AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಸಾವಯವ ಕೊಟ್ಟಿಗೆ ಗೊಬ್ಬರವನ್ನು ತಯಾರಿಸುವ ವಿಧಾನ
ಸಾವಯವ ಕೃಷಿದೈನಿಕ್ ಜಾಗರಣ್
ಸಾವಯವ ಕೊಟ್ಟಿಗೆ ಗೊಬ್ಬರವನ್ನು ತಯಾರಿಸುವ ವಿಧಾನ
ರೈತರು ತಮ್ಮ ಜಮೀನಿನಲ್ಲಿ ಸಾವಯವ ಕೊಟ್ಟಿಗೆ ಗೊಬ್ಬರವನ್ನು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ತಯಾರಿಸಬಹುದು. ಇದನ್ನು ತಯಾರಿಸಲು, ನಿಮ್ಮ ಸಂಯೋಜಿತ ವಸ್ತುಗಳ ಉದ್ದಕ್ಕೆ ಅನುಗುಣವಾಗಿ ಆಳ-೦.೯ ಮೀಟರ್ , ಅಗಲ-೨.೪ ಮೀಟರ್ ಮತ್ತು ೫-ಮೀಟರ್ ವರೆಗೆ ರಚಿಸಿ; ರೈತ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳನ್ನು ಹೊಂದಿದ್ದರೆ, ಅವರು ಅದರ ಪ್ರದೇಶವನ್ನು ಹೆಚ್ಚಿಸಬಹುದು ಅಥವಾ ಎರಡು ಗುಂಡಿಗಳನ್ನು ನಿರ್ಮಿಸಬಹುದು. ಈಗ, ಗುಂಡಿ ತೋಡಿದ ನಂತರ, ಜಾನುವಾರುಗಳ ಸಗಣಿ, ಮೂತ್ರ, ತರಕಾರಿ ಸಿಪ್ಪೆಗಳು ಮತ್ತು ಇತರ ಕೊಳೆಯುವ ಪದಾರ್ಥಗಳ ಸಂಯೋಜನೆಯು ಗುಂಡಿಯಲ್ಲಿ ಏಕರೂಪವಾಗಿ ಹರಡಬೇಕು.
ಸಗಣಿ ಮಿಶ್ರಣವು ಅಗತ್ಯಕ್ಕೆ ತಕ್ಕಂತೆ ತೇವವಾಂಶವನ್ನು ಹೊಂದಿದ್ದರೆ, ಅವಶ್ಯಕತೆಗೆ ತಕ್ಕಂತೆ ನೀರನ್ನು ಹಾಕಬೇಕು. ಈಗ ಜಾನುವಾರುಗಳ ಸಗಣಿ ಮತ್ತು ಇತರ ಮಿಶ್ರ ಉತ್ಪನ್ನಗಳನ್ನು ಸಮವಾಗಿ ಪದರುಗಳನ್ನು ಮಾಡಿ ಮರಳಿನ 30 ಸೆಂ.ಮೀ ಪದರವನ್ನು 6 ತಿಂಗಳ ಕಾಲ ಹಾಗೆ ಬಿಡಬೇಕು. 6 ತಿಂಗಳ ನಂತರ, 0.32 ರಿಂದ 0.50 ಸಾರಜನಕ, 0.10 ರಿಂದ 0.25 ರಂಜಕ, 0.25 ರಿಂದ 0.40 ಪೊಟ್ಯಾಸಿಯಮ್, 0.80 ರಿಂದ 1.20 ಕ್ಯಾಲ್ಸಿಯಂ, 0.33 ರಿಂದ 0.70 ಮೆಗ್ನೀಸಿಯಮ್, ಮತ್ತು ಸತು 0.040 ಒಣ ವಸ್ತು ಮುಂತಾದ ಖನಿಜಗಳನ್ನು ಒಳಗೊಂಡಿರುವ ಉಪಯುಕ್ತ ಸಾವಯವ ತೋಟದ ಕೊಟ್ಟಿಗೆ ಗೊಬ್ಬರ ಸಿಗುತ್ತದೆ. ಮೂಲ: ದೈನಿಕ ಜಾಗ್ರಣ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
517
0