AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಹತ್ತಿ ಬೆಳೆ ನಂತರದ ಹಂತದಲ್ಲಿ ಗುಲಾಬಿ ಬೋಲ್‌ವರ್ಮ್‌ನ ನಿಯಂತ್ರಣ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಹತ್ತಿ ಬೆಳೆ ನಂತರದ ಹಂತದಲ್ಲಿ ಗುಲಾಬಿ ಬೋಲ್‌ವರ್ಮ್‌ನ ನಿಯಂತ್ರಣ
ಕಳೆದ ಕೆಲವು ವರ್ಷಗಳಿಂದ, ಗುಲಾಬಿ ಕಾಯಿ ಕೊರಕದ ಬಾಧೆಯ ನಂತರದ ಹಂತದಲ್ಲಿ ಹತ್ತಿಗೆ ಗಂಭೀರ ಹಾನಿಯನ್ನುಂಟು ಮಾಡುತ್ತಿವೆ. ಈ ಕೀಟವು ಮೊಗ್ಗುಗಳು, ಹೂಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಮೊಗ್ಗುಗಳ ಮೇಲೆ ಹಾಕಿದ ಮೊಟ್ಟೆಗಳು ಸಾಮಾನ್ಯವಾಗಿ ಬರಿಗಣ್ಣಿಗೆ ಗೋಚರಿಸುವುದಿಲ್ಲ. ಮೊಟ್ಟೆಯಿಂದ ಹೊರ ಬಂದ ಮರಿಹುಳು ಹೂವುಗಳು, ಮೊಗ್ಗುಗಳು ಮತ್ತು ಕಾಯಿಗಳನ್ನು ಪ್ರವೇಶಿಸಿ ಒಳಗಿನಿಂದ ಬಾಧಿಸುತ್ತವೆ. ಬಾಧೆಗೊಂಡ _x000D_ _x000D_ ಹತ್ತಿಯ ಹೂವುಗಳು ಗುಲಾಬಿ ಹೂವುಗಳಂತೆ ರೂಪಾಂತರಗೊಳ್ಳುತ್ತವೆ. ಬಾಧೆಗೊಂಡಿರುವ ಹೂವುಗಳು, ಮೊಗ್ಗುಗಳು ಮತ್ತು ಸಣ್ಣ ಕಾಯಿಗಳು ಉದುರಲಾರಂಭಿಸುತ್ತವೆ. ಮರಿಹುಳುಗಳು ಕಾಯಿಯನ್ನು ಪ್ರವೇಶಿಸುತ್ತದೆ ಮತ್ತು ನಾರು ಮತ್ತು ಬೀಜಗಳನ್ನು ನಾಶಪಡಿಸುತ್ತದೆ._x000D_
ನಿರ್ವಹಣೆ:_x000D_ ಮೇಲ್ವಿಚಾರಣೆಗಾಗಿ ಹೆಕ್ಟೇರಿಗೆ 5 ಬಲೆಗಳನ್ನು ಸ್ಥಾಪಿಸಿ. ಪ್ರತಿ ಬಲೆಗೆ 8 ಅಥವಾ ಹೆಚ್ಚಿನ ಪತಂಗಗಳು 3 ದಿನಗಳವರೆಗೆ ನಿರಂತರವಾಗಿ ಸಿಕ್ಕಿಬಿದ್ದರೆ, ಹೆಕ್ಟೇರಿಗೆ 15-20 ಬಲೆಗಳನ್ನು ಸ್ಥಾಪಿಸಿ._x000D_ 20 ಸಸ್ಯಗಳನ್ನು ಆಯ್ಕೆಮಾಡಿ ಮತ್ತು ಮೊಗ್ಗು-ಹೂ-ಕಾಯಿಗಳನ್ನು ಎಣಿಸಿ ಮತ್ತು ೫ ಮರಿಹುಳುಗಳು 100 ಮೊಗ್ಗು-ಹೂ-ಕಾಯಿಗಳಲ್ಲಿ ನೋಡಿದರೆ, ಈ ಕೆಳಗಿನ ಯಾವುದೇ ಕೀಟನಾಶಕಗಳನ್ನು ಸಿಂಪಡಿಸಿ._x000D_ ಹತ್ತಿಯನ್ನು ಬೀಜ ಉತ್ಪಾದನೆಯಾಗಿ ಬೆಳೆಸುವವರು ಹೂಬಿಡುವ ದಳಗಳನ್ನು ದಾಟಿದ ನಂತರ ಸೂಕ್ತವಾಗಿ ನಾಶಮಾಡಲು ಸೂಚಿಸಲಾಗುತ್ತದೆ._x000D_ ಕೀಟನಾಶಕದ ಬಳಕೆಗೆ ಮೊದಲು ಗುಲಾಬಿ ಹೂವಿನಂತೆ ಕಾಣುವ ಮೊಗ್ಗುಗಳನ್ನು ಸಂಗ್ರಹಿಸಿ ನಾಶಮಾಡಿ._x000D_ ಈ ರೀತಿಯ ಕೀಟನಾಶಕಗಳನ್ನು ತಡೆಗಟ್ಟಲು ಮೊನೊಕ್ರೊಟೊಫಾಸ್ ಮತ್ತು ಅಸೆಫೇಟ್ ನಂತಹ ಕೀಟನಾಶಕಗಳನ್ನು ಪದೇ ಪದೇ ಸಿಂಪಡಿಸುವುದು ಗುಲಾಬಿ ಕಾಯಿಕೊರಕದ ಬಾಧೆಯಾದಾಗ ಅತ್ಯಗತ್ಯ._x000D_ ಕೊಯ್ಲು ಮಾಡಿದ ಹತ್ತಿ ಉತ್ಪನ್ನಗಳನ್ನು ಪೇರಿಸಿ, ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಡಿ._x000D_ ಕೊನೆಯ ಹತ್ತಿಯ ಕಟಾವಿನ ನಂತರ, ಹತ್ತಿ ಗಿಡ ಬೇರುಸಹಿತ ಕಿತ್ತುಹಾಕಿ ಅವುಗಳನ್ನು ನಾಶಮಾಡಿ ಅಥವಾ ಸಾವಯವ ಗೊಬ್ಬರಗಳನ್ನು ತಯಾರಿಸಲು ಬಳಸಿ._x000D_ ಬಾಧೆಯು ಹೆಚ್ಚು ಮುಂದುವರಿದರೆ, ನೀರಾವರಿಯನ್ನು ತಡೆಹಿಡಿದು ಬೆಳೆಯನ್ನು ಕೊನೆಗೊಳಿಸಿ._x000D_ ನಿಯಂತ್ರಣಕ್ಕಾಗಿ ಈ ಕೀಟನಾಶಕಗಳನ್ನು ಕ್ಲೋರಾಂಟ್ರಾನಿಲಿಪ್ರೊಲ್ 9.3% + ಲ್ಯಾಂಬ್ಡಾ ಸಿಹಲೋಥ್ರಿನ್ 46% C ಡ್‌ಸಿ @ 5 ಮಿಲಿ ಅಥವಾ ಸೈಪರ್‌ಮೆಥ್ರಿನ್ @ 10 ಇಸಿ @ 10 ಮಿಲಿ ಅಥವಾ ಡೆಲ್ಟಾಮೆಥ್ರಿನ್ 2.8 ಇಸಿ @ 10 ಮಿಲಿ ಅಥವಾ ಲ್ಯಾಂಬ್ಡಾ ಸಿಹಲೋಥ್ರಿನ್ 2.5 ಇಸಿ @ 10 ಮಿಲಿ ಅಥವಾ ಇಂಡೊಕ್ಸಾಕಾರ್ಬ್ 15.8 ಇಸಿ @ 5 ಮಿಲಿ ಅಥವಾ ಎಮಾಮ್ಯಾಕ್ಟಿನ್ ಬೆಂಜೊಯೇಟ್ 5 ಎಸ್‌ಜಿ @ 5 ಗ್ರಾಂ ಅಥವಾ ಸ್ಪಿನೋಸಾಡ್ 45 ಎಸ್‌ಸಿ @ 3 ಮಿಲಿ ಅಥವಾ ಡೆಲ್ಟಾಮೆಥ್ರಿನ್ 1% + ಟ್ರಯಾಜೋಫೋಸ್ 35% ಇಸಿ @ 10 ಮಿಲಿ ಅಥವಾ ಕ್ಲೋರ್‌ಪಿರಿಫೋಸ್ 50% + ಸೈಪರ್‌ಮೆಥ್ರಿನ್ 5 ಇಸಿ @ 10 ಮಿಲಿ 10 ಲೀಟರ್ ನೀರಿನಲ್ಲಿ ಪರ್ಯಾಯವಾಗಿ ಸಿಂಪಡಿಸಬೇಕು . ಮೂಲ: ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
550
1