ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಸಾವಯವ ಕೃಷಿಅಗ್ರೋವನ್
ರಂಜಕ ಕರಗಿಸುವ ಜೀವಾಣುವಿನ ಉಪಯೋಗ ಮತ್ತು ಪ್ರಯೋಜನಗಳು
ಉಪಯೋಗ : • 10 ಕೆಜಿ ಬೀಜದ ಬೀಜೋಪಚಾರಕ್ಕೆ 250 ಗ್ರಾಂ ಪುಡಿಯಿಂದ ಬೀಜೋಪಚಾರ ಮಾಡಿದ ನಂತರ, ಬೀಜಗಳನ್ನು ನೆರಳಿನಲ್ಲಿ ಒಣಗಿಸಿ. ಒಣಗಿದ ನಂತರ, ಬಿತ್ತನೆ ಮಾಡಿ. • ದ್ರವ - 3 ರಿಂದ 5 ಮಿಲಿ ೧ ಕೆಜಿ ಬೀಜಕ್ಕೆ ಬೀಜ ಬೀಜೋಪಚಾರ, ಸಸಿಗಳ ಉಪಚಾರ ಮತ್ತು ಹನಿ ನೀರಾವರಿಗಾಗಿ ಇದನ್ನು ಬಳಸಬಹುದು. • ಸಸಿಗಳ ಉಪಚಾರಕಾಗ್ಗಿ 3 ರಿಂದ 5 ಮಿಲಿ ರಂಜಕ ಕರಗಿಸುವ ಜೀವಾಣುವನ್ನು ಮಿಶ್ರಣ ಮಾಡಬೇಕು. ಈ ದ್ರಾವಣದಲ್ಲಿ, 15 ನಿಮಿಷಗಳ ಕಾಲ ಈರುಳ್ಳಿ, ಮೆಣಸು, ಟೊಮ್ಯಾಟೊ ಮೊಳಕೆಗಳನ್ನು ಅದ್ದು ತೆಗೆಯಬೇಕು . ತದನಂತರ ಅವುಗಳನ್ನು ನೆಡಬೇಕು. • ರಂಜಕ ಕರಗಿಸುವ ಜೀವಾಣು ಪ್ರಕ್ರಿಯೆಯಿಂದಾಗಿ, ಸಸಿಯ ಮೊಳಕೆಗಳು ಮಣ್ಣಿನಲ್ಲಿ ಬೇಗನೆ ಹೋಗುತ್ತವೆ. ಅದರ ಬೆಳವಣಿಗೆಯು ಚೆನ್ನಾಗಿ ಆಗುತ್ತದೆ .
ಪ್ರಯೋಜನಗಳು: • ರಂಜಕ ಕರಗಿಸುವ ಜೀವಾಣುವಿನಿಂದ 30 ರಿಂದ 50 ಕೆಜಿ ರಂಜಕ ಬೆಳೆಗಳಿಗೆ ಲಭಿಸುತ್ತದೆ. ಹಣ್ಣು , ತರಕಾರಿಗಳ ಬೆಳವಣಿಗೆ ಹೆಚ್ಚಾಗುತ್ತವೆ. ಗಿಡದಲ್ಲಿ ಹಣ್ಣುಗಳ ಪ್ರಮಾಣ ಹೆಚ್ಚಿಸುತ್ತದೆ. • ಉತ್ಪಾದಕತೆಯು 20 ರಿಂದ 30 ಪ್ರತಿಶತದಷ್ಟು ಹೆಚ್ಚಾಗುತ್ತದೆ. • ರಂಜಕದೊಂದಿಗೆ ಸಸ್ಯ ಪ್ರವರ್ತಕ ಸಿಂಪಡಣೆಯಿಂದ ವಿವಿಧ ಹಾರ್ಮೋನುಗಳು ದೊರೆಯುವ ಕಾರಣದಿಂದಾಗಿ ಮೆಣಸಿನಕಾಯಿಗಳು, ಈರುಳ್ಳಿ, ಟೊಮೆಟೊಗಳ ಗುಣಮಟ್ಟವು ಹೆಚ್ಚುತ್ತದೆ. • ರಂಜಕ ಕರಗಿಸುವ ಜೀವಾಣುಗಳನ್ನು ಬಳಸುವುದರಿಂದ, ಹಿಂದಿನ ಬೆಳೆಗೆ ಬಳಸಲಾದ ರಂಜಕವು ನಂತರದ ಬೆಳೆಗಳಿಗೆ ಸಿಗುತ್ತದೆ.ಮಣ್ಣಿನ ಮಾಲಿನ್ಯವನ್ನು ಕಡಿಮೆಯಾಗುವುದು ಮತ್ತು ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಮೂಲ: ಅಗ್ರೋವನ್ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
317
2
ಕುರಿತು ಪೋಸ್ಟ್