ಪಶುಸಂಗೋಪನೆಪ್ರಾಣಿ ವಿಜ್ಞಾನ ಕೇಂದ್ರ, ಆನಂದ್ ಕೃಷಿ ವಿಶ್ವವಿದ್ಯಾಲಯ
ಪ್ರವಾಹದ ಸಮಯದಲ್ಲಿ ಜಾನುವಾರುಗಳಿಗಾಗಿ ತೆಗೆದುಕೊಳ್ಳಬೇಕಾಗುವ ಕಾಳಜಿಯ ಸೂಕ್ತ ಕ್ರಮಗಳು
ಪ್ರವಾಹ ಸಂಭವನೀಯತೆ ಸಮಯದಲ್ಲಿ ಜಾನುವಾರು ಸಂರಕ್ಷಣೆಗೆ ಸೂಕ್ತ ಕ್ರಮಗಳು: • ಜಾನುವಾರುಗಳನ್ನು ಕಟ್ಟಿಹಾಕದೆ, ಅವುಗಳನ್ನು ಬಿಚ್ಚಿಬಿಡಿ.. • ಪ್ರವಾಹದ ಜಾಗದಿಂದ ಜಾನುವಾರುಗಳನ್ನು ತಕ್ಷಣವೇ ಎತ್ತರವಾದ ಮತ್ತು ಸುರಕ್ಷಿತ ಜಾಗಕ್ಕೆ ಕರೆದೊಯ್ಯಿರಿ. • ಜಾನುವಾರಗಳನ್ನು ಬೇರೆ ಕಡೆ ಕರೆದೊಯ್ಯುವಾಗ ಅವುಗಳಿಗೆ ಒಣ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಮಾಡಿ.
ಪ್ರವಾಹದ ನಂತರ ಈ ಕೆಳಕಂಡ ಮುನ್ನೆಚ್ಚರಿಕೆಗಳನ್ನು ಅನುಸರಿಸಿ: • ಜಾನುವಾರಗಳು ಕಲುಷಿತ ನೀರನ್ನು ಕುಡಿಯದಂತೆ ಕಾಳಜಿವಹಿಸಿ. • ಪ್ರವಾಹದ ಕಾರಣದಿಂದ ಜಾನುವಾರುಗಳು ನ್ಯೂಮೋನಿಯಾ ಮತ್ತು ಚರ್ಮದ ರೋಗಗಳಿಂದ ಬಳಲುತಿದ್ದರೆ, ಹತ್ತಿರದ ಪಶು ಆಸ್ಪತ್ರೆಯಿಂದ ಪಶುವೈದ್ಯರನ್ನು ಸಂಪರ್ಕಿಸಿ. • ಮೃತ ಜಾನುವಾರುಗಳ ನೋಂದಣಿಗಾಗಿ ತಕ್ಷಣವೆ ಗ್ರಾಮ ಪಂಚಾಯತವನ್ನು ಸಂಪರ್ಕಿಸಿ. ಜಾನುವಾರುಗಳ ಮರಣಾನಂತರದ ಪರೀಕ್ಷೆಯನ್ನು ಸ್ಥಳೀಯ ಪಶುವೈದ್ಯ ಅಧಿಕಾರಿಯಿಂದ ಮಾಡಲಾಗುವುದು, ಇದಕ್ಕಾಗಿ ಯಾವುದೇ ತೊಂದರೆ ಇಲ್ಲದೆ ಸರ್ಕಾರದ ನೆರವು ಸಿಗುತ್ತದೆ. • ಪ್ರವಾಹದ ಸ್ಥಿತಿ ಕಡಿಮೆಯಾದ ನಂತರ ಸ್ಥಳೀಯ ಅಧಿಕಾರಿಗಳಿಂದ ಆದೇಶಗಳನ್ನು ಪಡೆದ ನಂತರ ಮಾತ್ರ, ಜಾನುವಾರುಗಳನ್ನು ತಮ್ಮ ಹಳೆಯ ಜಾಗಕ್ಕೆ ಕರೆದೊಯ್ಯಿರಿ. • ಮಳೆಯಿಂದ ಒಣ ಮೇವು ನೆನೆದಿದ್ದರೆ, ಅದು ಸ್ವಲ್ಪ ಒಣಗಿದ ನಂತರ ಮೇವನ್ನು ಜಾನುವಾರುಗಳಿಗೆ ಹಾಕಿ. ತುಂಬಾನೇ ನೆನೆದಿದ್ದರೆ ಅದನ್ನು ಉಪಯೋಗಿಸಬೇಡಿ. ಮೂಲ: ಪ್ರಾಣಿ ವಿಜ್ಞಾನ ಕೇಂದ್ರ, ಆನಂದ್ ಕೃಷಿ ವಿಶ್ವವಿದ್ಯಾಲಯ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
411
0
ಕುರಿತು ಪೋಸ್ಟ್