AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಸೋಯಾಬೀನ್ ಬೆಳೆಯಲ್ಲಿ ಎಲೆ ತಿನ್ನುವ ಮರಿಹುಳುಗಳ ನಿರ್ವಹಣೆ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಸೋಯಾಬೀನ್ ಬೆಳೆಯಲ್ಲಿ ಎಲೆ ತಿನ್ನುವ ಮರಿಹುಳುಗಳ ನಿರ್ವಹಣೆ
ಸೋಯಾಬೀನ್ ಒಂದು ಪ್ರಮುಖ ಆಹಾರದ ಮೂಲವಾಗಿದೆ ಮತ್ತು ಇದನ್ನು ದ್ವಿದಳ ಮತ್ತು ಎಣ್ಣೆಬೀಜದ ಬೆಳೆ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ,ದ್ವಿದಳ ಧಾನ್ಯಗಳಿಗೆ ಹೋಲಿಸಿದರೆ ಇದನ್ನು ಹೆಚ್ಚಾಗಿ ಎಣ್ಣೆಬೀಜದ ಬೆಳೆಯಾಗಿ ಬಳಸಲಾಗುತ್ತದೆ. ಸೋಯಾಬೀನ್ ದ್ವಿದಳ ಧಾನ್ಯಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು,. ಸೋಯಾಬೀನ್ನ ಮುಖ್ಯ ಅಂಶಗಳು ಪ್ರೋಟೀನ್, ಕಾರ್ಬೋಹೈಡ್ರೇಟ್‌ ಮತ್ತು ಕೊಬ್ಬಾಗಿದೆ. ಸೋಯಾಬೀನ್ ಬೆಳೆಯು ಒಳಗೊಂಡಿರುವ 38-40% ಪ್ರೋಟೀನ್, 22%, ಎಣ್ಣೆ, 21% ಕಾರ್ಬೋಹೈಡ್ರೇಟ್ ಮತ್ತು 12% ತೇವಾಂಶವನ್ನು ಹೊಂದಿರುತ್ತದೆ. ಭಾರತದಲ್ಲಿ, ಮಧ್ಯಪ್ರದೇಶವು ಅತಿದೊಡ್ಡ ಸೋಯಾಬೀನ್ ಉತ್ಪಾದಿಸುವ ರಾಜ್ಯವಾಗಿದೆ ಮತ್ತು ಸೋಯಾಬೀನ್ ಸಂಶೋಧನಾ ಕೇಂದ್ರವು ಮಧ್ಯಪ್ರದೇಶದ ಇಂದೋರನಲ್ಲಿದೆ . ಸೋಯಾಬೀನ್ ಬೆಳೆಯಲ್ಲಿ ಎಲೆ ತಿನ್ನುವ ಮರಿಹುಳುವಿನ ಬಾಧೆಯಿಂದ ಬೆಳೆಗೆ ಅತಿಯಾದ ಹಾನಿ ಉಂಟುಮಾಡುತ್ತದೆ. ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. ನಿರ್ವಹಣೆ: ಹೊಲದ ಸುತ್ತಲು ಔಡಲ ಬೆಳೆ ಬೆಳೆಯಿರಿ. ಎಲೆ ತಿನ್ನುವ ಮರಿಹುಳುವಿನ ಪ್ರೌಢ ಪತಂಗ ಅದರ ಮೊಟ್ಟೆಯ ಗುಂಪುಗಳನ್ನು ಎಲೆಗಳ ಮೇಲೆ ಹಾಕಲು ಆಯಕ್ಕೆ ಮಾಡುತ್ತವೆ. ಮೊಟ್ಟೆಯ ಗುಂಪುಗಳನ್ನು ಕಂಡಲ್ಲಿ ಔಡಲ ಎಲೆಗಳನ್ನು ಸಂಗ್ರಹಿಸಿ ನಾಶಮಾಡಿ. ಎಸ್‌ಎಲ್‌ಎನ್‌ಪಿವಿ @ 250 ಎಲ್‌ಇ ಅನ್ನು ಪ್ರತಿ ಹೆಕ್ಟೇರ್‌ಗೆ 500 ಲೀಟರ್ ನೀರಿನಲ್ಲಿ ಬೇರೆಸಿ ಸಂಜೆ ಹೊತ್ತಿನಲ್ಲಿ ಸಿಂಪಡಿಸಿ. ಬ್ಯಾಕ್ಟೀರಿಯಾ ಆಧಾರಿತ ಪುಡಿ, ಬ್ಯಾಸಿಲಸ್ ಥುರಿಂಜಿಯೆನ್ಸಿಸ್ @ 15 ಗ್ರಾಂ ಅಥವಾ ಬೌವೆರಿಯಾ ಬಾಸ್ಸಿಯಾನಾ, ಶಿಲೀಂಧ್ರ ಆಧಾರಿತ ಪುಡಿ @ 40 ಗ್ರಾಂ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಣೆ ಮಾಡಿ. ಬೇವಿನ ಬೀಜದ ತಿರುಳಿನ ಕಷಾಯ @ 5% ಅಥವಾ ಬೇವಿನ ಆಧಾರಿತ ಸೂತ್ರೀಕರಣ @ 40 ಮಿಲಿ (0.15% ಇಸಿ) 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ. ಹೆಚ್ಚಿನ ಬಾಧೆ ಎಲೆಗಳ ಮೇಲೆ ಕಂಡು ಬಂದಾಗ , ಕ್ಲೋರಾಂಟ್ರಾನಿಲಿಪ್ರೊಲ್ 18.5 ಎಸ್‌ಸಿ @ 3 ಮಿ.ಲಿ ಅಥವಾ ಪ್ರೊಫೆನೋಫೋಸ್ 50 ಇಸಿ @ 10 ಮಿಲಿ ಅಥವಾ ಕ್ಲೋರ್‌ಪಿರಿಫೋಸ್ 20 ಇಸಿ @ 20 ಮಿಲಿ ಅಥವಾ ಇಂಡೊಕ್ಸಾಕಾರ್ಬ್ 15.8 ಇಸಿ @ 10 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಮೂಲ: ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
274
1