AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ನಕಲಿ ಬೀಜಗಳ ಮಾರಾಟವನ್ನು ಡಿಸೆಂಬರ್‌ನಿಂದ ನಿಷೇಧಿಸಲಾಗುವುದು!
ಕೃಷಿ ವಾರ್ತಾಔಟ್ ಲುಕ್ ಕೃಷಿ
ನಕಲಿ ಬೀಜಗಳ ಮಾರಾಟವನ್ನು ಡಿಸೆಂಬರ್‌ನಿಂದ ನಿಷೇಧಿಸಲಾಗುವುದು!
ನವದೆಹಲಿ ಪ್ರಮಾಣೀಕೃತ ಬೀಜಗಳ ಮಾರಾಟಕ್ಕಾಗಿ 2019 ರ ಡಿಸೆಂಬರ್‌ನಿಂದ '2 ಡಿ ಬಾರ್ ಕೋಡ್' ಅನ್ನು ಪ್ಯಾಕೆಟ್ / ಚೀಲಕ್ಕೆ ಹಾಕುವುದು ಕಡ್ಡಾಯವಾಗಿರುತ್ತದೆ. ನಕಲಿ ಬೀಜಗಳ ಮಾರಾಟವನ್ನು ನಿಷೇಧಿಸುವ ಗುರಿ ಹೊಂದಿದೆ. ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ .ಬೀಜ ಉತ್ಪಾದಕ ಕಂಪನಿಗಳು 2 ಡಿ ಬಾರ್ ಕೋಡ್‌ನಲ್ಲಿ ಪ್ಯಾಕೆಟ್‌ಗಳು / ಚೀಲಗಳಲ್ಲಿನ ಬೀಜಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡ ಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ಅಲ್ಲದೆ, ಈ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಒದಗಿಸಲು 2 ಡಿ ಬಾರ್ ಕೋಡ್ ನ್ನು ಕೇಂದ್ರ ಪೋರ್ಟಲ್‌ಗೆ ಸಂಪರ್ಕಿಸಲಾಗುತ್ತದೆ. 2 ಡಿ ಬಾರ್ ಕೋಡ್‌ನಲ್ಲಿ, ನಿರ್ಮಾಪಕ ಕಂಪನಿಯು ನಿರ್ಮಾಪಕರ ಸಂಪೂರ್ಣ ವಿವರಗಳು, ಉತ್ಪಾದನಾ ಸ್ಥಳದ ಕೋಡ್, ಸಂಸ್ಕರಣಾ ಘಟಕದ ಕೋಡ್ ನ್ನು ನೀಡಬೇಕಾಗುತ್ತದೆ. ಜಿಎಂ / ಬಿಟಿ ಹತ್ತಿ ಇತ್ಯಾದಿಗಳ ಸಂದರ್ಭದಲ್ಲಿ ಪರಿಸರ ಸಂರಕ್ಷಣಾ ಕಾಯ್ದೆಯ ಪ್ರಕಾರ ಬೀಜ ಸಂಸ್ಕರಣೆ ಮತ್ತು ಇತರ ಮಾಹಿತಿಯನ್ನು ನೀಡುವುದು ಕಡ್ಡಾಯವಾಗಿರುತ್ತದೆ. ಬೀಜ ಕಾಯ್ದೆಯಡಿ ಅಧಿಸೂಚಿಸಲಾದ ತಳಿಗಳು ಮಾತ್ರ ಪ್ರಮಾಣೀಕರಣಕ್ಕೆ ಅರ್ಹವಾಗಿದೆ ಎಂದು ಮಾಹಿತಿ ನೀಡಿದರು. ದೇಶದ 25 ರಾಜ್ಯಗಳಲ್ಲಿ ಬೀಜ ಪ್ರಮಾಣೀಕರಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಮಾಣೀಕೃತ ಏಜೆನ್ಸಿಗಳನ್ನು ಹೊಂದಿರದ ರಾಜ್ಯಗಳಲ್ಲಿ, ಸ್ವತಂತ್ರ ಬೀಜ ಪ್ರಮಾಣೀಕರಣ ಏಜೆನ್ಸಿಗಳನ್ನು ರಚಿಸುವುದಕ್ಕೆ ಒತ್ತು ನೀಡುತ್ತಿದ್ದಾರೆ. ಕೇಂದ್ರ ನೆರವು ನೀಡುವ ಮೂಲಕ ಬೀಜ ಪ್ರಮಾಣೀಕರಣ ಏಜೆನ್ಸಿಗಳನ್ನು ಬಲಪಡಿಸುವ ಅಗತ್ಯವಿದೆ ಮತ್ತು ರೈತರಿಗೆ ಈ ಬೀಜಗಳನ್ನು ಬಳಸಲು ಪ್ರೋತ್ಸಾಹಿಸಲಾಗುತ್ತದೆ. ಮೂಲ - ಔಟ್‌ಲುಕ್ ಅಗ್ರಿಕಲ್ಚರ್ , ೧೧ ನವೆಂಬರ್ ೨೦೧೯ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಈ ಫೋಟೋ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
112
0