ಸೋಯಾಬೀನ್ ಕೊಯ್ಲು ಮಾಡುವ ಸಮಯದಲ್ಲಿ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಸೋಯಾಬೀನ್ ಕೊಯ್ಲು ಮಾಡುವ ಸಮಯದಲ್ಲಿ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ
ಮೊಳಕೆಯೊಡೆಯುವಿಕೆ ಮತ್ತು ಮುಂಬರುವ ವರ್ಷಗಳಲ್ಲಿ ಉತ್ಪಾದನೆಗಾಗಿ ಉಪಯೋಗಿಸುವ ಬೆಳೆಗಳ ಗುಣಮಟ್ಟದ ದೃಷ್ಟಿಯಿಂದ ಸೋಯಾಬೀನ್ ಕಾಯಿ ಮಾಗುವುದರಿಂದ ಹಿಡಿದು ಕೊಯ್ಲು ಮಾಡುವ ತನಕ ಹವಾಮಾನ ಪರಿಸ್ಥಿತಿಗಳು ಬಹಳ ಮುಖ್ಯವಾಗಿವೆ.ಈ ಬೆಳೆಯ ಮಾಗಿದ ಹಂತದಲ್ಲಿ, ಬೀಜದಲ್ಲಿನ ತೇವಾಂಶ ಕಡಿಮೆಯಾಗುತ್ತದೆ. ಈ ಅವಧಿಯಲ್ಲಿ, ನಿರಂತರ ಮಳೆಯು ಬೆಳೆಗೆ ಅತ್ಯಂತ ಹಾನಿಕಾರಕವಾಗಿದೆ. ಮಳೆಗಾಲದಲ್ಲಿ ಇಂತಹ ಹಾನಿಯನ್ನು ತಪ್ಪಿಸಲು ಬೆಳೆ ಬಲಿತಾಗ ಮತ್ತು ಬೀಜಗಳ ತೇವಾಂಶವು ಸಾಮಾನ್ಯವಾಗಿ 14-16% ರ ನಡುವೆ ಇರುವಾಗ ಕೊಯ್ಲು ಮಾಡುವುದು ಅಥವಾ ಕೊಯ್ಯಲು ತೆಗೆಯುವುದು ಅಗತ್ಯವಾಗಿರುತ್ತದೆ.
ಬೆಳೆ ಕೊಯ್ಲು ಮಾಡುವಾಗ, ಹೊಲದಲ್ಲಿ ಕಳೆಗಳಿದ್ದರೆ ಅದನ್ನು ಬೆಳೆಯೊಂದಿಗೆ ಕಟಾವು ಮಾಡದಂತೆ ಕಾಳಜಿವಹಿಸಬೇಕು. ಹೊಲದಲ್ಲಿನ ಬಾಧೆಗೊಂಡ ಬೆಳೆಗಳನ್ನು ಕೊಯ್ಲು ಮಾಡುವ ಮೊದಲು ಬೇರುಸಹಿತ ಕಿತ್ತು ನಾಶಪಡಿಸಬೇಕು. ಅಲ್ಲದೆ, ಕಾಯಿಗಳಲ್ಲಿ ಧಾನ್ಯ ತುಂಬುವಾಗ ಡೈಥೇನ್-ಎಂ -45 @ 25-35 ಗ್ರಾಂ ಶಿಲೀಂಧ್ರನಾಶಕವನ್ನು ಪ್ರತಿ ಪಂಪ್ ಪ್ರಮಾಣದಂತೆ ಸಿಂಪಡನೆ ಮಾಡಬೇಕು. ಇದು ಬೀಜಗಳನ್ನು ಶಿಲೀಂಧ್ರ ರೋಗಗಳಿಂದ ನಿಯಂತ್ರಿಸುವ ಮೂಲಕ ಮೊಳಕೆಯೊಡೆಯುವುದನ್ನು ಹೆಚ್ಚಿಸುತ್ತದೆ. ಕುಡಗೋಲೀನ ಸಹಾಯದಿಂದ ಬೆಳೆ ಕೊಯ್ಲು ಮಾಡಬೇಕು. ಕೊಯ್ಲು ಮಾಡುವಾಗ ಬೆಳೆಗಳು ಬೇರುಸಹಿತ ಕೀಳದಂತೆ ಅಥವಾ ಕಲ್ಲುಗಳು ಬೀಜದೊಂದಿಗೆ ಸೇರದಂತೆ ನೋಡಿಕೊಳ್ಳಬೇಕು. ಕೊಯ್ಲು ಮಾಡಿದ ಬೆಳೆಯನ್ನು ತಕ್ಷಣವೇ ರಾಶಿಯಾಗಿ ಒಂದರ ಮೇಲೆ ಒಂದು ಇಡಬಾರದು, ಇದರಿಂದ ಬೀಜ ಮತ್ತು ಮೊಳಕೆಯೊಡೆಯುವಿಕೆಯ ಮೇಲೆ ಪರಿಣಾಮ ಬೀರುತ್ತದೆ; ಅದರ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಅದನ್ನು ಬಿಸಿಲಿನಲ್ಲಿ ಒಣಗಿಸಬೇಕು. ಸೋಯಾಬೀನ್ನ್ನು ಹೆಚ್ಚಿನ ಪ್ರದೇಶದಲ್ಲಿ ಬಿತ್ತಿದರೆ, ಸಮಯ ಮತ್ತು ವೆಚ್ಚವನ್ನು ಉಳಿಸುವ 'ಕಂಬೈನ್ ಹಾರ್ವೆಸ್ಟರ್' ಸಹಾಯದಿಂದ ಕೊಯ್ಲು ಮಾಡುವುದು ಉತ್ತಮ. ಈ ಸಮಯದಲ್ಲಿ, ಕೊಯ್ಲು ಮಾಡುವಾಗ ಬ್ಲೇಡ್ಗಳು ನೆಲಮಟ್ಟಕ್ಕಿಂತ 8 ರಿಂದ 10 ಸೆಂ.ಮೀ ಮೇಲ್ಭಾಗದ ಅಂತರದಲ್ಲಿರಬೇಕು ಮತ್ತು ಯಂತ್ರವು ಮಧ್ಯಮ ವೇಗದಲ್ಲಿರಬೇಕು. ಈ ರೀತಿಯಾಗಿ, ಸೋಯಾಬೀನ್ ಬೆಳೆಯ ಕೊಯ್ಲನ್ನು ಮಾಡುವಾಗ ಕಾಳಜಿ ಪೂರ್ವಕವಾಗಿ ಕ್ರಮಗಳನ್ನು ಅನುಸರಿಸಿ ಮಾಡಬೇಕು._x000D_ ಮೂಲ: ಅಗ್ರೋಸ್ಟಾರ್ ಅಗ್ರೋನೋಮಿ ಸೆಂಟರ್ ಆಫ್ ಎಕ್ಸಲೆನ್ಸ್_x000D_ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
427
3
ಇತರ ಲೇಖನಗಳು