AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಹತ್ತಿಯಲ್ಲಿ ಹಿಟ್ಟು ತಿಗಣೆಯ ಸಮಗ್ರ ನಿರ್ವಹಣೆ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಹತ್ತಿಯಲ್ಲಿ ಹಿಟ್ಟು ತಿಗಣೆಯ ಸಮಗ್ರ ನಿರ್ವಹಣೆ
ಹಿಟ್ಟು ತಿಗಣೆಯು ಭಾರತದ ಸ್ಥಳೀಯ ಮೂಲವಲ್ಲ, ಅದು ಬೇರೆ ದೇಶದಿಂದ ಪ್ರವೇಶಿಸಿದೆ. 2006 ರಲ್ಲಿ ಗುಜರಾತ್‌ನಲ್ಲಿ ಏಕಾಏಕಿ ಸಂಭವಿಸಿತು ಮತ್ತು ನಂತರ ಇತರ ರಾಜ್ಯಗಳನ್ನೂ ಸಹ ಗಮನಿಸಲಾಯಿತು. ಹತ್ತಿ ಬೆಳೆಯುವ ಹಂಗಾಮಿನಲ್ಲಿ ಪ್ರತಿ ವರ್ಷ ಹಿಟ್ಟು ತಿಗಣೆಯ ಬಾಧೆ ಕಾಣಿಸಿಕೊಳ್ಳುತ್ತದೆ. ಹತ್ತಿಯ ಜೊತೆಗೆ, ಈ ಕೀಟವು ಇತರ ಬೆಳೆಗಳ ಮೇಲೂ ಬಾಧೆಯಂನ್ನುಂಟು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ, ಭಾರತದ ಕೆಲವು ಭಾಗಗಳಲ್ಲಿ ಹತ್ತಿಯ ಹಿಟ್ಟು ತಿಗಣೆಯ ಬಾಧೆಯನ್ನು ಗಮನಿಸಲಾಗಿದೆ. ಹತ್ತಿಯಲ್ಲಿ ಪ್ರತಿಯೊಂದು ಭಾಗಗಳಿಂದ ರಸವನ್ನು ಹೀರುವ ಬಾಧಿಸುತ್ತದೆ. ಗಿಡಗಳ ವಿಕೃತಿ ಮತ್ತು ಸುಕ್ಕುಗಟ್ಟಿದ ಚಿಗುರುಗಳು ಮತ್ತು ಗಿಡಗಳ ಕುಂಠಿತಗೊಂಡ ರೋಗದ ಲಕ್ಷಣಗಳನ್ನು ಕಾಣಬಹುದು. ಬಾಧೆ ಗೊಂಡಿರುವ ಗಿಡಗಳು ಹಳದಿ ಬಣ್ಣಕ್ಕೆ ತಿರುಗಿ ಸಂಪೂರ್ಣವಾಗಿ ಒಣಗುತ್ತವೆ. ಇದು ಸಸ್ಯಗಳ ದ್ಯುತಿಸಂಶ್ಲೇಷಣೆ ಚಟುವಟಿಕೆಯಲ್ಲೂ ಅಡ್ಡಿಯಾಗುತ್ತದೆ. ಮಳೆಗಾಲದಲ್ಲಿ ದೀರ್ಘಕಾಲದವರೆಗೆ ಶುಷ್ಕ ವಾತಾವರಣ ವಿಸ್ತರಿಸುವುದರಿಂದ ಅಥವಾ ಮಾನ್ಸೂನ್ ಮುಗಿದಂತೆ ತಿಗಣೆಯ ಸಂಖ್ಯೆ ಹೆಚ್ಚಾಗುತ್ತದೆ.
ಸಮಗ್ರ ಕೀಟ ನಿರ್ವಹಣೆ:_x000D_ _x000D_ ಕಳೆ ಸಸ್ಯಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.ಹಿಟ್ಟು ತಿಗಣೆಯಿಂದ ಬಾಧೆಗೊಂಡ ಕಳೆ ಸಸ್ಯಗಳನ್ನು ನೀರಿನ ಚಾನಲ್‌ನಲ್ಲಿ ತೆಗೆದು ಎಸೆಯಬೇಡಿ._x000D_ _x000D_ ಹೊಲದಲ್ಲಿ ಇರುವೆ ಗೂಡುಗಳನ್ನು ಪತ್ತೆ ಮಾಡಿ ಮತ್ತು ಆ ಗೂಡನ್ನು ಕ್ಲೋರ್‌ಪಿರಿಫೊಸ್ 20 ಇಸಿ @ 20 ಮಿಲಿ ಯೊಂದಿಗೆ 10 ಲೀಟರ್ ನೀರಿಗೆ ಬೇರೆಸಿ ತೇವಗೊಳಿಸಿ. ಯಾವಾಗ ಬೇಕೋ ಆವಾಗ 2-3 ಬಾರಿ ಪುನರಾವರ್ತಿಸಿ.ಆರಂಭಿಕ ಹಂತದಲ್ಲಿ ತೀವ್ರವಾಗಿ ಬಾಧಿತ ಹತ್ತಿ ಗಿಡಗಳನ್ನು ಬೇರುಸಹಿತ ಕಿತ್ತುಹಾಕಿ ಮತ್ತು ಹೊಲದಿಂದ ತೆಗೆದುಕೊಂಡು ಅವುಗಳನ್ನು ನಾಶಮಾಡಿ._x000D_ _x000D_ ಹತ್ತಿ ಹೊಲಗಳಿಗೆ ಬಳಸುವ ಉಪಕರಣಗಳನ್ನು ಶುಚಿಗೊಳಿಸಿ ಬೇರೆ ಹೊಲದಲ್ಲಿ ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸಲು ಬಳಸಬೇಕು._x000D_ _x000D_ ಎನಾಸಿಯಸ್ ಬಂಬವಾಲೆ ಹಿಟ್ಟು ತಿಗಣೆಯ ಪರಾವಲಂಬಿ ಕೀಟವನ್ನು (40-70% ಪರಾವಲಂಬಿ) ಹೇರಳವಾಗಿ ಗಮನಿಸಿದಾಗ ವಿಷಕಾರಿ ಕೀಟನಾಶಕಗಳ ಸಿಂಪಡಣೆಯನ್ನು ತಪ್ಪಿಸಿ._x000D_ _x000D_ ಹೊಲಗಳನ್ನು ನಿಯಮಿತವಾಗಿ ಸಮೀಕ್ಷೆ ಮಾಡಿ ಮತ್ತು ತಿಗಣೆಗಳನ್ನು ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಶಿಫಾರಸು ಮಾಡಿದ ಕೀಟನಾಶಕಗಳನ್ನು ಸಿಂಪಡಿಸಿ. _x000D_ ಕೀಟ ಪೀಡೆಯ ಬಾಧೆ ಪ್ರಾರಂಭಿಸಿದ ನಂತರ, ಬೇವಿನ ಎಣ್ಣೆ @ 40 ಮಿಲಿ ಅಥವಾ ಬೇವಿನ ಆಧಾರಿತ ಸೂತ್ರೀಕರಣ @ (1% ಇಸಿ) 10 ಲೀಟರ್ ನೀರಿಗೆ 40 ಮಿಲಿ (0.15% ಇಸಿ) ಸಿಂಪಡಿಸಿ.ಸಂಜೆಯ ಸಮಯದಲ್ಲಿ ಹೆಚ್ಚಿನ ಆರ್ದ್ರ ದಿನಗಳಲ್ಲಿ ವರ್ಟಿಸಿಲಿಯಮ್ ಲೆಕಾನಿ, ಶಿಲೀಂಧ್ರನಾಶಕ 10 ಲೀಟರ್ ನೀರಿಗೆ 40ಗ್ರಾಂ ನ್ನು ಬೇರೆಸಿ ಸಿಂಪಡಿಸಿ._x000D_ _x000D_ ಪ್ರೊಫೆನೊಫೋಸ್ 50 ಇಸಿ @ 10 ಮಿಲಿ ಅಥವಾ ಥಿಯೋಡಿಕಾರ್ಬ್ 50 ಡಬ್ಲ್ಯೂಪಿ 10 ಗ್ರಾಂ ಅಥವಾ ಬುಪ್ರೊಫೆಜಿನ್ 25 ಎಸ್ಸಿ @ 20 ಮಿಲಿ ಅಥವಾ ಕ್ಲೊರೋಪೈರಿಫೋಸ್ 20 ಇಸಿ @ 20 ಮಿಲಿ ನ್ನು 10 ಲೀಟರ್ ನೀರಿಗೆ ಬೇರೆಸಿ ತಿಗಣೆಯ ಸಂಖ್ಯೆಯು ಹೆಚ್ಚುತ್ತಿರುವ ಪ್ರವೃತ್ತಿಯನ್ನು ತೋರಿಸಿದರೆ. ಡಿಟರ್ಜೆಂಟ್ ಪೌಡರ್ ಅನ್ನು 10 ಲೀಟರ್ ನೀರಿಗೆ 10 ಗ್ರಾಂ ಸೇರಿಸಿ ಸಿಂಪಡಿಸಿ._x000D_ _x000D_ ಪ್ರತಿ ಸಿಂಪಡಣೆಯಲ್ಲಿ ಕೀಟನಾಶಕಗಳನ್ನು ಬದಲಾಯಿಸಿ. ಅದನ್ನು ನೋಡಿ, ಸಸ್ಯಗಳು ಕೀಟನಾಶಕ ಸಿಂಪಡಣೆಯಿಂದ ಸರಿಯಾಗಿ ಅವರಿಸಬೇಕು,ಮತ್ತಷ್ಟು ಹರಡುವುದನ್ನು ತಪ್ಪಿಸಲು ಕುರಿ / ಮೇಕೆ / ಪ್ರಾಣಿಗಳನ್ನು ಹೊಲದಲ್ಲಿ ಮೇಯಲು ಬೀಡ ಬೇಡಿ. ಮೂಲ: ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
537
3