AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ವಿವಿಧ ಬೆಳೆಗಳಲ್ಲಿ ಕೆಂಪು ನುಶಿ ಮತ್ತು ಹಳದಿ ನುಶಿಗಳ ಬಾಧೆ ಮತ್ತು ನಿಯಂತ್ರಣ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ವಿವಿಧ ಬೆಳೆಗಳಲ್ಲಿ ಕೆಂಪು ನುಶಿ ಮತ್ತು ಹಳದಿ ನುಶಿಗಳ ಬಾಧೆ ಮತ್ತು ನಿಯಂತ್ರಣ
ನುಶಿಗಳ ಬೆಳವಣಿಗೆಗೆ ಶುಷ್ಕ ವಾತಾವರಣದಲ್ಲಿ ಹೆಚ್ಚುತ್ತದೆ. ಆದ್ದರಿಂದ, ವಾತಾವರಣದಲ್ಲಿ ಆರ್ದ್ರತೆಯು ೬೦ % ಕ್ಕಿಂತ ಕಡಿಮೆಯಿದ್ದರೆ, ಅದರಿಂದ ಹೆಚ್ಚು ಪರಿಣಾಮ ಬೀರುತ್ತದೆ.ಮಾನ್ಸೂನ್ ಮುಗಿದ ನಂತರ ಕೆಂಪು / ಹಳದಿ ಹಳದಿ ನುಶಿಗಳನ್ನು ನಿಯಂತ್ರಿಸುವುದು ಕಷ್ಟವಾಗಿದೆ.
ಲಕ್ಷಣಗಳು: _x000D_  ಈ ಕೀಟವು ಹೊಸ ಎಲೆಗಳಿಂದ ರಸವನ್ನು ಹೀರಿಕೊಳ್ಳುತ್ತದೆ ಮತ್ತು ಹೊಸತಾಗಿ ಬೆಳೆಯುತ್ತಿರುವ ಕುಡಿಗಳಿಂದ ರಸವನ್ನು ಹೀರಿಕೊಳ್ಳುತ್ತವೆ. ಆದ್ದರಿಂದ, ಗಿಡದ ಎಲೆಗಳು ಕೆಳಮುಖವಾಗಿ ಮುಟುರಿಕೊಳ್ಳುತ್ತಿವೆ ಮತ್ತು ಎಲೆಗಳು ದೋಣಿಯಾಕಾರದಲ್ಲಿ ರೂಪಗೊಳ್ಳುತ್ತವೆ._x000D_  ಗಿಡ ಮತ್ತು ಹಣ್ಣಿನ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ, ಹೂ ಬಿಡುವ ಜೊತೆಗೆ ಕಡಿಮೆಯಾಗುತ್ತದೆ ಮತ್ತು ಹಣ್ಣು ಮತ್ತು ಕಾಂಡದ ಮೇಲೆ ಕೆಂಪು-ಕಂದು ಬಣ್ಣದ ಎಲೆಗಳ ಮೇಲೆ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ._x000D_  ಕೆಂಪು ನುಶಿಯು ಗಿಡದ ಮೇಲೆ ಬಲೆಯನ್ನು ಹೆಣೆಯುತ್ತದೆ. ಆದ್ದರಿಂದ, ಜೇಡರ ಬಲೆಯನ್ನು ನಾಶ ಮಾಡುವ ಹೊರತು, ಕೆಂಪು ನುಶಿಯನ್ನು ನಿಯಂತ್ರಿಸಲಾಗುವುದಿಲ್ಲ._x000D_ ಕೆಂಪು ನುಶಿಯಿಂದ ಬಾಧೆ ಬೆಳೆಗಳು:_x000D_  ಮೆಣಸಿನಕಾಯಿ,ಬೆಂಡೆಕಾಯಿ,ಟೊಮ್ಯಾಟೊ,ಗುಲಾಬಿಗಳು, ಏಲಕ್ಕಿ ಬೆಳೆಗಳು, ಹತ್ತಿ, ದ್ರಾಕ್ಷಿ, ತೆಂಗಿನಕಾಯಿ, ದಾಳಿಂಬೆ, ಕಿತ್ತಳೆ ಹಣ್ಣುಗಳು ಮತ್ತು ಹೂವುಗಳು ಮತ್ತು ಹಣ್ಣಿನ ಬೆಳೆಗಳ ಮೇಲೆ ಪರಿಣಾಮ ಬೀರುತ್ತದೆ._x000D_  ನಿಯಂತ್ರಣ:_x000D_  ಇದಕ್ಕೆ ಪರಿಹಾರವಾಗಿ, ಕೆಂಪು ನುಶಿಯನ್ನು ಕೀಟನಾಶಕಗಳನ್ನು ಸಿಂಪಡಿಸುವಾಗ ಹೆಚ್ಚಿನ ನೀರನ್ನು ಬಳಸಬೇಕು. ಇದರಿಂದ ಕೀಟಗಳ ಬಲೆಗಳು ತೊಳೆದು ಕೀಟವನ್ನು ನಿಯಂತ್ರಿಸಬಹುದು._x000D_  ಕೆಂಪು ನುಶಿಯನ್ನು ಹತೋಟಿ ಮಾಡಲು ಬಳಸುವ ರಾಸಾಯನಿಕ ಕೀಟನಾಶಕಗಳು:_x000D_  ಪ್ರತಿ ಲೀಟರ ನೀರಿಗೆ ಸಲ್ಫರ್ 80 % ಡಬ್ಲ್ಯೂಪಿ @ 3 ಗ್ರಾಂ, ಸ್ಪಿರೋಮೆಥೇನ್ 22.9% ಎಸ್‌ಸಿ @ 1ಮಿಲಿ, ಪ್ರೊಪೆರ್ಗೈಟ್ 57 %ಇಸಿ @ 2 ಮಿಲೀಯನ್ನು ಸಿಂಪಡಿಸಬೇಕು._x000D_ _x000D_ ಮೂಲ: ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ _x000D_ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ._x000D_
21
0