AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ನವೆಂಬರ್ನಲ್ಲಿ ಹೊಸ ಬೆಳೆ ಬಂದಾಗ ಮಾತ್ರವೆ ಈರುಳ್ಳಿ ಬೆಲೆಯಲ್ಲಿ ಇಳಿಕೆ ಕಾಣಬಹುದು !
ಕೃಷಿ ವಾರ್ತಾಔಟ್ ಲುಕ್ ಕೃಷಿ
ನವೆಂಬರ್ನಲ್ಲಿ ಹೊಸ ಬೆಳೆ ಬಂದಾಗ ಮಾತ್ರವೆ ಈರುಳ್ಳಿ ಬೆಲೆಯಲ್ಲಿ ಇಳಿಕೆ ಕಾಣಬಹುದು !
ನವದೆಹಲಿ ಈರುಳ್ಳಿ ಬೆಲೆ ಹೆಚ್ಚಿರುವುದರಿಂದ ಜನರು ನವೆಂಬರ್ ಮೊದಲು ಪರಿಹಾರ ಪಡೆಯುವ ನಿರೀಕ್ಷೆಯಿಲ್ಲ. ದೇಶದ ಹೆಚ್ಚಿನ ರಾಜ್ಯಗಳಲ್ಲಿ ಈರುಳ್ಳಿಯ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 70-80 ರೂ. ಬೆಲೆಗಳನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ತನ್ನ ಬಫರ್ ಸ್ಟಾಕ್ನಿಂದ ಪ್ರತಿ ಕೆಜಿಗೆ 23.90 ರೂ.ಗಳ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ. ಅನೇಕ ರಾಜ್ಯದ ಸರ್ಕಾರಗಳು ಸಹ ಇದನ್ನು ಮಾಡುತ್ತಿವೆ. ಸರ್ಕಾರದ 50,000 ಟನ್ ಬಫರ್ ಸ್ಟಾಕ್ನಿಂದ 15,000 ಟನ್ ಈರುಳ್ಳಿ ಮಾರಾಟವಾಗಿದೆ ಎಂದು ನಿತಿ ಆಯೋಗಿನ ಸದಸ್ಯ ರಮೇಶ್ ಚಂದ್ರವರು ಹೇಳಿದ್ದಾರೆ. ನವೆಂಬರ್ ಆರಂಭದಲ್ಲಿ ಹೊಸ ಮುಂಗಾರು ಬೆಳೆ ಮಾರುಕಟ್ಟೆಗೆ ಬಂದ ನಂತರವೇ ಬೆಲೆಗಳು ಸಾಮಾನ್ಯ ಮಟ್ಟಕ್ಕೆ ಬರುತ್ತವೆ ಎಂದು ಅವರು ತಿಳಿಸಿದರು. ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆಯನ್ನು ಹೆಚ್ಚಿಸಲು ಇಬ್ಬರು ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ಮಹಾರಾಷ್ಟ್ರಕ್ಕೆ ಕಳುಹಿಸಲಾಗಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ರವರು ಟ್ವೀಟ್ ಮಾಡಿದ್ದಾರೆ. ಅವರು ಅಲ್ಲಿನ ರೈತರು, ವ್ಯಾಪಾರಿಗಳು ಮತ್ತು ಸಾಗಣೆದಾರರೊಂದಿಗೆ ಮಾತನಾಡಿದ್ದಾರೆ ಮತ್ತು ಈರುಳ್ಳಿಯ ಲಭ್ಯತೆಯನ್ನು ಪರಿಶೀಲಿಸುತ್ತಾರೆ ಮತ್ತು ಹೆಚ್ಚು ಈರುಳ್ಳಿಯನ್ನು ಮಾರುಕಟ್ಟೆಗೆ ತರಲು ಕೇಳುತ್ತಾರೆ. ಇತರ ರಾಜ್ಯಗಳು ತಮ್ಮ ಬೇಡಿಕೆಗಳನ್ನು ಈರುಳ್ಳಿ ಅಗತ್ಯವಿರುವ ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಗೆ ಕಳುಹಿಸಲು ತಿಳಿಸಲಾಗಿದೆ. ಇಲಾಖೆ ತಕ್ಷಣ ಅವರಿಗೆ ಈರುಳ್ಳಿ ನೀಡಲಿದೆ. ಮೂಲ - ಔಟ್ಲುಕ್ ಕೃಷಿ, 26 ಸೆಪ್ಟೆಂಬರ್ 2019
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
150
0