AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ವಿವಿಧ ರೀತಿಯ ಬೆಳೆ ಪದ್ಧತಿಗಳ ಪ್ರಾಮುಖ್ಯತೆ
ಸಾವಯವ ಕೃಷಿhttp://satavic.org
ವಿವಿಧ ರೀತಿಯ ಬೆಳೆ ಪದ್ಧತಿಗಳ ಪ್ರಾಮುಖ್ಯತೆ
ಸಾಂಪ್ರದಾಯಿಕ ಕೃಷಿ ಪದ್ಧತಿ ಉಪಯೋಗಿಸುವ ರೈತರು ಇಲ್ಲಿಯವರೆಗೆ ಕಡಿಮೆ ವೆಚ್ಚದಲ್ಲಿ ತಮಗೆ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು ಮತ್ತು ಬೆಳಕನ್ನು ಬಳಸಿ ಬೆಳೆ ಪಲ್ಲಟನೆ, ಮಿಶ್ರ-ಬೆಳೆ, ಅಂತರ ಬೆಳೆ ಮತ್ತು ಪಾಲಿಕಲ್ಚರ್ ಪದ್ಧತಿಯನ್ನು ಅನುಸರಿಸುತ್ತಾರೆ, ಇದಕ್ಕೆ ಕೇರಳದ ಮನೆ ತೋಟಗಳು ಅತ್ಯುತ್ತಮ ಉದಾಹರಣೆಯಾಗಿವೆ._x000D_ _x000D_ ಬೆಳೆ ಪಲ್ಲಟನೆ ಪದ್ಧತಿ: ಇದು ಒಂದು ಭೂಮಿಯಲ್ಲಿ ಎರಡು ವಿಭಿನ್ನ ಬೆಳೆಗಳನ್ನು ಅನುಕ್ರಮವಾಗಿ ಬೆಳೆಸುವ ಪದ್ದತಿಯಾಗಿದೆ. ಈ ಸಂದರ್ಭದಲ್ಲಿ ಕೆಲವೊಮ್ಮೆ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು, ಆಳವಾಗಿ ಬೇರೂರಿದ ಮತ್ತು ಕಡಿಮೆ-ಬೇರೂರಿರುವ ಬೆಳೆಗಳನ್ನು ಬೆಳೆಸಬಹುದು ಮತ್ತು ಕೆಲವು ತಿಂಗಳುಗಳ ಮುಂಚೆ ಮೊದಲ ಬೆಳೆಗೆ (ಅಕ್ಕಿ+ ಗೋಧಿ, ಅಕ್ಕಿ+ ಹತ್ತಿ) ಒದಗಿಸಲಾದ ಗೊಬ್ಬರ ಮತ್ತು ನೀರು ಎರಡನೇ ಬೆಳೆಗೆ ಉಪಯುಕ್ತವಾಗಬಹುದು._x000D_ _x000D_ ಬಹುಬೆಳೆ ಪದ್ಧತಿ: ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಬೆಳೆಗಳನ್ನು ಒಂದೇ ಭೂಮಿಯಲ್ಲಿ ಏಕಕಾಲಕ್ಕೆ ಬೆಳೆಯುವ ಪದ್ಧತಿಯಾಗಿದೆ. ಈಗಾಗಲೇ ರೈತರು ಭಾರತೀಯ ಕೃಷಿ ಪದ್ದತಿಯಲ್ಲಿ ಒಂದೇ ಸಮಯದಲ್ಲಿ 15 ಪ್ರಕಾರದ ಬೆಳೆಗಳನ್ನು ಬೆಳೆಯಲು ಪ್ರಸಿದ್ಧರಾಗಿದ್ದಾರೆ. _x000D_ ಉದಾಹರಣೆಗಾಗಿ ಟೊಮೇಟೊ+ ಈರುಳ್ಳಿ + ಚೆಂಡು ಹೂವು (ಟೊಮೇಟೊದಲ್ಲಿನ ಕೆಲವು ಕೀಟ ಪೀಡೆಗಳು ಚೆಂಡು ಹೂವಿಗೆ ಆಕರ್ಷಿತವಾಗುತ್ತವೆ)._x000D_ _x000D_ ಅಂತರ ಬೇಸಾಯ ಪದ್ಧತಿ: ಒಂದು ಬೆಳೆಯನ್ನು ಮುಖ್ಯ ಬೆಳೆಯ ಸಾಲುಗಳ ನಡುವಿನ ಅಂತರದಲ್ಲಿ ಬೆಳೆಯುವ ಬೇಸಾಯ ಪದ್ಧತಿಯಾಗಿದೆ. ಬಹು-ಸಾಲು ತೆಂಗಿನಮರ + ಬಾಳೆಹಣ್ಣು + ಅನಾನಸ್ / ಶುಂಠಿ / ದ್ವಿದಳ ಧಾನ್ಯದ ಮೇವು / ಔಷಧೀಯ ಅಥವಾ (ಆರೊಮ್ಯಾಟಿಕ್) ಪರಿಮಳಯುಕ್ತ ಸಸ್ಯಗಳು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿವೆ. ಒಂದು ಜಮೀನಿನಲ್ಲಿ ಜೀವವೈವಿಧ್ಯತೆಯ ವರ್ಧನೆಗೆ, ಅಂತರ ಬೆಳೆ ಪದ್ದತಿಯಿಂದ ಸಹ ತುಂಬಾ ಸಹಾಯವಾಗುತ್ತದೆ._x000D_ _x000D_ ಪಾಲಿಕಲ್ಚರ್: ಈ ಮೇಲಿನ ಪದ್ದತಿಗಳು ಪಾಲಿಕಲ್ಚರ್ ಮತ್ತು ಜೀವವೈವಿಧ್ಯತೆಯ ವಿಧಗಳಾಗಿವೆ; ಇದು ಕೀಟಪೀಡೆಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಇದು ಸಹಾಯವಾಗಿದೆ. ಎಲೆಗಳ ಉದರುವಿಕೆ ಮತ್ತು ಇತರ ಬೆಳೆ ಅವಶೇಷಗಳು ಒಟ್ಟಿಗೆ ಮಣ್ಣಿಗೆ ಸೇರುವುದರಿಂದ ಮತ್ತು ಕಾಂಪೋಸ್ಟ್ ಗೊಬ್ಬರವು ಪೋಷಕಾಂಶದ ಗುಣ ಧರ್ಮ ಹೊಂದಿರುವ ಮಿಶ್ರಣದಿಂದಾಗಿ ಮತ್ತಷ್ಟು ಮಹತ್ವವನ್ನು ನೀಡುತ್ತವೆ. _x000D_ _x000D_ ಹೊದಿಕೆ ಬೆಳೆ ಪದ್ಧತಿ: ಇದನ್ನು ಸಾಮಾನ್ಯವಾಗಿ ಕಡಿಮೆ ನೀರು ಮತ್ತು ಯಾವುದೇ ಪರಿಕರಗಳ ಅಗತ್ಯವಿಲ್ಲದೆ ವೇಗವಾಗಿ ಬೆಳೆಯುವ ನೈಟ್ರೋಜನ್-ಸ್ಥಿರೀಕರಣ ಮಾಡುವ ಬೆಳೆಗಳೊಂದಿಗೆ ಬೆಳೆಯಲಾಗುತ್ತದೆ. ಹೊದಿಕೆ ಬೆಳೆಗಳಿಂದ ಆದಾಯವನ್ನು ಸಹ ಪಡೆಯಬಹುದಾದರೂ, ಅವುಗಳನ್ನು ಹೆಚ್ಚಾಗಿ ಮಣ್ಣನ್ನು ಆವರಿಸಲು, ಮಣ್ಣಿನಲ್ಲಿ ಸಾರಜನಕ ಸ್ಥಿರೀಕರಣಕ್ಕಾ ಗಿ, ಕಳೆ ನಿರ್ವಹಣೆ , ಮಣ್ಣಿನ ಸವೆತವನ್ನು ತಡೆಯಲು ಮತ್ತು ನಂತರ ಜೀವವೈವಿಧ್ಯತೆ ಅಥವಾ ಮೇವಿನಂತೆ ಬಳಸಲಾಗುತ್ತದೆ._x000D_ _x000D_ ಮೂಲ: http://satavic.org_x000D_ _x000D_
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
410
0