AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಹಿಂಗಾರಿನ ಬೆಳೆಗಳ ಬಿತ್ತನೆ 600 ಲಕ್ಷ ಹೆಕ್ಟೇರ್ ಮೀರಿದೆ
ಕೃಷಿ ವಾರ್ತಾಔಟ್ ಲುಕ್ ಕೃಷಿ
ಹಿಂಗಾರಿನ ಬೆಳೆಗಳ ಬಿತ್ತನೆ 600 ಲಕ್ಷ ಹೆಕ್ಟೇರ್ ಮೀರಿದೆ
ನವದೆಹಲಿ ಪ್ರಸಕ್ತ ಹಿಂಗಾರಿನ ಹಂಗಾಮಿನಲ್ಲಿ ಬೆಳೆಗಳ ಬಿತ್ತನೆ 600.32 ಲಕ್ಷ ಹೆಕ್ಟೇರ್‌ಗೆ ಏರಿದೆ, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 38.37 ಲಕ್ಷ ಹೆಕ್ಟೇರ್ ಹೆಚ್ಚಾಗಿದೆ. ಕಳೆದ ವರ್ಷ ಈ ಹೊತ್ತಿಗೆ 561.95 ಲಕ್ಷ ಹೆಕ್ಟೇರ್ ಬೆಳೆಗಳನ್ನು ಮಾತ್ರ ಬಿತ್ತಲಾಗಿದೆ. ಅಕ್ಟೋಬರ್ ಮತ್ತು ನವೆಂಬರನಲ್ಲಿ ಹಲವಾರು ರಾಜ್ಯಗಳಲ್ಲಿ ಮಳೆಯಿಂದಾಗಿ ಗೋಧಿಯೊಂದಿಗೆ ದ್ವಿದಳ ಧಾನ್ಯಗಳು ಮತ್ತು ಕಿರು
ಧಾನ್ಯಗಳ ಬಿತ್ತನೆ ಹೆಚ್ಚಾಗಿದೆ._x000D_ _x000D_ ಕೃಷಿ ಸಚಿವಾಲಯದ ಪ್ರಕಾರ, ಪ್ರಮುಖ ಹಿಂಗಾರಿನ ಬೆಳೆಯಾದ ಗೋಧಿ ಬಿತ್ತನೆ ಪ್ರಸಕ್ತ ಹಂಗಾಮಿನಲ್ಲಿ 312.81 ಲಕ್ಷ ಹೆಕ್ಟೇರ್‌ಗೆ ಏರಿದೆ, ಇದು ಸಾಮಾನ್ಯ ಪ್ರದೇಶಕ್ಕಿಂತ 305.58 ಲಕ್ಷ ಹೆಕ್ಟೇರ್ ಪ್ರದೇಶಕ್ಕಿಂತ ಹೆಚ್ಚಾಗಿದೆ. ಕಳೆದ ವರ್ಷ ಈ ವೇಳೆಯಲ್ಲಿ 286.23 ಲಕ್ಷ ಹೆಕ್ಟೇರ್‌ನಲ್ಲಿ ಗೋಧಿ ಬಿತ್ತನೆ ಮಾಡಲಾಯಿತು. ಹಿಂಗಾರಿನ ಹಂಗಾಮಿನಲ್ಲಿ ದ್ವಿದಳ ಧಾನ್ಯಗಳ ಬಿತ್ತನೆ 146.24 ಲಕ್ಷ ಹೆಕ್ಟೇರ್‌ಗೆ ಏರಿದೆ._x000D_ _x000D_ ಹಿಂಗಾರಿನ ದ್ವಿದಳ ಧಾನ್ಯಗಳ ಮುಖ್ಯ ಬೆಳೆಯಾದ ಕಡಲೆ ಬಿತ್ತನೆ ಕಳೆದ ವರ್ಷ 93.19 ಲಕ್ಷ ಹೆಕ್ಟೇರ್‌ನಿಂದ 98.52 ಲಕ್ಷ ಹೆಕ್ಟೇರ್‌ಗೆ ಏರಿದೆ. ಹಿಂಗಾರಿನಲ್ಲಿ 15.46 ಲಕ್ಷ ಹೆಕ್ಟೇರ್ ಮತ್ತು 9.27 ಲಕ್ಷ ಹೆಕ್ಟೇರ್ ಚೆನ್ನಂಗಿಯ ಬಿತ್ತನೆ ಮಾಡಲಾಗಿದೆ. ಉದ್ದು ಮತ್ತು ಹೆಸರನ್ನು ಕ್ರಮವಾಗಿ 6.42 ಮತ್ತು 3.31 ಲಕ್ಷ ಹೆಕ್ಟೇರ್ನಲ್ಲಿ ಬಿತ್ತಲಾಗಿದೆ. ಪ್ರಸಕ್ತ ಹಿಂಗಾರಿನ ಹಂಗಾಮಿನಲ್ಲಿ ಸಿರಿ ಧಾನ್ಯಗಳ ಬಿತ್ತನೆ 49.40 ಲಕ್ಷ ಹೆಕ್ಟೇರ್‌ಗೆ ಏರಿದೆ._x000D_ _x000D_ ಮೂಲ - ಔಟ್‌ಲುಕ್ ಅಗ್ರಿಕಲ್ಚರ್ , 3 ಜನವರಿ 2020_x000D_ _x000D_ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳಿನ ಗುರುತು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ._x000D_
1274
0