AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕೇಂದ್ರ ಸರ್ಕಾರ ಅಕ್ಕಿ ರಫ್ತು ನಿಯಮಗಳನ್ನು ಕಡ್ಡಾಯ ಗೊಳಿಸುತ್ತದೆ
ಕೃಷಿ ವಾರ್ತಾಔಟ್ ಲುಕ್ ಕೃಷಿ
ಕೇಂದ್ರ ಸರ್ಕಾರ ಅಕ್ಕಿ ರಫ್ತು ನಿಯಮಗಳನ್ನು ಕಡ್ಡಾಯ ಗೊಳಿಸುತ್ತದೆ
ನವದೆಹಲಿ: ಕೇಂದ್ರ ಸರ್ಕಾರವು ಯುರೋಪಿಯನ್ ಯೂನಿಯನ್ ದೇಶಗಳಿಗೆ ಅಕ್ಕಿ ರಫ್ತು ನಿಯಮಗಳನ್ನು ಕಠಿಣಗೊಳಿಸಿದೆ. ಈ ದೇಶಗಳಿಗೆ ಅಕ್ಕಿ ರಫ್ತು ಮಾಡಲು, ರಫ್ತುದಾರರು ರಫ್ತು ಪರಿಶೀಲನಾ ಸಂಸ್ಥೆ ಅಥವಾ ರಫ್ತು ಪರಿಶೀಲನಾ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆಯುವುದು ಈಗ ಕಡ್ಡಾಯವಾಗಿರುತ್ತದೆ.
ಇದು ಅಕ್ಕಿ ರಫ್ತು ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ. ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್ಟಿ) ಯ ಅಧಿಸೂಚನೆಯ ಪ್ರಕಾರ, ಬಾಸ್ಮತಿ ಮತ್ತು ಬಾಸ್ಮತಿ ಅಲ್ಲದ ಅಕ್ಕಿ ರಫ್ತುಗಾಗಿ ಯುರೋಪಿಯನ್ ಯೂನಿಯನ್ ದೇಶಗಳ ರಫ್ತುದಾರರು ರಫ್ತು ಪರಿಶೀಲನಾ ಸಂಸ್ಥೆ ಅಥವಾ ರಫ್ತು ಪರಿಶೀಲನಾ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ. ಈ ನಿರ್ಧಾರ ತಕ್ಷಣ ಜಾರಿಗೆ ಬಂದಿದೆ. ಅಕ್ಕಿಯಲ್ಲಿನ ಕೀಟನಾಶಕಗಳಿಂದಾಗಿ ತಪಾಸಣೆ ಪ್ರಮಾಣಪತ್ರವನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಈ ನಿರ್ಧಾರವು ಬಾಸ್ಮತಿ ಮತ್ತು ಬಾಸ್ಮತಿ ಅಲ್ಲದ ಅಕ್ಕಿ ರಫ್ತು ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ. ಯುರೋಪಿಯನ್ ಯೂನಿಯನ್ ದೇಶಗಳಿಗೆ ಬಾಸ್ಮತಿ ಅಕ್ಕಿಯ ಒಟ್ಟು ರಫ್ತು ಸುಮಾರು ಮೂರು ಲಕ್ಷ ಟನ್ ಆಗಿದೆ. ಬಾಸ್ಮತಿ ಅಕ್ಕಿ ರಫ್ತು ಇರಾನ್ಗೆ ವ್ಯಾಪಾರವಾಗುತ್ತಿಲ್ಲ, ಸೌದಿ ಅರೇಬಿಯಾ ಕೂಡ ಸೀಮಿತ ರಫ್ತು ಪಡೆಯುತ್ತಿದೆ. ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಬಾಸ್ಮತಿ ಅಕ್ಕಿ ರಫ್ತು ಶೇಕಡಾ 11.33 ರಷ್ಟು ಕುಸಿದಿದೆ ಮತ್ತು ಒಟ್ಟು ರಫ್ತು 18.70 ಲಕ್ಷ ಟನ್ ಆಗಿದೆ. ಮೂಲ - ಔಟ್ಲುಕ್ ಕೃಷಿ, 5 ನವೆಂಬರ್ 2019 ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋದ ಕೆಳಗಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
351
0