AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಹಸು ಮತ್ತು ಎಮ್ಮೆಗಳಿಗಾಗಿ ನೀರಿನ ನಿರ್ವಹಣೆ
ಪಶುಸಂಗೋಪನೆಅಗ್ರೋವನ್
ಹಸು ಮತ್ತು ಎಮ್ಮೆಗಳಿಗಾಗಿ ನೀರಿನ ನಿರ್ವಹಣೆ
ಹಾಲು ಕೊಡುವ ಜಾನುವಾರುಗಳಿಗೆ ಯಾವಾಗಲೂ ಸ್ವಚ್ಛ ಮತ್ತು ತಾಜಾ ನೀರು ಕೊಡಿ. ನೀರು ತುಂಬಾ ತಣ್ಣಗಾಗಬಾರದು. ಕುಡಿಯುವ ನೀರಿನ ತಾಪಮಾನವು 16 ರಿಂದ 26 ಡಿಗ್ರಿ ಸೆಲ್ಸಿಯಸ್ ನಡುವೆ ಇರಬೇಕು. ದಿನಾಲು ಕನಿಷ್ಠ ಮೂರು ಬಾರಿ ನೀರನ್ನುಜಾನುವಾರುಗಳಿಗೆ ಕೊಡಬೇಕು. 1. ಬೇಸಿಗೆಯ ದಿನದಲ್ಲಿ ದಿನಕ್ಕೆ ನಾಲ್ಕು ಬಾರಿ ಹಾಲು ಕೊಡುವ ಜಾನುವಾರುಗಳಿಗೆ ನೀರನ್ನು ನೀಡುವುದರ ಮೂಲಕ ಹಾಲಿನ ಪ್ರಮಾಣವನ್ನು ಹೆಚ್ಚಿಸಬಹುದು. ಅದರಿಂದಾಗಿ ಜಾನುವಾರುಗಳು 15 ರಿಂದ 20 ರಷ್ಟು % ಹೆಚ್ಚು ಹಾಲು ನೀಡುತ್ತವೆ. 2. ಜಾನುವಾರುಗಳ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಹಸಿರು ಮೇವು ಇದ್ದರೆ, ನಂತರ ಅವುಗಳು ಕಡಿಮೆ ನೀರನ್ನು ಕುಡಿಯುತ್ತವೆ ಏಕೆಂದರೆ ಹಸಿರು ಮೇವು 65 ರಿಂದ 85 ಪ್ರತಿಶತದಷ್ಟು ನೀರು ಹೊಂದಿರುತ್ತವೆ. ಶುಷ್ಕ ಭಾಗವು 15 ರಿಂದ 35 ರಷ್ಟು ಇರುತ್ತದೆ. ಬೇಸಿಗೆಯಲ್ಲಿ ಹಸಿರು ಮೇವು ಕೊರತೆ ಇರುತ್ತದೆ, ಆದ್ದರಿಂದ ಈ ಸಮಯದಲ್ಲಿ ಬಹಳಷ್ಟು ಮೇವಿನ ಬರಗಾಲವಿರುತ್ತದೆ. ಆದ್ದರಿಂದ ಜಾನುವಾರುಗಳು ಹೆಚ್ಚು ನೀರನ್ನು ಬೇಸಿಗೆಯಲ್ಲಿ ಕುಡಿಯುತ್ತವೆ. 3. ಒಣ ಮೇವು 10 ರಿಂದ 15 ಪ್ರತಿಶತ ತೇವಾಂಶವನ್ನು ಹೊಂದಿರುತ್ತದೆ. ೧ ಕೆಜಿ ಒಣ ಆಹಾರದ ಜೀರ್ಣಕ್ರಿಯೆಗಾಗಿ 4 ರಿಂದ 5 ಲೀಟರ್ಗಳಷ್ಟು ನೀರನ್ನು ಜಾನುವಾರುಗಳಿಗೆ ಕೊಡುವುದು ಅವಶ್ಯಕವಾಗಿರುತ್ತದೆ. 4. ನಾವು ಒಂದು ಹೊಸ ಪ್ರಾಣಿ ಖರೀದಿ ಮಾಡಿದಾಗ, ಜಾನುವಾರುಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆಗೆದುಕೊಂಡು ಹೋದಾಗ ಜಾನುವಾರು ಅಲ್ಲಿನ ನೀರಿಗೆ ಹೊಂದು ಕೊಳ್ಳುವುದಿಲ್ಲ ಅದಕ್ಕಾಗಿ ಆ ಸಮಯದಲ್ಲಿ,ನೀರಿನಲ್ಲಿ ಬೆಲ್ಲ ಬೆರೆಸಿ ನೀರನ್ನು ಕುಡಿಯಲು ಕೊಡಬೇಕು.
5. ಹಸು ಮತ್ತು ಎಮ್ಮೆಗಳು 45 ರಿಂದ 60 ಲೀಟರ್ ನೀರನ್ನು ದಿನಕ್ಕೆ ಕುಡಿಯುತ್ತವೆ. ಕುರಿ ಮತ್ತು ಆಡುಗಳು ದಿನಕ್ಕೆ 4 ರಿಂದ 6 ಲೀಟರ್ಗಳಷ್ಟು ನೀರು ಕುಡಿಯುತ್ತವೆ. ಕೋಳಿಗಳಿಗೆ ದಿನಕ್ಕೆ 200 ರಿಂದ 250 ಮಿಲಿ ನೀರನ್ನು ಕುಡಿಯುವುದು._x005F_x000D_ 6. ಹಾಲು ಕೊಡುವ ಜಾನುವಾರುಗಳಿಗೆ 3 ರಿಂದ 4 ಲೀಟರ್ ನೀರನ್ನು ಕೊಡುವುದು ಅವಶ್ಯಕ._x005F_x000D_ _x005F_x000D_ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
559
0