ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಪಶುಸಂಗೋಪನೆNDDB
ಜಾನುವಾರುಗಳಲ್ಲಿ ಬೇಕಾಗುವ ಪ್ರಮುಖ ಮತ್ತು ಲಘು ಖನಿಜಾಂಶಗಳ ಪ್ರಾಮುಖ್ಯತೆ
ಸಾಮಾನ್ಯವಾಗಿ ದೇಹದ ಬೆಳವಣಿಗೆ ಮತ್ತು ಸಂತಾನೋತ್ಪತ್ತಿಗಾಗಿ ಹಾಲು ನೀಡುವ ಜಾನುವಾರುಗಳಲ್ಲಿ ಪ್ರಮುಖವಾಗಿ ಅದರ ಆಹಾರದಲ್ಲಿ ಸಾಕಷ್ಟು ಖನಿಜಾಂಶಗಳು ಬೇಕಾಗುತ್ತವೆ. ದೊಡ್ಡ ಪ್ರಮಾಣದಲ್ಲಿ ಅಗತ್ಯವಿರುವ ಖನಿಜಾಂಶಗಳು, ಮುಖ್ಯ ಖನಿಜಾಂಶಗಳು ಮತ್ತು ಕಡಿಮೆ ಅಗತ್ಯವಿರುವವುಗಳನ್ನು ಲಘು ಖನಿಜಗಳು ಎಂದು ಕರೆಯಲಾಗುತ್ತದೆ. ಜಾನುವಾರುಗಳಿಗೆ ಬೇಕಾಗುವ ಮುಖ್ಯ ಖನಿಜಾಂಶಗಳು ಕ್ಯಾಲ್ಸಿಯಂ,ರಂಜಕ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸೋಡಿಯಂ, ಕ್ಲೋರಿನ್,ಗಂಧಕ ಮತ್ತು ಲಘು ಖನಿಜಾಂಶಗಳಲ್ಲಿ ಕಬ್ಬಿಣ, ಸತು, ಮ್ಯಾಂಗನೀಸ್, ತಾಮ್ರ, ಅಯೋಡಿನ್, ಕೋಬಾಲ್ಟ್ ಮತ್ತು ಸೆಲೆನಿಯಮ್ಗಳು ಆಗಿವೆ._x000D_ _x000D_ ಜಾನುವಾರುಗಳ ದೇಹದಲ್ಲಿ ಮುಖ್ಯ ಖನಿಜಾಂಶಗಳ ಮತ್ತು ಲಘು ಖನಿಜಾಂಶ ಕಾರ್ಯ:_x000D_ _x000D_ ಕ್ಯಾಲ್ಸಿಯಂ_x000D_ _x000D_ ಹಾಲು ಉತ್ಪಾದನೆಗೆ ಅಗತ್ಯವಿದೆ._x000D_ ಮೂಳೆಗಳು ಮತ್ತು ಹಲ್ಲುಗಳ ರಚನೆಗಾಗಿ ಸಹಾಯವಾಗುತ್ತದೆ._x000D_ ಸ್ನಾಯುಗಳ ಹೇಗೆ ಬೇಕೋ ಹಾಗೆ ಬಾಗಿಸಲು ಸಹಾಯಕವಾಗಿದೆ._x000D_ _x000D_ ರಂಜಕ_x000D_ _x000D_ ದೇಹದಲ್ಲಿನ ಶಕ್ತಿಯ ಬಳಕೆಗಾಗಿ ಅವಶ್ಯಕವಾಗಿದೆ._x000D_ _x000D_ ಮೆಗ್ನೀಸಿಯಮ್_x000D_ _x000D_ ಕಾರ್ಬೋಹೈಡ್ರೇಟ್‌ಗಳು ಮತ್ತು ಹೀರಿಕೊಳ್ಳುವ ಪ್ರಕ್ರಿಯೆ ಮತ್ತು ಪ್ರೋಟೀನ್ ರಚನೆಗೆ ಅಗತ್ಯ._x000D_ _x000D_ ತಾಮ್ರ_x000D_ ಹಿಮೋಗ್ಲೋಬಿನ್ (ರಕ್ತ ಕಣಗಳ) ತಯಾರಿಕೆಗೆ ಅಗತ್ಯ_x000D_ ಸಂತಾನೋತ್ಪತ್ತಿಗೆ ಅವಶ್ಯಕವಾಗಿದೆ._x000D_ _x000D_ ಸತು_x000D_ _x000D_ ವೀರ್ಯಾಣು ರಚನೆ ಮತ್ತು ದೇಹದ ಇತರ ಅಂಗಾಂಶಗಳ ಬೆಳವಣಿಗೆಗೆ ಅಗತ್ಯ._x000D_ ಸಾಮಾನ್ಯವಾಗಿ ಚರ್ಮದ ಕೋಶಗಳ ಕಾರ್ಯನಿರ್ವಹಣೆಗೆ ಅಗತ್ಯ._x000D_ _x000D_ ಮ್ಯಾಂಗನೀಸ್_x000D_ _x000D_ ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳ ಬಳಕೆಯಲ್ಲಿ ಅವಶ್ಯಕವಾಗಿದೆ._x000D_ ಜಾನುವಾರುಗಳ ದೇಹದ ಕೊಬ್ಬಿನಾಮ್ಲಗಳ ತಯಾರಿಕೆಗೆ ಅಗತ್ಯ._x000D_ _x000D_ ಅಯೋಡಿನ್_x000D_ _x000D_ ಥೈರಾಯ್ಡ್ ಹಾರ್ಮೋನಿನ ರಚನೆಗೆ ಅಗತ್ಯವಿದೆ._x000D_ ಪಶುಗಳ ಸಂತಾನೋತ್ಪತ್ತಿ ಮತ್ತು ಅವುಗಳ ಬೆಳವಣಿಗೆಗೆ ಅವಶ್ಯಕವಾಗಿದೆ._x000D_ _x000D_ ಕೋಬಾಲ್ಟ್_x000D_ _x000D_ ಜಾನುವಾರುಗಳು ಮೆಲುಕು ಹಾಕುವಾಗ ಬ್ಯಾಕ್ಟೀರಿಯಾದಿಂದ ವಿಟಮಿನ್ ಬಿ-12 ಲ್ಲಿನ ರಚನೆಗೆ ಅಗತ್ಯವಿದೆ._x000D_ ಹಿಮೋಗ್ಲೋಬಿನ್ (ರಕ್ತ ಕಣಗಳ) ತಯಾರಿಕೆಗೆ ಅಗತ್ಯ_x000D_ _x000D_ ಮೂಲ: ಎನ್‌ಡಿಡಿಬಿ
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
298
0
ಕುರಿತು ಪೋಸ್ಟ್