ಸಾವಯವ ಕೃಷಿಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಸಾವಯವ ಕೃಷಿ- ಪ್ರಾಮುಖ್ಯತೆ
ಸಾವಯವ ಕೃಷಿಯ ಪ್ರಮುಖ ಪ್ರಯೋಜನವೆಂದರೆ ನೀವು ದೀರ್ಘಕಾಲದವರೆಗೆ ನಿಮ್ಮ ತೋಟದ ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸಬಹುದು, ಇದರಿಂದಾಗಿ ರಾಸಾಯನಿಕ ಗೊಬ್ಬರಗಳ ಬಳಕೆ ಇಲ್ಲದೆ ಕೂಡ ಲಾಭದಾಯಕವಾಗಿಸಬಹುದು.
ನಿಮ್ಮ ತೋಟಗಳಲ್ಲಿ ಸಾವಯವ ಕೃಷಿಯಿಂದ ಮಣ್ಣಿನ ಫಲವತ್ತತೆಯ ಕಾರಣದಿಂದ ನೀವು ಈ ಹಿಂದೆ ಬಿತ್ತದೆ ಇರುವಂತಹ ಬೆಳೆಗಳನ್ನು ಸಹ ಬಿತ್ತನೆ ಮಾಡಬಹುದು.
ಸಾವಯವ ಕೃಷಿಯಿಂದ ಪ್ರಾಣಿಗಳು ಸೇವಿಸುವ ಮೇವು ಸಹ ರಾಸಾಯನಿಕ ರಹಿತವಾಗಿರುವ ಕಾರಣದಿಂದ ಸುಧಾರಿತ ಗುಣಮಟ್ಟದ ಹಾಲು ಮತ್ತು ಉತ್ತಮ ಆರೋಗ್ಯ ಕಾಣಬಹುದು.
ಇದು ಪ್ರಾಣಿಗಳ ಮೇಲೆ ಮತ್ತು ಮನುಷ್ಯನ ಆರೋಗ್ಯದ ಮೇಲೆ ದೀರ್ಘಕಾಲದ ಪರಿಣಾಮಗಳನ್ನು ಬೀರುತ್ತದೆ, ಅದನ್ನು ಅನೇಕ ರೋಗಗಳಿಂದ ತಡೆಗಟ್ಟಬಹುದು ಮತ್ತು ಅವರ ಆರೋಗ್ಯವನ್ನು ಗುಣಪಡಿಸಬಹುದು.
ಸಾವಯವ ಕೃಷಿಯಿಂದಾಗಿ ಆರಂಭಿಕ ಹಂತದಲ್ಲಿ ಕೆಲವು ಸಮಸ್ಯೆ ಎದುರಿಸಬಹುದು ಆದರೆ ದೀರ್ಘಾವಧಿಯವರೆಗೆ ನಿಮ್ಮ ಬೆಳೆಗಳ ಗುಣಮಟ್ಟ ಉತ್ತಮವಾಗಿರುತ್ತದೆ ಮತ್ತು ನೀವು ಉತ್ತಮ ಲಾಭ ಪಡೆಯಬಹುದು.
ಮೂಲ - ಅಗ್ರೋಸ್ಟಾರ ಅಗ್ರೋನೋಮಿ ಎಕ್ಸೆಲೆನ್ಸ್ ಕೇಂದ್ರ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.