AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಶೇಂಗಾ ಬೆಳೆಯಲ್ಲಿ ಗೊಣ್ಣೆ ಹುಳುವಿನ  ನಿರ್ವಹಣೆ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಶೇಂಗಾ ಬೆಳೆಯಲ್ಲಿ ಗೊಣ್ಣೆ ಹುಳುವಿನ ನಿರ್ವಹಣೆ
ಗೊಣ್ಣೆ ಹುಳು ಶೇಂಗಾ ಬೆಲೆಯಲ್ಲಿ ಮಣ್ಣಿನ ಬರುವ ಒಂದು ಪ್ರಮುಖ ಕೀಟವಾಗಿದ್ದು, ಅದು ಶೇಂಗಾ ಬೆಳೆಗೆ ತೀವ್ರ ಹಾನಿ ಉಂಟುಮಾಡುತ್ತದೆ. ಆರಂಭಿಕ ಹಂತದಲ್ಲಿ ಮರಿಹುಳುಗಳು ಕೊಳೆತ ತರಕಾರಿಯ ಮೇಲೆ ತನ್ನ ಜೀವನ ಚಕ್ರವನ್ನು ಮುಗಿಸುತ್ತವೆ ಆದರೆ ನಂತರದ ಹಂತದಲ್ಲಿ ಅವು ಬೇರುಗಳನ್ನು ಹಾಳುಮಾಡುತ್ತವೆ. ಭಾದೆಗೊಳಗಾದ ಸಸ್ಯಗಳು ಒಣಗುತ್ತವೆ ಮತ್ತು ಸುಲಭವಾಗಿ ಕಿತ್ತು ತಗೆಯಬಹುದು. ಅಲ್ಲಲ್ಲಿ ಅಂತರ ಬಿಟ್ಟು ಈ ರೋಗ ಭಾದೆಯಾಗಿದ್ದರೂ ಇಡಿ ಹೊಲವನ್ನೇ ಹಾಳುಮಾಡುತ್ತದೆ.ಆದ್ದರಿಂದ ಕೆಳಗೆ ಹೇಳಿದ ನಿರ್ವಹಣಾ ಕ್ರಮವನ್ನು ಕೈಗೊಳ್ಳಬೇಕು.
ಗೊಣ್ಣೆ ಹುಳುವಿನ ನಿರ್ವಹಣೆ: ● ಸುತ್ತಮುತ್ತಲಿನ ಜಾಗದಲ್ಲಿರುವ ಗಿಡಮರಗಳನ್ನು ನಿಯಮಿತವಾಗಿ ಸವರಿರಿ. ● ಮೊದಲ ಭಾರಿ ಮಳೆಯ ನಂತರ ಜಾಲಿ, ಬಾರೇ ,ನುಗ್ಗೆ ಮತ್ತು ಬೇವಿನ ಮರದ ಎಲೆಯ ಮೇಲೆ ಗೊಣ್ಣೆ ಹುಳುವೀನ ಪ್ರೌಢ ಕೀಟವು ಎಲೆಗಳನ್ನು ಬಾಧಿಸುತ್ತಿರುತ್ತದೆ ಅದ್ದಕ್ಕಾಗಿ ಮರದ ಶಾಖೆಗಳನ್ನು ಅಲ್ಲಾಡಿಸಿ ಕೆಳೆಗೆ ಬೀಳಿಸಿ ಪ್ರೌಢ ಕೀಟಗಳನ್ನು ನಾಶಪಡಿಸಬೇಕು. ● ಈ ಮರಗಳ ಮೇಲೆ ಕ್ವಿನಾಲ್ಫೊಸ್ 25 ಇಸಿ @ 20-ಮಿ.ಲಿ 10 ಲೀಟರ್ ನೀರಿನಲ್ಲಿ ಬೇರೆಸಿ ಸಿಂಪಡಿಸಿ. ● ಮಾಗಿ ಉಳುಮೆ ಮಾಡುವುದರಿಂದ ಗೊಣ್ಣೆ ಹುಳುವಿನ್ನು ನಿಯಂತ್ರಿಸುವಲ್ಲಿ ಸಹಾಯಕವಾಗುತ್ತದೆ. ● ದೀಪ ಬಲೆಗಳನ್ನು ಅಳವಡಿಸಿ ಮತ್ತು ಪ್ರೌಢ ಕೀಟಗಳು; ಇವುಗಳು ದೀಪದ ಬಲೆಗೆ ಆಕರ್ಷಿತವಾಗುತ್ತವೆ ಮತ್ತು ಪ್ರೌಢ ಕೀಟಗಳನ್ನು ನಾಶಮಾಡಿ. ● ಬಿತ್ತನೆ ಮಾಡುವ ಮೊದಲು ಕ್ಲೋರೋಪೈರಿಫೊಸ್ 20 ಇಸಿ @ 25 ಮಿ.ಲಿ ಅಥವಾ ಥಿಯಾಮಿಥೋಕ್ಸಾಮ್ 30 ಎಫ್ಎಸ್ @ 10 ಗ್ರಾಂ ನೊಂದಿಗೆ ಬೀಜೋಪಚಾರ ಮಾಡಿ. ಬೀಜೋಪಚಾರ ಮಾಡಿದ ಈ ಬೀಜಗಳನ್ನು 3 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿದ ನಂತರ ಬಿತ್ತನೆಗಾಗಿ ಬೀಜವನ್ನು ಬಳಸಿ. ● ಬಿತ್ತನೆಯ ಮೊದಲು ಬೋವೇರಿಯಾ ಬಾಸ್ಸಿನಾ ಅಥವಾ ಮೆಟಾಹಾರ್ಜಿಯಾಮ್ ಅನಿಸೊಪ್ಲಿಯಾ, ಶಿಲೀಂಧ್ರ ಆಧಾರಿತ ಪುಡಿಯನ್ನು (5 ಕೆಜಿ / ಹೆ) ಮಣ್ಣಿನಲ್ಲಿ ಬೆರೆಸಿ. ಮತ್ತು 30 ದಿನಗಳ ನಂತರ ಅದೇ ಪುಡಿಯನ್ನು ನೀರಿನಲ್ಲಿ ಬೇರೆಸಿ @ 40 ಗ್ರಾಂ / 10 ಲೀಟರ್ ನೀರಿಗೆ ಸಾಲುಗಳಲ್ಲಿ ಹಾಕಬೇಕು. ● ಹನಿ ನೀರಾವರಿ ಮೂಲಕ ಕ್ಲೋರೋಪೈರಿಫೊಸ್ 20 ಇಸಿ@ 4 ಲೀಟರ್ / ಹೆಕ್ಟೇರ್ ನಂತೆ ಹಾಕಿರಿ ಅಥವಾ ಫೊರೇಟ್ 10 ಗ್ರಾಂ @10 ಕೆ.ಜಿ. ಮಣ್ಣಿನಲ್ಲಿ ಹಾಕಿರಿ. ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
673
0