AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ನೆಲಗಡಲೆಯಲ್ಲಿ ಎಲೆ ತಿನ್ನುವ ಕೀಟದ ಹತೋಟಿ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ನೆಲಗಡಲೆಯಲ್ಲಿ ಎಲೆ ತಿನ್ನುವ ಕೀಟದ ಹತೋಟಿ
ಎಲೆ ತಿನ್ನುವ ಮರಿಹುಳುವನ್ನು ಲದ್ದಿ ಹುಳು ಮತ್ತು ರಬ್ಬರ್ ಹುಳು ಎಂದು ಕೂಡಾ ಕರೆಯುತ್ತಾರೆ. ಆದ್ರತೆಯಿಂದ ಕೂಡಿದ ಹವಾಮಾನ ಪರಿಸ್ಥಿತಿಗಳಲ್ಲಿ ಲದ್ದಿ ಹುಳುವಿನ ಬಾಧೆಯು ದೀರ್ಘಕಾಲದವರೆಗೆ ಹೆಚ್ಚಾಗುತ್ತದೆ. ಮರಿಹುಳುಗಳು ಎಲೆಗಳ ಮೇಲಿರುವ ಪತ್ರಹರಿತ್ತು , ಸಸ್ಯದ ಹೊಸತಾಗಿ ಬರುವ ಕೊಂಬೆಗಳನ್ನು ಬಾಧಿಸುತ್ತದೆ. ದೊಡ್ಡ ಮರಿಹುಳುಗಳು ಸಂಪೂರ್ಣವಾಗಿ ಎಲೆಗಳನ್ನು ಬಾಧಿಸುತ್ತವೆ ಮತ್ತು ಎಲೆಗಳನ್ನು ವಿರೂಪಗೊಳಿಸುತ್ತವೆ. ಹಗಲಿನ ವೇಳೆಯಲ್ಲಿ, ಮರಿಹುಳುಗಳು ಮಣ್ಣಿನಲ್ಲಿ ಅಡಗಿಕೊಂಡಿರುತ್ತವೆ ಮತ್ತು ರಾತ್ರಿಯ ಸಮಯದಲ್ಲಿ ಬಕಾಸುರನಂತೇ ತಿನ್ನದು ಬಾಧಿಸುತ್ತವೆ. ಹೂವುಗಳನ್ನು ಮತ್ತು ಕೆಲವೊಮ್ಮೆ ಮಣ್ಣಿನಲ್ಲಿರುವ ನೆಲಗಡಲೆಯ ಕಾಯಿಗಳನ್ನು ಸಹ ತಿನ್ನದು ಬೆಳೆಯಲ್ಲಿ ಹಾನಿಯನ್ನುಂಟು ಮಾಡುತ್ತವೆ . ಆಗಸ್ಟ್-ಸೆಪ್ಟೆಂಬರ್ನಲ್ಲಿ ಬೆಳೆಯ ಮೇಲೆ ಮರಿಹುಳುಗಳ ಸಂಖ್ಯೆ ಹೆಚ್ಚಾಗಿರುತ್ತದೆ. ನಿರ್ವಹಣೆ: ಪ್ರತಿ ಎಕರೆಗೆ @ 1-15 ಮೋಹಕ ಬಲೆಗಳನ್ನು ಸ್ಥಾಪಿಸಿ. ಕೀಟ ಬಾಧೆಯ ಆರಂಭಿಕ ಹಂತದಲ್ಲಿ, ಬೇವಿನ ಬೀಜ ಕಷಾಯವನ್ನು 500 ಮಿಲಿ (5%) ಅಥವಾ ಬೇವಿನ ಆಧಾರಿತ ಸೂತ್ರೀಕರಣವನ್ನು 10 ಲೀಟರ್ ನೀರಿಗೆ 40 ಮಿಲಿ ಬೇರೆಸಿ ಸಿಂಪಡಿಸಿ ಮತ್ತು ಬೌವೇರಿಯಾ ಬಸ್ಸಿಯಾನಾ, ಶಿಲೀಂಧ್ರಧಾರಿತ ಪುಡಿ @ 40 ಗ್ರಾಂ ಅಥವಾ ಬ್ಯಾಸಿಲಸ್ ಥುರಿಂಜಿಯೆನ್ಸಿಸ್, ಬ್ಯಾಕ್ಟೀರಿಯಾ ಆಧಾರಿತ ಪುಡಿ 10 ಲೀಟರ್ ನೀರಿಗೆ 10 ಗ್ರಾಂ ಎನ್ಪಿವಿ 250LE (ಎಲೆ ತಿನ್ನುವ ಮರಿಹುಳುಗಳಿಗೆ) ಹೆಕ್ಟೇರಿಗೆ 450 LE ಗೆ ಸಿಂಪಡಣೆ ಮಾಡಬೇಕು. ಎಲೆ ತಿನ್ನುವ ಮರಿಹುಳುವಿನ ಬಾಧೆ ಹೆಚ್ಚಿನ ಮೇಲೆ, 10 ಲೀಟರ್ ನೀರಿಗೆ ಮೆಥೊಮಿಲ್ 50 ಡಬ್ಲ್ಯೂಪಿ @ 12.5 ಗ್ರಾಂ ಸಿಂಪಡಣೆಯನ್ನು ಮಾಡಬೇಕು. ಕೀಟನಾಶಕಗಳ ಪರಿಣಾಮವನ್ನು ಹೆಚ್ಚಿಸಲು ದ್ರಾವಣದಲ್ಲಿ ಬೆಲ್ಲವನ್ನು ಸೇರಿಸಬೇಕು.
ಮೂಲ: ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
261
2