AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಎಲೆಕೋಸಿನಲ್ಲಿ ವಜ್ರ ಬೆನ್ನಿನ ಪತಂಗದ ಸಮಗ್ರ ಕೀಟ ನಿರ್ವಹಣೆ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಎಲೆಕೋಸಿನಲ್ಲಿ ವಜ್ರ ಬೆನ್ನಿನ ಪತಂಗದ ಸಮಗ್ರ ಕೀಟ ನಿರ್ವಹಣೆ
ಎಲೆಕೋಸು ಸಾಮಾನ್ಯವಾಗಿ ವರ್ಷಪೂರ್ತಿ ಬೆಳೆಯಲಾಗುತ್ತದೆ. ಭಾರತದಲ್ಲಿ, ಎಲೆಕೋಸು 0.31 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 6.87 ಮಿಲಿಯನ್ ಟನ್ ಉತ್ಪಾದನೆಯೊಂದಿಗೆ ಬೆಳೆಯಲಾಗುತ್ತದೆ. ಇದನ್ನು ಗುಜರಾತ್, ಉತ್ತರ ಪ್ರದೇಶ, ಒಡಿಶಾ, ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿಯು ಬೆಳೆಯಲಾಗುತ್ತದೆ. ಈ ರಾಜ್ಯಗಳಲ್ಲಿ, ಕೃಷಿ ಮತ್ತು ಉತ್ಪಾದನೆಯಲ್ಲಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ. ಎಲೆಕೋಸುನಲ್ಲಿ ಕಂಡುಬರುವ ಪ್ರಮುಖ ಕೀಟ ವಜ್ರ ಬೆನ್ನಿನ ಪತಂಗ. ಈ ಕೀಟವನ್ನು ಮೊದಲು ಹರಿಯಾಣದಲ್ಲಿ 1914 ರಲ್ಲಿ ವರದಿ ಮಾಡಲಾಯಿತು ಮತ್ತು ಅಂತಿಮವಾಗಿ ಎಲ್ಲಾ ರಾಜ್ಯಗಳಿಗೂ ಹರಡಿತು. ವಜ್ರ ಬೆನ್ನಿನ ಪತಂಗದ ಜೊತೆಗೆ, ಸಸ್ಯ ಹೇನುಗಳು, ಎಲೆ ತಿನ್ನುವ ಮರಿಹುಳುಗಳು ಮತ್ತು ಎಲೆಕೋಸಿನ ಕೊರಕ ಕೀಟ ಬೆಳೆಯ ಹಾನಿಗೆ ಕಾರಣವಾಗುತ್ತಿದೆ. ಪತಂಗವು ವಿಶ್ರಾಂತಿ ಹಂತದಲ್ಲಿದ್ದಾಗ, ಅದು ವಜ್ರಗಳ ಮಾದರಿಯಾಗಿ ಗೋಚರಿಸುತ್ತದೆ; ಆದ್ದರಿಂದ, ಇದನ್ನು ವಜ್ರ ಬೆನ್ನಿನ ಪತಂಗದ ಎಂದು ಕರೆಯಲಾಗುತ್ತದೆ. ಹಳದಿ-ಹಸಿರು ಮರಿಹುಳುಗಳು ಆರಂಭದಲ್ಲಿ ಎಲೆಗಳ ಪತ್ರ ಹರಿತ್ತಿನ ಅಂಶವನ್ನು ತಿನ್ನುತ್ತವೆ ಮತ್ತು ನಂತರ ಎಲೆಗಳ ಮೇಲೆ ರಂಧ್ರಗಳನ್ನು ಮಾಡುತ್ತವೆ. ಹೆಚ್ಚಿನ ಬಾಧೆಯಾದಲ್ಲಿ, ಇಡೀ ಸಸ್ಯವು ವಿರೂಪಗೊಳ್ಳುತ್ತದೆ ಮತ್ತು ಶಿರನಾಳಗಳು ಮಾತ್ರ ಉಳಿಯುತ್ತವೆ.
ನಿರ್ವಹಣೆ:_x000D_  ಟೊಮ್ಯಾಟೋವನ್ನು ಅಂತರ ಬೆಳೆಯಾಗಿ ಬೆಳೆಸಿ._x000D_  ಸಾಸಿವೆ ಬಲೆ ಬೆಳೆಯಾಗಿ ಬೆಳೆಯಿರಿ._x000D_  ಪ್ರತಿ ಹೆಕ್ಟೇರ್‌ಗೆಮೋಹಕ ಬಲೆಗಳನ್ನು @ 10 ಸ್ಥಾಪಿಸಿ._x000D_  ಪ್ರಾರಂಭದಲ್ಲಿ, ಬೇವಿನ ಬೀಜದ ತಿರುಳಿನ ಕಷಾಯವನ್ನು(5%) 500 ಮಿಲಿ/ ಎಕರೆ ಅಥವಾ ಬ್ಯಾಸಿಲಸ್ ಥುರಿಂಜಿಯೆನ್ಸಿಸ್ ಬ್ಯಾಕ್ಟೀರಿಯಾಧಾರಿತ ಶಿಲಿಂಧ್ರನಾಶಕ ಪುಡಿಯನ್ನು 10 ಲೀಟರ್ ನೀರಿಗೆ 10 ಗ್ರಾಂ ಬೇರೆಸಿ ಸಿಂಪಡಿಸಿ._x000D_  ಕೀಟನಾಶಕ ಅಥವಾ ಸಸ್ಯಜನ್ಯ ಕೀಟನಾಶಕ ದ್ರಾವಣವನ್ನು 10 ಲೀಟರ್ ನೀರಿಗೆ ಯಾವುದೇ ಡಿಟರ್ಜೆಂಟ್ ಪೌಡರ್ 10 ಗ್ರಾಂ ಸೇರಿಸಿ, ಇದು ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ._x000D_  ಈ ಕೀಟವು ಕೀಟನಾಶಕಗಳ ವಿರುದ್ಧ ಬಹಳ ಬೇಗನೆ ಪ್ರತಿರೋಧವನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಆದ್ದರಿಂದ, ಪ್ರತಿ ಸಿಂಪಡಣೆಗೆ ಕೀಟನಾಶಕಗಳನ್ನು ಬದಲಾಯಿಸಿ._x000D_  ಕೊಯ್ಲು ಮಾಡಿದ ನಂತರ ಹೊಲದಲ್ಲಿ ಬಾಧೆಗೊಂಡಿರುವ ಎಲೆಕೋಸಿನ ಗಡ್ಡೆಗಳನ್ನು ಸಂಗ್ರಹಿಸಿ ನಾಶಮಾಡಿ._x000D_  ಕೊಟೇಶಿಯಾ ಪ್ಲುಟೆಲ್ಲಾ ಒಂದು ಪರಾವಲಂಬಿ ಮತ್ತು ವಜ್ರ ಬೆನ್ನಿನ ಪತಂಗಕ್ಕೆ 60% ಪರಾವಲಂಬಿ. ಈ ಪರಾವಲಂಬಿ ಜನಸಂಖ್ಯೆ ಹೆಚ್ಚಿದ್ದರೆ ಕೀಟನಾಶಕ ಬಳಕೆಯನ್ನು ತಪ್ಪಿಸಿ._x000D_  ಹೆಚ್ಚಿನ ಬಾಧೆ ಇದ್ದಲ್ಲಿ, ಕ್ಲೋರ್‌ಪಿರಿಫೊಸ್ 20 ಇಸಿ @ 20 ಮಿಲಿ ಅಥವಾ ಸೈಪರ್‌ಮೆಥ್ರಿನ್ 10 ಇಸಿ @ 10 ಮಿಲಿ ಅಥವಾ ಫೆನ್‌ವಾಲೆರೇಟ್ 20 ಇಸಿ @ 5 ಮಿಲಿ ಅಥವಾ ಕ್ಲೋರಾಂಟ್ರಾನಿಲಿಪ್ರೊಲ್ 18.5 ಎಸ್‌ಸಿ @ 3 ಮಿಲಿ ಅಥವಾ ಕ್ಲೋರ್‌ಫೆನ್‌ಪೈರ್ 10 ಇಸಿ @ 10 ಮಿಲಿ ಅಥವಾ ಸೈಂಟ್ರಾನಿಲಿಪ್ರೊಲ್ 10 ಒಡಿ @ 3 ಮಿಲಿ ಅಥವಾ ಡಯಾಫೆಂಥಿಯುರಾನ್ 50 ಡಬ್ಲ್ಯೂ ಪಿ @ 10 ಗ್ರಾಂ ಅಥವಾ ಎಮಾಮ್ಯಾಕ್ಟಿನ್ ಬೆಂಜೊಯೇಟ್ 5 ಎಸ್ ಜಿ @ 3 ಗ್ರಾಂ ಅಥವಾ ಫೈಪ್ರೋನೀಲ್ 5 ಎಸ್ ಸಿ @ 10 ಮಿಲಿ ಅಥವಾ ಫ್ಲ್ಯೂಬೆಂದಿಮ್ಮಿದೆ 20 ಡಬ್ಲ್ಯೂ ಜಿ @ 2 ಗ್ರಾಂ ಅಥವಾ ಫ್ಲ್ಯೂಬೆಂದಿಮ್ಮಿದೆ 480 ಎಸ್ ಸಿ @ ೩ ಮಿಲಿ ಅಥವಾ ಇಂಡೋಕ್ಸಾಚಾರ್ಬ್ 15.8 ಇಸಿ 5 ಮಿಲಿ ಅಥವಾ ನೋವಲುರೋನ್ 10 ಇಸಿ @ 10 ಮಿಲಿ ಅಥವಾ ಥಿಯೋಡಿಕಾರ್ಬ್ 75 ಡಬ್ಲ್ಯೂ ಪಿ @ 10 ಗ್ರಾಂ ಅಥವಾ ಟೋಲ್ಫೆನ್‌ಪಿರಾಡ್ 15 ಇಸಿ @ 10 ಇಸಿ ಅಥವಾ ಕ್ಲೋರ್‌ಫ್ಲುವಾಜುರಾನ್ 5.4 ಇಸಿ @ 10 ಮಿಲಿ ಅಥವಾ ಪಿರಿಡಿಯಲ್ 10 ಇಸಿ @ 10 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ._x000D_ ಮೂಲ: ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
123
1