AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಸೌರ ಬೆಳಕಿನ ಬಲೆ (ಸೋಲಾರ್‌ ಲೈಟ್‌ ಟ್ರ್ಯಾಪ್‌)- ಸಮಗ್ರ ಕೀಟ ನಿರ್ವಹಣೆ
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಸೌರ ಬೆಳಕಿನ ಬಲೆ (ಸೋಲಾರ್‌ ಲೈಟ್‌ ಟ್ರ್ಯಾಪ್‌)- ಸಮಗ್ರ ಕೀಟ ನಿರ್ವಹಣೆ
ಸಮಗ್ರ ಕೀಟ ನಿರ್ವಹಣೆ, ಎಂದೂ ಕರೆಯಲ್ಪಡುವ ಏಕೀಕೃತ ಕೀಟ ನಿಯಂತ್ರಣ (ಐಪಿಸಿ), ಕೀಟ ಆರ್ಥಿಕ ನಿಯಂತ್ರಣ ಪದ್ಧತಿಯನ್ನು ಸಂಯೋಜಿಸುವ ಒಂದು ವಿಧಾನವಾಗಿದೆ. ಇದರಲ್ಲಿ, ಕೀಟಗಳನ್ನು ವಿವಿಧ ರೀತಿಯ ಬಲೆಗಳನ್ನು ಬಳಸಿ ನಿಯಂತ್ರಿಸಲಾಗುತ್ತದೆ. ಎಲ್ಲಾ ವಿಧದ ಕೀಟಗಳನ್ನು ಆಕರ್ಷಿಸಲು ಮತ್ತು ನಿಯಂತ್ರಿಸಲು ಸೌರ ಬೆಳಕಿನ ಬಲೆಗಳನ್ನು ಬಳಸಬಹುದು. ಸೌರ ಬೆಳಕಿನ ಬಲೆಗಳ ಪ್ರಯೋಜನಗಳು 1)ರಾತ್ರಿಯ ಸಮಯದಲ್ಲಿ, ಪ್ರೌಢ ಕೀಟಗಳು ಬೆಳಕಿಗೆ ಆಕರ್ಷಿಸಲ್ಪಡುತ್ತವೆ. ಬಲ್ಬ್ ಮೂಲಕ ಕೀಟಗಳನ್ನು ಆಕರ್ಷಿಸಲು ಅದೇ ವಿಧಾನವನ್ನು ಬಳಸಲಾಗುತ್ತದೆ. 2) ಈ ದೀಪವು ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ಕೀಟಗಳನ್ನು ಆಕರ್ಷಿಸುತ್ತದೆ. ಕೀಟನಾಶಕಗಳ ಅಥವಾ ಸೀಮೆಎಣ್ಣೆಯ ದ್ರಾವಣವನ್ನು ಈ ದೀಪದ ಸಮೀಪವಿರುವ ಬಟ್ಟಲಿನಲ್ಲಿ ಹುಳುಗಳು ಬೀಳುವಂತೆ ಇರಿಸಬೇಕು; ಪರಿಣಾಮವಾಗಿ, ಈ ಕೀಟಗಳು ಕೀಟನಾಶಕದ ದ್ರಾವಣದಲ್ಲಿ ಬೀಳುತ್ತವೆ ಮತ್ತು ನಿಯಂತ್ರಿಸಲ್ಪಡುತ್ತವೆ. 3) ಜೀವನ ಚಕ್ರವನ್ನು ಪುನರಾರಂಭಿಸಿದಾಗ, ಪ್ರೌಢ ಹಂತವು ನಿರ್ಣಾಯಕವಾಗಿರುತ್ತದೆ, ಇಂತಹ ಪರಿಸ್ಥಿತಿಯಲ್ಲಿ, ಕೀಟಗಳನ್ನು ನಿಯಂತ್ರಿಸುವುದು ಸುಲಭ. ವಯಸ್ಕ ಕೀಟಗಳನ್ನು ಕೈಂದ ಆರಿಸಿ ನಿಯಂತ್ರಿಸಿದರೆ, ಮುಂದಿನ ಹಂತವನ್ನು ತಾನಾಗಿಯೇ ನಿಯಂತ್ರಿಸಬಹುದು. ಈ ಬಲೆಯಿಂದ ನಿಯಂತ್ರಿಸಲ್ಪಡುವ ಕೀಟಗಳು: 1. ಬೇರುತಿನ್ನುವ ಹುಳು, ದ್ರಾಕ್ಷಿ, ಮತ್ತು ಮಾವಿನಲ್ಲಿ ಕಾಂಡ ಕೊರಕ , ಇತರೆ ಬೆಳೆಗಳಲ್ಲಿ ಕೀಟಗಳನ್ನು ಆಕರ್ಷಿಸುತ್ತದೆ. 2. ಜೂನ ತಿಂಗಳ ಮಾನ್ಸೂನ್ ಆರಂಭದಲ್ಲಿ, ಅನೇಕ ಕೀಟಗಳನ್ನು ಅವುಗಳ ಪ್ರೌಢ ಹಂತದಲ್ಲಿ ನಿರ್ವಹಣೆ ಮಾಡ ಬಹುದು. ಸೌರದೀಪ ಬಲೆಗಳನ್ನು ಬಳಸುವುದರ ತೊಂದರೆಗಳು: 1) ಲೋಡ್ ಶೆಡ್ಡಿಂಗ್ ಕಾರಣದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೌರದೀಪ ಬಲೆಗಳನ್ನು ನಿರಂತರವಾಗಿ ಬಳಸಲಾಗುವುದಿಲ್ಲ. ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ಸೌರದೀಪ ಬಲೆಗಳನ್ನು ಬಳಸುವುದು ಒಂದು ಸವಾಲಾಗಿದೆ. 2) ಮಾನ್ಸೂನ್ ಋತುವಿನಲ್ಲಿ ಸೌರದೀಪದ ಬಲೆಯ ಬಳಕೆಯು ಪ್ರಮುಖವಾಗಿದೆ. ಮಳೆಗಾಲದಲ್ಲಿ, ವಿದ್ಯುತ್ ಸಂಪರ್ಕದ ಪ್ರಮುಖ ಸಮಸ್ಯೆಯಾಗಿದೆ. ಸೌರದೀಪದ ಸ್ಥಿರವಾದ ನಿರ್ವಹಣೆಗೆ ಮಳೆ ತೊಂದರೆ ಉಂಟು ಮಾಡಬಹುದು. 3) ಪರಿಹಾರವಾಗಿ, ಒಂದು ಎಕರೆ ಜಮೀನಿನಲ್ಲಿ ಒಂದು ಸೌರದೀಪವನ್ನು ಅಳವಡಿಸಬೇಕು. ಸಂಜೆ, ಸೂರ್ಯಾಸ್ತದ ನಂತರ ಸೌರದೀಪ ಸ್ವಯಂಚಾಲಿತವಾಗಿ ಪ್ರಾರಂಭವಾಗುತ್ತದೆ ಮತ್ತು ಪ್ರಾರಂಭ ಮಾಡಿದ 4 ಗಂಟೆಗಳಲ್ಲಿ ಆರಿ ಹೋಗುತ್ತದೆ. ಮೂಲ: ಅಗ್ರೋಸ್ಟಾರ ಅಗ್ರೋನೋಮಿ ಎಕ್ಸೆಲೆನ್ಸ್ ಕೇಂದ್ರ
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
636
0