಕಳೆದ ವರ್ಷದ ಘಾಣ ಹೀಡಿಯುವ ಅವಧಿಯಲ್ಲಿ ರಾಜ್ಯದಲ್ಲಿ 9.14 ಲಕ್ಷ ಟನ್ ಸಕ್ಕರೆಯಾಗಿದೆ. ಕರ್ನಾಟಕದ 61 ಸಕ್ಕರೆ ಕಾರ್ಖಾನೆಗಳು 5.21 ಲಕ್ಷ ಟನ್ ಸಕ್ಕರೆಯನ್ನು ಉತ್ಪಾದಿಸಿವೆ. ಗುಜರಾತ್‌ನ 14 ಸಕ್ಕರೆ ಕಾರ್ಖಾನೆಗಳಲ್ಲಿ ಘಾಣ ಹೀಡಿಯುವಿಕೆ ಪ್ರಾರಂಭವಾಗಿದ್ದು, ಈವರೆಗೆ 75 ಸಾವಿರ ಟನ್ ಸಕ್ಕರೆ ಉತ್ಪಾದಿಸಲಾಗಿದೆ. ಮೂಲ - ಔಟ್‌ಲುಕ್ ಅಗ್ರಿಕಲ್ಚರ್ , 3 ಡಿಸೆಂಬರ್ 2019 ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
80
0
ಕುರಿತು ಪೋಸ್ಟ್