ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಬದನೆಯಲ್ಲಿ ಕುಡಿ ಮತ್ತು ಕಾಯಿ ಕೊರೆಯುವ ಹುಳುವಿನ ಸಮಗ್ರ ಕೀಟ ನಿರ್ವಹಣೆ
• ಬದನೆಯಲ್ಲಿ ಕುಡಿ ಮತ್ತು ಕಾಯಿ ಕೊರೆಯುವ ಹುಳುವಿನಿಂದ ಬಾಧೆಗೊಂಡ ಬದನೆಗಳನ್ನು ಕಿತ್ತು ನಾಶ ಪಡಿಸಿ. • ಬದನೆಯಲ್ಲಿ ಹೂಬಿಡುವ ಮೊದಲು, ಎಕರೆಗೆ 4 ರಿಂದ 6 ಫೆರೋಮೋನ್ ಬಲೆಗಳನ್ನು (ವೋಟಾ ಟ್ರ್ಯಾಪ್) ಬಳಸಿ. ಈ ಬಲೆಗೆ ಬೆಳೆಗೆ ಎತ್ತರದಲ್ಲಿರುವ ಕೀಟಗಳು ಬಲೆಗೆ ಆಕರ್ಷಿತವಾಗುತ್ತವೆ. • ಪ್ರತಿ ಎಕರೆಯಲ್ಲಿ ಬೆಳಕಿನ ಬಲೆಯನ್ನು ಸ್ಥಾಪಿಸಿ. • ಕೀಟಗಳನ್ನು ನಿಯಂತ್ರಿಸಲು, ಟ್ರೈಕೊಗ್ರಾಮದ ಚಿಲೊನಿಸ್ ಜಾತಿಯ ಟ್ರೈಕೊ-ಕಾರ್ಡ್ ಅನ್ನು ಎಕರೆಗೆ 2 ರಿಂದ 3 ಸ್ಥಾಪನೆ ಮಾಡಿ.
• ಜೈವಿಕ-ಕೀಟನಾಶಕೆಗಳ ಬಳಕೆ-ಬ್ಯಾಸಿಲಸ್ ಥುರಿಂಗ್ನೆಸಿಸ್ ಬಳಸಿ, ಪ್ರತಿ ಲೀಟರ ನೀರಿಗೆ 10 ಗ್ರಾಂ ಬೆರೆಸಿ ಸಿಂಪಡಿಸಿ. • 15 ದಿನಗಳ ಮಧ್ಯದಲ್ಲಿ ನೀಮಾರಕ್ 5% ಅಥವಾ ಆಜಡಿರಾಕ್ಟಿನ್ (1500 ಪಿಪಿಎಂ) ಲೀಟರ್ ನೀರಿಗೆ 3 ಮಿಲೀ ನೀರನ್ನು ಸಿಂಪಡಿಸಿ. ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
931
5
ಕುರಿತು ಪೋಸ್ಟ್