AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಹತ್ತಿಯ ಎಲೆಗಳ ಕೆಂಪಾಗುವಿಕೆ ಮತ್ತು ನಿರ್ವಹಣೆ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಹತ್ತಿಯ ಎಲೆಗಳ ಕೆಂಪಾಗುವಿಕೆ ಮತ್ತು ನಿರ್ವಹಣೆ
ಹತ್ತಿಯ ಎಲೆಗಳು ಸಾಮಾನ್ಯವಾಗಿ ಎರಡು ಕಾರಣಗಳಿಂದಾಗಿ ಕೆಂಪಾದಂತೆ ಕಾಣಿಸಿಕೊಳ್ಳುತ್ತವೆ. ಹಸಿರು ಜಿಗಿಹುಳು ವನ್ನು ಸಂಪೂರ್ಣವಾಗಿ ನಿಯಂತ್ರಿಸದಿದ್ದರೆ, ಎಲೆಗಳು ಕೆಂಪಾಗುತ್ತವೆ ಮತ್ತು ಎರಡನೆಯ ಕಾರಣವೆಂದರೆ ಸಸ್ಯ ಗುಣಲಕ್ಷಣಗಳಲ್ಲಿ ಬದಲಾವಣೆ, ವಾತಾವರಣದ ಸ್ಥಿತಿಗಳು ಮತ್ತು ಮುಖ್ಯ / ಲಘು ಪೋಷಕಾಂಶಗಳ ಕೊರತೆ. ರಾತ್ರಿಯ ಉಷ್ಣತೆಯು 21 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆಯಿದ್ದರೆ, ಮತ್ತೆ ಎಲೆ ಕೆಂಪಾಗುವ ಪ್ರಕ್ರಿಯೆಯು ಆರಂಭವಾಗುತ್ತದೆ. ಎಲೆ ಕೆಂಪಾಗಲು ಕಾರಣಗಳನ್ನು ಕಂಡುಹಿಡಿಯಲು, ನಿಮ್ಮ ಅಂಗೈಯಲ್ಲಿ ಕೆಂಪು ಎಲೆಯನ್ನು ಇರಿಸಿ ಮತ್ತು ಮುಷ್ಟಿಯನ್ನು ಮುಚ್ಚಿ ನಂತರ ಮುಷ್ಟಿಯನ್ನು ಬಿಡುಗಡೆ ಮಾಡಿ ಆವಾಗ ಎಲೆಗಳು ಸಣ್ಣ ತುಂಡುಗಳಾಗಿ (ಸಣ್ಣ ತುಂಡುಗಳ ಸಂಖ್ಯೆಗೆ) ತಿರುಗಿದರೆ, ಅದು ಕೆಂಪು ಬಣ್ಣವು ಹಸಿರು ಜಿಗಿ ಹುಳುಗಳು ಸಮಯಕ್ಕೆ ನಿಯಂತ್ರಿಸಿಲ್ಲವೆಂದು ಸೂಚಿಸುತ್ತದೆ. ಮುಷ್ಟಿಯನ್ನು ತೆರೆದ ನಂತರ ಎಲೆ ನಿಮ್ಮ ಅಂಗೈಯಲ್ಲಿ ಚಪ್ಪಟೆಯಾಗಿ ಉಳಿದಿದ್ದರೆ, ಮೇಲೆ ಸೂಚಿಸಿರುವ ಕಾರಣಗಳಿಂದ ಹತ್ತಿಯಲ್ಲಿ ಎಲೆಗಳು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಆರಂಭದಲ್ಲಿ ಎಲೆಗಳ ಅಂಚುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ನಂತರ ಸಿರಾನಾಳಗಳ ನಡುವಿನ ಭಾಗವು ಕೆಂಪು ಬಣ್ಣಕ್ಕೆ ತಿರುಗುತ್ತವೆ ಮತ್ತು ಅಂತಿಮವಾಗಿ ಎಲೆಗಳು ಉದುರಲಾರಂಭಿಸುತ್ತವೆ. ಜಿಗಿಹುಳುಗಳ ನಿಯಂತ್ರಣಕ್ಕೆ ಸೂಕ್ತವಾದ ಕೀಟನಾಶಕವನ್ನು ಬಳಸುವುದು. ಎರಡನೆಯ ಕಾರಣಕ್ಕಾಗಿ, ಇತರ ಕೆಲವು ಹಂತಗಳ ಅಗತ್ಯವಿದೆ. ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿದ ನಂತರ, ಅವು ಮತ್ತೆ ಎಲೆಗಳು ಹಸಿರಾಗಲು ಸಾಧ್ಯವಿಲ್ಲ.
ನಿರ್ವಹಣೆ:_x000D_ 1. ರಸ ಹೀರುವ ಕೀಟಗಳ ನಿಯಂತ್ರಣಕ್ಕೆ ಸೂಕ್ತವಾದ ಕೀಟನಾಶಕಗಳನ್ನು ನಿರಂತರವಾಗಿ ಬಳಸುವುದು._x000D_ 2. ಸಸ್ಯಗಳಿಗೆ ಹೆಚ್ಚಿನ ಪ್ರಮಾಣದ ಸಾರಜನಕವನ್ನು ಒದಗಿಸಿ. ಅಲ್ಲದೆ, 10 ದಿನಗಳ ನಂತರ 1 ರಿಂದ 1.5% ಯೂರಿಯಾವನ್ನು 2 ರಿಂದ 3 ಬಾರಿ ಸಿಂಪಡಿಸಿ. ಯೂರಿಯಾ ಬದಲಿಗೆ ಡಿಎಪಿ @ 2% ಸಹ ಸಿಂಪಡಿಸಬಹುದು._x000D_ 3. ಮೆಗ್ನೀಸಿಯಮ್ ಕೊರತೆಯನ್ನು ತಡೆಗಟ್ಟಲು, ವಾರಕ್ಕೆ ಒಮ್ಮೆ 20 ರಿಂದ 25 ಗ್ರಾಂ ಮೆಗ್ನೀಸಿಯಮ್ ಸಲ್ಫೇಟ್ ಅನ್ನು 10 ರಿಂದ 20 ಲೀಟರ್ ನೀರಿನಲ್ಲಿ ಬೇರೆಸಿ ಸಿಂಪಡಿಸಬೇಕು._x000D_ 4. ಮಣ್ಣಿನ ತೇವಾಂಶದ ಕೊರತೆಯಿದ್ದರೆ ತಕ್ಷಣ ಸಮಯಕ್ಕೆ ಸರಿಯಾಗಿ ಹೊಲಕ್ಕೆ ನೀರನ್ನು ಒದಗಿಸಬೇಕು._x000D_ 5. ನೀರಾವರಿ ಒದಗಿಸಿದಾಗ ನೀರು ಒಂದೇ ಸ್ಥಳದಲ್ಲಿ ನಿಂತಿರಬಾರದು ಎಂಬುದನ್ನು ನೆನಪಿನಲ್ಲಿಡಿ. _x000D_ ನೀರು ನಿಂತಿರುವುದರಿಂದಾಗಿ ಮೆಗ್ನೀಸಿಯಮ್ ಮತ್ತು ಇತರ ಲಘು ಪೋಷಕಾಂಶಗಳ ಕೊರತೆಯಾಗಬಹುದು._x000D_ 6. ಅಗತ್ಯವಿದ್ದರೆ ಆಸ್ಕೋರ್ಬಿಕ್ ಆಸಿಡ್ (ಆಮ್ಲ) 500 ಪಿಪಿಎಂ + ಪಿಎಂಎ 10 ಪಿಪಿಎಂ ಸಿಂಪಡಿಸಬೇಕು._x000D_ 7. ಈ ಸಮಸ್ಯೆ ಪ್ರತಿವರ್ಷ ಮುಂದುವರಿದರೆ, ಮುಂದಿನ ವರ್ಷ ಬಿತ್ತನೆ ಸಮಯದಲ್ಲಿ ಹೆಕ್ಟೇರ್‌ಗೆ ಮೆಗ್ನೀಸಿಯಮ್ ಸಲ್ಫೇಟ್ @ 25 ಕೆ.ಜಿ ಯನ್ನು ರಸಗೊಬ್ಬರದ ಜೊತೆ ಕೊಡಬೇಕು._x000D_ 8. ಹೊಲಗಳಲ್ಲಿ ಯಾವುದೇ ಲಘು ಪೋಷಕಾಂಶಗಳ ಕೊರತೆಯನ್ನು ಕಂಡುಹಿಡಿಯಲು ರೈತರಿಗೆ ಪ್ರಯೋಗಾಲಯಗಳಲ್ಲಿ ಮಣ್ಣಿನ ಪರೀಕ್ಷೆಯನ್ನು ಮಾಡಲು ಸೂಚಿಸಲಾಗಿದೆ._x000D_ ಮೂಲ: ಆಗ್ರೊಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ _x000D_ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ._x000D_
440
5