ಗೆರ್ಬೆರಾದಲ್ಲಿ ಗುಣಮಟ್ಟದ ಹೂವಿನ ಉತ್ಪಾದನಾ ತಂತ್ರಜ್ಞಾನಗಳು
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಗೆರ್ಬೆರಾದಲ್ಲಿ ಗುಣಮಟ್ಟದ ಹೂವಿನ ಉತ್ಪಾದನಾ ತಂತ್ರಜ್ಞಾನಗಳು
ಹಸಿರುಮನೆಯಲ್ಲಿ ಗೆರ್ಬೆರಾ ಬೆಳೆಯಲು, ಉತ್ತಮವಾಗಿ ನೀರು ಬಸಿದು ಹೋಗುವ ಪ್ರದೇಶವನ್ನು ಆಯ್ಕೆಮಾಡಬೇಕು. ಗುಣಮಟ್ಟದ ಹೂಬಿಡುವಿಕೆಯ ಉತ್ಪಾದನೆಗೆ, ಹಸಿರುಮನೆಯಲ್ಲಿ ಅಂಗಾಂಶ ಕೃಷಿಯಿಂದ ಕಸಿ ಮಾಡಿದ ಸಸಿಗಳನ್ನು ನಾಟಿಬೇಕು. ಸುಧಾರಿತ ತಂತ್ರಜ್ಞಾನದಿಂದ ಈ ಬೆಳೆಯನ್ನು ಬೆಳೆದರೆ ಹೆಚ್ಚಿನ ಇಳುವರಿಯನ್ನು ಪಡೆಯಬಹುದು . ತಳಿಯ ಆಯ್ಕೆ: ಮಾರುಕಟ್ಟೆ ಅಥವಾ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತಳಿಗಳನ್ನು ಆಯ್ಕೆ ಮಾಡಬೇಕು. ತೋಟದ ಆಯ್ಕೆ : ಗೆರ್ಬೆರಾ ಕೃಷಿಗಾಗಿ ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣಿನ ಆಯ್ಕೆಯನ್ನು ಮಾಡಿ (ಮಣ್ಣಿನ ರಸ ಸಾರವು 5.5 ರಿಂದ 6.0). ನಾಟಿ: ಮಣ್ಣಿನ್ನು ನಿರ್ಜನತುಕರಣ ಮಾಡಿದ ನಂತರ, ತಜ್ಞರೊಂದಿಗೆ ಸಮಾಲೋಚಿಸಿ ಸಸಿಯನ್ನು 30 ಸೆಂ.ಮೀ x 30 ಸೆಂ.ಮೀ ಅಂತರದಲ್ಲಿ ನೆಡಬೇಕು. ಅಂಗಾಂಶ ಕೃಷಿ ತಂತ್ರಜ್ಞಾನವನ್ನು ಬಳಸಿ ತಯಾರಿಸಿದ ಸಸಿಗಳನ್ನು ಆಯ್ಕೆಮಾಡಿ. ಹಸಿರುಮನೆಯಲ್ಲಿ ಸಸಿಗಳನ್ನು ಹೆಚ್ಚಿನ ಆಳದಲ್ಲಿ ನೆಡಬೇಡಿ ಮತ್ತು ಸೂಕ್ತ ಸಂಖ್ಯೆಯಲ್ಲಿ ಸಸಿಗಳನ್ನು ನೆಡಬೇಕು. ನೀರಿನ ನಿರ್ವಹಣೆ: ಬೆಳೆ ಸ್ಥಿತಿ ಅಥವಾ ಅಗತ್ಯಕ್ಕೆ ಅನುಗುಣವಾಗಿ ಎಲ್ಲಾ ಬೆಳೆ ಹಂತದಲ್ಲಿ ನೀರನ್ನು ಒದಗಿಸಿ. ರಸಗೊಬ್ಬರ ನಿರ್ವಹಣೆ: ಕೊಟ್ಟಿಗೆ ಗೊಬ್ಬರದ ಜೊತೆಗೆ ಟ್ರೈಕೋಡೆರ್ಮಾ ವಿರಿಡೆ@ ೧ಕೆಜಿ ,ಬಸಿಲೊಮೈಸಿಸ್@೧ಕೆಜಿ ಮತ್ತು ಬೇವಿನ ಹಿಂಡಿಯನ್ನು ಚೆನ್ನಾಗಿ ಮಿಶ್ರಣ ಮಾಡಿ ಮಣ್ಣಿನ ಮೂಲಕ ಕೊಡಬೇಕು. ಮಣ್ಣಿನ ಪರೀಕ್ಷೆಯ ಪ್ರಕಾರ, ಗೊಬ್ಬರದ ಬಳಕೆಯನ್ನು ಮಾಡಬೇಕು. ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ, 19:19:19 @ 2 ಕೆಜಿಯನ್ನು 4 ದಿನಗಳ ಮಧ್ಯಂತರದಲ್ಲಿ ನೀಡಬೇಕು. ಹೂಬಿಡುವ ನಂತರ, ಹೆಚ್ಚಿನ ಹೂಬಿಡುವಿಕೆಗಾಗಿ ಪ್ರತಿ ಎಕರೆಗೆ 12:61:00 @ 3 ಕೆಜಿ 5 ರಿಂದ 6 ದಿನಗಳ ಮಧ್ಯಂತರದಲ್ಲಿ ನೀಡಬೇಕು. ರಸಗೊಬ್ಬರಗಳ ಜೊತೆಗೆ, ಹೂಬಿಡುವ ಮೊದಲು ಅಥವಾ ಹೂಬಿಡುವ ಹಂತದ ನಂತರ ಲಘು ಪೋಷಕಾಂಶಗಳನ್ನು ಸಹ ಒದಗಿಸಬೇಕು, ಅಂದರೆ ಬೋರಾನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಇತ್ಯಾದಿ. ಬೋರಾನ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ನ್ನು ಒಂದು ಲೀಟರ್ ನೀರಿಗೆ ತಿಂಗಳಿಗೊಮ್ಮೆ ಸಿಂಪಡಿಸಿ. ಇದಲ್ಲದೆ, ಹೂಬಿಡುವಿಕೆಗಾಗಿ, ಪ್ರತಿ ಎಕರೆಗೆ 13:00:45 @ 3 ಕೆಜಿ ಎಕರೆಗೆ 5 ರಿಂದ 6 ದಿನಗಳ ಮಧ್ಯಂತರದಲ್ಲಿ ನೀಡಬೇಕು. ಉತ್ತಮ ಗುಣಮಟ್ಟದ ಹೂವುಗಳಿಗಾಗಿ ಹನಿ ನೀರಾವರಿ ಮೂಲಕ ಲಘು ಪೋಷಕಾಂಶಗಳನ್ನು ಒದಗಿಸಬೇಕು. ಇದು ಹೂವುಗಳ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಕೊಯ್ಲು ತೆಗೆದ ನಂತರದ ಕಾಳಜಿ : ಗೆರ್ಬೆರಾ ಹೂವುಗಳನ್ನು ಸಾಮಾನ್ಯವಾಗಿ 8 ರಿಂದ 10 ವಾರಗಳ ನಂತರ ಹೂವನ್ನು ಗಿಡದಿಂದ ಕೀಳಬೇಕು. ಹೂವಿನ ಎರಡು ದಳಗಳ ಪದರಗಳನ್ನು ಬಂದ ನಂತರ, ಆ ಕ್ಷಣದಲ್ಲಿಯೇ ಹೂವುಗಳನ್ನು ಮಾತ್ರ ಕೊಯ್ಲು ಮಾಡಬೇಕು. ನೆಲದಿಂದ ಮೇಲಿನ ಭಾಗದ ಡೇಟನ್ನು ಹಿಡಿದು ಕೆಳಗೆ 3 ರಿಂದ 4 ಸೆಂ.ಮೀ ಅಂತರದಲ್ಲಿ ಹೂವುಗಳನ್ನು ಕತ್ತರಿಸಬೇಕು. ಸಾಮಾನ್ಯವಾಗಿ, ಹೂವುಗಳನ್ನು ಬೆಳಿಗ್ಗೆ ಸಮಯದಲ್ಲಿ ಕೀಳಬೇಕು. ಹೂವುಗಳನ್ನು ಕತ್ತರಿಸಿದ ಮೇಲೆ ದೇಟಿನ ತುದಿಗಳನ್ನು ನೀರಿನಲ್ಲಿ ಅದ್ದಿ ಮತ್ತು ಅವುಗಳನ್ನು ಬಕೆಟ್ನಲ್ಲಿ ಇಡಬೇಕು . ಹೂವುಗಳನ್ನು ತಾಜಾ ಮತ್ತು ಆರೋಗ್ಯಕರವಾಗಿಡಲು, ನೀರಿನಲ್ಲಿ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣವನ್ನು ಪ್ರತಿ ಲೀಟರ್‌ಗೆ 7 ರಿಂದ 10 ಮಿಲಿ ದ್ರಾವಣವನ್ನು ತಯಾರಿಸಿ ಮತ್ತು ಅದರಲ್ಲಿ ಹೂವಿನ ದೇಟುಗಳು ದ್ರಾವಣದಲ್ಲಿ ಅದ್ದು ಇಡಬೇಕು. ಗೆರ್ಬೆರಾ ಹೂವಿನ ಕೊಯ್ಯಲು ತೆಗೆದ ನಂತರ ದ್ರಾವಣವನ್ನು ಪ್ರತಿಯೊಂದು ಸಲ ಬದಲಾಯಿಸಬೇಕು. ಮೂಲ: ಅಗ್ರೋಸ್ಟಾರ್ ಅಗ್ರೋನೋಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
133
0
ಇತರ ಲೇಖನಗಳು