AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಹತ್ತಿ ಬೆಳೆಯಲ್ಲಿ ಕಳೆ ನಿರ್ವಹಣೆ
ಸಲಹಾ ಲೇಖನಅಪನಿ ಖೇತಿ
ಹತ್ತಿ ಬೆಳೆಯಲ್ಲಿ ಕಳೆ ನಿರ್ವಹಣೆ
ಬೆಳೆಗಳ ನಡುವಿನ ಹೆಚ್ಚಿನ ಅಂತರ ಕಳೆಯ ತೀವ್ರತೆಗೆ ಕಾರಣವಾಗಬಹುದು. ಉತ್ತಮ ಇಳುವರಿಗಾಗಿ ಬಿತ್ತನೆಯ 50-60 ಕಳೆ ಮುಕ್ತ ಅವಧಿ ಅವಶ್ಯಕವಾಗಿದೆ, ಇಲ್ಲದಿದ್ದರೆ ಅದು ಇಳುವರಿಯನ್ನು 60% -80% ಕಡಿಮೆಗೊಳಿಸುತ್ತದೆ. ಪರಿಣಾಮಕಾರಿ ಕಳೆ ನಿಯಂತ್ರಣಕ್ಕೆ ಸಂಯೋಜನೆಯಲ್ಲಿ ಕೈ ಕಸ ತೆಗೆಯುವಿಕೆ, ಯಾಂತ್ರಿಕ ಮತ್ತು ರಾಸಾಯನಿಕ ವಿಧಾನಗಳು ಅಗತ್ಯವಾಗಿವೆ. ಬಿತ್ತನೆಯ ನಂತರ ಅಥವಾ ಮೊದಲನೆಯ ಬಾರಿ ನೀರಾವರಿಯನ್ನು ಮೊದಲ 5-6 ವಾರಗಳ ತನಕ ಕೈಯಿಂದ ಎಡೆಕುಂಟೆ ಹೊಡೆಯಿರಿ. ಪ್ರತಿ ನೀರಾವರಿ ನಂತರ, ಉಳಿದ ಎಡೆಕುಂಟೆ ಕೆಲಸವನ್ನು ಮಾಡಿರಿ. ಹತ್ತಿ ಹೊಲದ ಸುತ್ತಮುತ್ತ ಕಾಂಗ್ರೆಸ್ ಹುಲ್ಲು ಬೆಳೆಯಲು ಬಿಡಬೇಡಿ ಏಕೆಂದರೆ ಅದು ಹಿಟ್ಟು ತಿಗಣೆ ಬಾಧೆಯ ಸಂಭವವನ್ನು ಹೆಚ್ಚಿಸುತ್ತದೆ._x000D_ ಬಿತ್ತನೆಯ ನಂತರ, ಆದರೆ ಮೊಳಕೆಯೊಡೆಯುವ ಮೊದಲು, ಕಳೆಗಳನ್ನು ನಿಯಂತ್ರಿಸಲು, ಪೆಂಡಿಮೆಥಲಿನ್ @ 25-30 ಮಿಲಿ / 10 ಲೀಟರ್ ನೀರನಲ್ಲಿ ಸಿಂಪಡಿಸಿ. ಬಿತ್ತನೆಯ 6 ರಿಂದ 8 ವಾರ ನಂತರ ಬೆಳೆ 40-45 ಸೆಂ.ಮೀ ಎತ್ತರವಾಗಿದ್ದಾಗ 100 ಲೀಟರ್ ನೀರಿನಲ್ಲಿ ಪ್ಯಾರಾಕ್ವಾಟ್ (ಗ್ರಾಮೊಕ್ಸೋನ್) 24% ಡಬ್ಲ್ಯೂಎಸ್ಸಿ @ 500 ಮಿಲಿ / ಎಕರೆ ಅಥವಾ ಗ್ಲೈಫೋಸೇಟ್ @ 1 ಲೀಟರ್/ಎಕರೆ ಬೇರೆಸಿ ಸಿಂಪಡಿಸಿ. ಬೆಳೆಯು 2,4-D ಕಳೆನಾಶಕಗಳಿಗೆ ಅತಿ ಹೆಚ್ಚು ಸಂವೇದನಾಶೀಲವಾಗಿದೆ. ಅದರ ಆವಿಯು ಪಕ್ಕದ ಹೊಲಗಳಲ್ಲಿ ಸಿಂಪಡಿಸಿದರೂ ಸಹ ಹತ್ತಿಗೆ ತೀವ್ರ ಹಾನಿಯನ್ನುಂಟು ಮಾಡುತ್ತದೆ. ಕಳೆನಾಶಕವನ್ನು ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಸಿಂಪಡನೆ ಮಾಡಬೇಕು._x000D_ ಮೂಲ: ಅಪ್ನಿ ಖೇತಿ_x000D_
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
70
0