ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಸಾವಯವ ಕೃಷಿwww.ifoam.bio
ಸಾವಯವ ಕೃಷಿಯಲ್ಲಿ ದ್ವಿದಳ ಧಾನ್ಯದ ಬೆಳೆಗಳ ಪ್ರಾಮುಖ್ಯತೆ
ದ್ವಿದಳ ಧಾನ್ಯದ ಬೆಳೆಗಳು ವಾತಾವರಣದ ಸಾರಜನಕವನ್ನು ಸಾರಜನಕ ಸಂಯುಕ್ತಗಳಾಗಿ (ನೈಟ್ರೋಜನ್ ನಿಂದ ನೈಟ್ರೇಟ್) ಮಾರ್ಪಡಿಸುತ್ತದೆ, ಕೆಲವು ಬಗೆಯ ಬ್ಯಾಕ್ಟೀರಿಯಾಗಳೊಂದಿಗಿನ ಸಹಕಾರಿತ್ವವು ರೈಜೋಬಿಯಂ, ಬ್ರಾಡಿರೈಜೋಬಿಯಂನಂತಹ ಅಣುಜೀವಿಗಳು ಬೆಳೆಯುವ ಸಸ್ಯಗಳಲ್ಲಿ ಸಾರಜನಕದ ಪ್ರಮಾಣವನ್ನು ದೊರಕುವಂತೆ ಮಾಡುತ್ತವೆ. ದ್ವಿದಳ ಧಾನ್ಯಗಳ ಉಪಗುಂಪುಗಳು ಹೊಂದಿರುವ ಧಾನ್ಯದ ಬೆಳೆಗಳು ವರ್ಷಕ್ಕೆ ಪ್ರತಿ ಹೆಕ್ಟೇರಿಗೆ 72 ರಿಂದ 350 ಕೆಜಿ ಸಾರಜನಕವನ್ನು ಲಭ್ಯವಾಗುವಂತೆ ಮಾಡುತ್ತದೆ ಎಂದು ಅಂದಾಜಿಸಲಾಗಿದೆ. ಸಾವಯವ ಕೃಷಿಯಲ್ಲಿ ದ್ವಿದಳ ಧಾನ್ಯದ ಬೆಳೆಗಳು ಹೇಗೆ ಸಹಾಯ ಮಾಡುತ್ತವೆ: ಕೆಲವು ಜಾತಿಯ ದ್ವಿದಳ ಧಾನ್ಯಗಳು ಮಣ್ಣಿನಿಂದ ಬಂಧಿಸಲ್ಪಟ್ಟ ರಂಜಕವನ್ನು ಬಿಡುಗಡೆ ಮಾಡಬಲ್ಲವು, ಇದು ಸಸ್ಯ ಪೋಷಣೆ ಮತ್ತು ನಾವು ಸೇವಿಸುವ ಆಹಾರದಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ಸಾವಯವ ಕೃಷಿಯಲ್ಲಿ ಬೆಳೆ ಪಲ್ಲಟನೆಯು ಮಹತ್ವದ ಪಾತ್ರವಹಿಸುತ್ತವೆ ಮತ್ತು ದ್ವಿದಳ ಧಾನ್ಯಗಳನ್ನು ಒಳಗೊಂಡಿರುವ ಬೆಳೆ ಪಲ್ಲಟನೆಯು ಭವಿಷ್ಯದ ಉತ್ಪಾದನೆಯನ್ನು ಅದೇ ಭೂಮಿಯಲ್ಲಿ ಮುಂದುವರಿಸಲು ಮತ್ತು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಬೆಳೆ ಬೆಳೆಯುವ ವ್ಯವಸ್ಥೆಗಳಲ್ಲಿನ ದ್ವಿದಳ ಧಾನ್ಯಗಳು ಅವುಗಳ ಬೇರಿನ ರಚನೆಯಿಂದಾಗಿ ಹೆಚ್ಚಿನ ಭೂಗತ ಬಳಕೆಯ ದಕ್ಷತೆಯನ್ನು ಶಕ್ತಗೊಳಿಸುತ್ತವೆ ಮತ್ತು ಮಧ್ಯಂತರ ಸಸ್ಯಗಳಾಗಿ ಕಳೆ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಮತ್ತು ರೋಗಗಳು ಮತ್ತು ಕೀಟಗಳಿಂದ ರಕ್ಷಿಸುತ್ತವೆ. ತೊಗರಿಯಂತಹ ಆಳವಾದ ಬೇರೂರಿಸುವ ದ್ವಿದಳ ಧಾನ್ಯಗಳು ಅಂತರಬೆಳೆಯ ಪ್ರಭೇದಗಳಿಗೆ ಅಂತರ್ಜಲವನ್ನು ಪೂರೈಸಬಲ್ಲವು , ಅದಲ್ಲದೆ ದ್ವಿದಳ ಧಾನ್ಯಗಳ ವಿವಿಧ ಪ್ರಾಮುಖ್ಯತೇಗಳ್ಳುಳ್ಳ ಸಾವಯವ ವ್ಯವಸ್ಥೆಗಳಲ್ಲಿ ವಿಭಿನ್ನ ರೀತಿಯಲ್ಲಿ ಬೆಳೆ ಪಲ್ಲಟನೆ, ಅಂತರ ಬೆಳೆ, ಹೊದಿಕೆ ಬೆಳೆಯಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ. ಮೂಲ: www.ifoam.bio
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
152
0
ಕುರಿತು ಪೋಸ್ಟ್