ಕೃಷಿ ವಾರ್ತಾದಿ ಎಕನಾಮಿಕ್ ಟೈಮ್ಸ್
ಸರ್ಕಾರವು ಇನ್ನು 4000 ಟನ್ ಈರುಳ್ಳಿ ಆಮದು ಮಾಡಿಕೊಳ್ಳುತ್ತಿದೆ
ನವದೆಹಲಿ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆಯ ಹಿನ್ನೆಲೆಯಲ್ಲಿ ಸರ್ಕಾರ 4000 ಟನ್ ಹೆಚ್ಚುವರಿ ಈರುಳ್ಳಿ ಆಮದು
ಮಾಡಿಕೊಳ್ಳುತ್ತಿದೆ. ಸಾರ್ವಜನಿಕ ವಲಯದ ಕಂಪನಿ ಎಂಎಂಟಿಸಿ ಟರ್ಕಿಯಿಂದ 4,000 ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಮತ್ತೊಂದು ಆದೇಶ ನೀಡಿದೆ. ಈ ಆಮದು ರವಾನೆಯು ಜನವರಿ ಮಧ್ಯದ ವೇಳೆಯಲ್ಲಿ ತಲುಪುವ ನಿರೀಕ್ಷೆಯಿದೆ. ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆಯನ್ನು ಗಮನದಲ್ಲಿಟ್ಟುಕೊಂಡು 1.2 ಲಕ್ಷ ಟನ್ ಈರುಳ್ಳಿ ಆಮದು ಮಾಡಲು ಸಂಪುಟ ಅನುಮೋದನೆ ನೀಡಿತ್ತು. ಇದರಲ್ಲಿ 21,000 ಟನ್‌ಗಿಂತಲೂ ಹೆಚ್ಚು ಈರುಳ್ಳಿ ಆಮದು ಮಾಡಿಕೊಳ್ಳಲು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈರುಳ್ಳಿ ಆಮದಿಗೆ ಇನ್ನೂ ಮೂರು ಟೆಂಡರ್‌ಗಳನ್ನು ನೀಡುವಂತೆ ಗ್ರಾಹಕರ ವ್ಯವಹಾರಗಳ ಇಲಾಖೆ ಎಂಎಂಟಿಸಿಗೆ ನಿರ್ದೇಶನ ನೀಡಿದ್ದು, ಈ ಪೈಕಿ ಎರಡು ಆದೇಶಗಳನ್ನು ಟರ್ಕಿ ಮತ್ತು ಯುರೋಪಿಯನ್ ಒಕ್ಕೂಟಕ್ಕೆ ನೀಡಲಾಗಿದ್ದು, ಇನ್ನೊಂದು ಜಾಗತಿಕ ಟೆಂಡರ್ ಆಗಿದೆ. ಈ ಪ್ರತಿಯೊಂದು ಟೆಂಡರ್ 5,000 ಟನ್ ಈರುಳ್ಳಿಗಾಗಿ ಇದೆ. ಎಂಎಂಟಿಸಿ ಸರ್ಕಾರಿ ಖರೀದಿ ಸಂಸ್ಥೆ. ಆಮದು ಸೇರಿದಂತೆ ವಿವಿಧ ಕ್ರಮಗಳಿಂದ ಈರುಳ್ಳಿ ದೇಶೀಯ ಪೂರೈಕೆಯನ್ನು ಸುಧಾರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆಮದುಗಳಿಂದ ಪೂರೈಕೆಯನ್ನು ಹೆಚ್ಚಿಸುವ ಮೂಲಕ ಈರುಳ್ಳಿಯ ಬೆಲೆಯನ್ನು ನಿಗ್ರಹಿಸಲು ಪ್ರಯತ್ನಿಸಲಾಗುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 75-100 ರೂಪಾಯಿಯಾಗಿದೆ. ಮೂಲ - ದಿ ಎಕನಾಮಿಕ್ ಟೈಮ್ಸ್, 4 ಡಿಸೆಂಬರ್ 2019 ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
157
0
ಕುರಿತು ಪೋಸ್ಟ್