AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಸಾವಯವ ಕೀಟ ನಿಯಂತ್ರಕ (ಅಗ್ನಿಅಸ್ತ್ರ)
ಸಾವಯವ ಕೃಷಿಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಸಾವಯವ ಕೀಟ ನಿಯಂತ್ರಕ (ಅಗ್ನಿಅಸ್ತ್ರ)
ಅಗ್ನಿಅಸ್ತ್ರ ಎಂಬುದು ಕಡಿಮೆ ಬೆಲೆಯಲ್ಲಿ ತಯಾರಿಸಬಹುದಾದ ಸಾವಯವ ಕೀಟ ನಿಯಂತ್ರಕವಾಗಿದೆ. ಈ ಮಿಶ್ರಣವನ್ನು ತಯಾರಿಸುವ ವಿಧಾನವನ್ನು ನಾವು ತಿಳಿದುಕೊಳ್ಳೋಣ. ಬೇಕಾಗಿರುವ ಸಾಮಗ್ರಿಗಳು: • ಗೋಮೂತ್ರ - 200 ಲೀಟರ್ • ರುಬ್ಬಿದ ಬೇವಿನ ಎಲೆಗಳು - 2 ಕಿ.ಗ್ರಾಂ • ತಂಬಾಕು ಪುಡಿ- ½ ಕಿ.ಗ್ರಾಂ • ರುಬ್ಬಿದ ಮೆಣಸಿನಕಾಯಿ- ½ ಕಿ.ಗ್ರಾಂ • ರುಬ್ಬಿದ ಬೆಳ್ಳುಳ್ಳಿ - 125 ಗ್ರಾಂ • ಅರಿಶಿನ ಪುಡಿ- 200 ಗ್ರಾಂ
ತಯಾರಿಸುವ ವಿಧಾನ: ಮೇಲ್ಕಂಡ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಕಟ್ಟಿಗೆಯಿಂದ ಚೆನ್ನಾಗಿ ಕಲಿಸಿರಿ. ಸರಿಯಾಗಿ ಮುಚ್ಚಳ ಮುಚ್ಚಿ ಮಂದ ಉರಿಯಲ್ಲಿ ಕುದಿಸಬೇಕು, ನಂತರ ತಂಪಾಗಲು ಬಿಡಿ. ಪ್ರತಿದಿನ ಎರಡು ಬಾರಿ ಚೆನ್ನಾಗಿ ಕಲಿಸಿರಿ. ಮಿಶ್ರಣವನ್ನು ಮುಚ್ಚಿ ನೆರಳಲ್ಲಿ ಇಡಿ ಮತ್ತು ಅದನ್ನು ಮಳೆ ನೀರಿನಿಂದ ಮತ್ತು ಬಿಸಿಲಿನಿಂದ ಸಂರಕ್ಷಿಸಿಡಿ. ಮಳೆಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ಇದನ್ನು ಎರಡು ದಿನ ಸಂಗ್ರಹಿಸಿ ಮತ್ತು ಚಳಿಗಾಲದಲ್ಲಿ ನಾಲ್ಕು ದಿನ ಸಂಗ್ರಹಿಸಿ ಇಡಿ. ಬಟ್ಟೆಯಿಂದ ಚೆನ್ನಾಗಿ ಸೋಸಿ ಶೇಖರಿಸಿರಿ. ಇದನ್ನು ಮೂರು ತಿಂಗಳವರೆಗೆ ಬಳಸಬಹುದು. ಈ ಮಿಶ್ರಣದ ಉಪಯೋಗದಿಂದ ಬಹುತೇಕ ಎಲ್ಲ ತರಹದ ಕೀಟಗಳನ್ನು ನಿಯಂತ್ರಿಸಬಹುದು. ಬಳಸುವ ವಿಧಾನ: 100-ಲೀಟರ್ ನೀರಲ್ಲಿ 3-ಲೀಟರ್ ಅಗ್ನಿಅಸ್ತ್ರವನ್ನು ಅಥವಾ 15-ಲೀಟರ್ ಪಂಪ್ ನೀರಲ್ಲಿ 300-400 ಮಿ.ಲಿ. ಗ್ರಾಂ ಅಗ್ನಿಅಸ್ತ್ರವನ್ನು ಬೆರೆಸಿ ಮಿಶ್ರಣ ತಯಾರಿಸಿ. ಈ ಮಿಶ್ರಣ ದೊಡ್ಡ ದೊಡ್ಡ ಲಾರ್ವಾ ಮರಿಹುಳುಗಳನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ. ಸಂದರ್ಭ: ಅಗ್ರೋಸ್ಟಾರ್ ಎಕ್ಸೆಲೆನ್ಸ್ ಕೃಷಿ ಕೇಂದ್ರ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
855
3