ಸಾವಯವ ಕೃಷಿಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಸಾವಯವ ಕೃಷಿ- ಪ್ರಾಮುಖ್ಯತೆ
ಸಾವಯವ ಕೃಷಿಯ ಪ್ರಮುಖ ಪ್ರಯೋಜನವೆಂದರೆ ನೀವು ದೀರ್ಘಕಾಲದವರೆಗೆ ನಿಮ್ಮ ತೋಟದ ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸಬಹುದು, ಇದರಿಂದಾಗಿ ರಾಸಾಯನಿಕ ಗೊಬ್ಬರಗಳ ಬಳಕೆ ಇಲ್ಲದೆ ಕೂಡ ಲಾಭದಾಯಕವಾಗಿಸಬಹುದು.  ನಿಮ್ಮ ತೋಟಗಳಲ್ಲಿ ಸಾವಯವ ಕೃಷಿಯಿಂದ ಮಣ್ಣಿನ ಫಲವತ್ತತೆಯ ಕಾರಣದಿಂದ ನೀವು ಈ ಹಿಂದೆ ಬಿತ್ತದೆ ಇರುವಂತಹ ಬೆಳೆಗಳನ್ನು ಸಹ ಬಿತ್ತನೆ ಮಾಡಬಹುದು.  ಸಾವಯವ ಕೃಷಿಯಿಂದ ಪ್ರಾಣಿಗಳು ಸೇವಿಸುವ ಮೇವು ಸಹ ರಾಸಾಯನಿಕ ರಹಿತವಾಗಿರುವ ಕಾರಣದಿಂದ ಸುಧಾರಿತ ಗುಣಮಟ್ಟದ ಹಾಲು ಮತ್ತು ಉತ್ತಮ ಆರೋಗ್ಯ ಕಾಣಬಹುದು.  ಇದು ಪ್ರಾಣಿಗಳ ಮೇಲೆ ಮತ್ತು ಮನುಷ್ಯನ ಆರೋಗ್ಯದ ಮೇಲೆ ದೀರ್ಘಕಾಲದ ಪರಿಣಾಮಗಳನ್ನು ಬೀರುತ್ತದೆ, ಅದನ್ನು ಅನೇಕ ರೋಗಗಳಿಂದ ತಡೆಗಟ್ಟಬಹುದು ಮತ್ತು ಅವರ ಆರೋಗ್ಯವನ್ನು ಗುಣಪಡಿಸಬಹುದು.  ಸಾವಯವ ಕೃಷಿಯಿಂದಾಗಿ ಆರಂಭಿಕ ಹಂತದಲ್ಲಿ ಕೆಲವು ಸಮಸ್ಯೆ ಎದುರಿಸಬಹುದು ಆದರೆ ದೀರ್ಘಾವಧಿಯವರೆಗೆ ನಿಮ್ಮ ಬೆಳೆಗಳ ಗುಣಮಟ್ಟ ಉತ್ತಮವಾಗಿರುತ್ತದೆ ಮತ್ತು ನೀವು ಉತ್ತಮ ಲಾಭ ಪಡೆಯಬಹುದು. ಮೂಲ - ಅಗ್ರೋಸ್ಟಾರ ಅಗ್ರೋನೋಮಿ ಎಕ್ಸೆಲೆನ್ಸ್ ಕೇಂದ್ರ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
603
2
ಕುರಿತು ಪೋಸ್ಟ್