ಸಲಹಾ ಲೇಖನಅಪನಿ ಖೇತಿ
ಶೇಂಗಾ ಬೆಳೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ
ಲಕ್ಷಣ: ಚುಕ್ಕೆ ರೋಗ ಬಾಧೆಯಿಂದ ಎಲೆಗಳ ಮೆಲ್ಭಾಗದಲ್ಲಿ ತಿಳಿ-ಹಳದಿ ಬಣ್ಣದ ವರ್ತುಲಾಕಾರದ ಕಲೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.
ನಿಯಂತ್ರಣ ವಿಧಾನ: ರೋಗವನ್ನು ನಿಯಂತ್ರಿಸಲು, ಪ್ರಾರಂಭದಿಂದಲೇ ಬೀಜಗಳ ಆಯ್ಕೆಯಿಂದ ಹಿಡಿದು ಕಾಳಜಿ ತೆಗೆದುಕೊಳ್ಳಬೇಕು. ಆರೋಗ್ಯಕರ ಮತ್ತು ಕಲುಷಿತವಿಲ್ಲದ ಬೀಜಗಳನ್ನು ಆಯ್ಕೆಮಾಡಿ. ಬಿತ್ತನೆ ಮಾಡುವ ಮೊದಲು ಬೀಜಗಳನ್ನು, ಥೈರಾಮ್ 75%@5 ಗ್ರಾಂ ಅಥವಾ ಇಂಡೋಫಿಲ್ ಎಮ್-45 (75%)@3 ಗ್ರಾಂ/ಕಿ.ಗ್ರಾಂ ಪ್ರಮಾಣದಿಂದ ಬೀಜೋಪಚಾರ ಮಾಡಬೇಕು. ಪ್ರತಿ ಎಕರೆ ಬೆಳೆಗಳಿಗೆ ಸಲ್ಫರ್ 50 WP@ 500-750 ಗ್ರಾಂ/200-300 ಲೀಟರ್ ನೀರಗೆ ಬೇರೆಸಿ ಸಿಂಪಡಿಸಿ. ಆಗಸ್ಟ್ ಮೊದಲ ವಾರದಿಂದ ೧೫ ದಿನ ಅಂತರದಲ್ಲಿ 3 ಅಥವಾ 4 ಬಾರಿ ಸಿಂಪಡನೆಯನ್ನು ಮಾಡಿ. ಪರ್ಯಾಯವಾಗಿ, ನೀರಾವರಿ ಬೆಳೆಗೆ ಪ್ರತಿ ಎಕರೆಗೆ ಕಾರ್ಬೆನ್ದಝೀಮ್ 50 WP @ 500 ಗ್ರಾಂ/200 ಲೀಟರ್ ನೀರಗೆ ಬೇರೆಸಿ ಸಿಂಪಡಿಸಿ. 40-ದಿನಗಳ ಅವಧಿಯ ಬೆಳೆಗೆ ೧೫-ದಿನದ ಅಂತರದಲ್ಲಿ ಮೂರು ಬಾರಿ ಸಿಂಪಡನೆಯನ್ನು ಮಾಡಿ. ಮೂಲ: ಅಪನಿ ಖೇತಿ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
35
0
ಇತರ ಲೇಖನಗಳು