AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಸಾವಯವ ಕೃಷಿವಾಸುದಾ ಒರಗನಿಕ್ಸ್
ಮೆಣಸಿನಕಾಯಿ,ಬೆಳ್ಳುಳ್ಳಿ,ಈರುಳ್ಳಿ ಹಾಗು ಶುಂಠಿಯ ಕಷಾಯ ತಯಾರಿಕೆ
ಮೆಣಸಿನಕಾಯಿ,ಬೆಳ್ಳುಳ್ಳಿ,ಈರುಳ್ಳಿ ಹಾಗು ಶುಂಠಿಯ ಕಷಾಯದಲ್ಲಿರುವ ಪ್ರಮುಖ ಘಟಕಗಳಾದ ಕ್ಯಾಪ್ಸಸಿನ್-ಮೆಣಸಿನಕಾಯಿ,ಅಲ್ಲಸಿನ್- ಬೆಳ್ಳುಳ್ಳಿ,ಈರುಳ್ಳಿ-ಗಂಧಕ,ಜೆಂಜಿರೊಲ್-ಶುಂಠಿ ಔಷಧಿಯ ಗುಣಗಳಿಂದಾಗಿ ಕೀಟಪೀಡೆ ಮತ್ತು ರೋಗಗಳ ನಿಯಂತ್ರಣ ಮಾಡಬಹುದು. ಕಷಾಯವನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು- ಮೆಣಸಿನಕಾಯಿ-೨೫೦ಗ್ರಾಂ ಬೆಳ್ಳುಳ್ಳಿ-೨೫೦ಗ್ರಾಂ ಈರುಳ್ಳಿ-೨೫೦ಗ್ರಾಂ ಶುಂಠಿ-೨೫೦ಗ್ರಾಂ ಕಾಟನ್ ಬಟ್ಟೆ, ಬಕೆಟ್. ಮೆಣಸಿನಕಾಯಿ,ಬೆಳ್ಳುಳ್ಳಿ,ಈರುಳ್ಳಿ ಹಾಗು ಶುಂಠಿಯನ್ನು ರುಬ್ಬಿಕೊಳ್ಳಬೇಕು ತದನಂತರ ಉಗುರ ಬೆಚ್ಚನೆಯ ನೀರಿನಲ್ಲಿ ಹಾಕಿ ಚೆನ್ನಾಗಿ ಕಲಕಬೇಕು. ಆ ದ್ರಾವಣವನ್ನು ೫-೬ ಗಂಟೆಗಳ ಕಾಲ ಹಾಗೆ ಇಡಬೇಕು. ಅದಾದ ಮೇಲೆ ಬಟ್ಟೆಯ ಸಹಾಯದಿಂದ ಸೋಸಿಕೊಂಡು, ೫೦೦ ಮೀ.ಲೀ ದ್ರಾವಣವನ್ನು ೧೬ ಲೀಟರ್ ಪಂಪಿನಲ್ಲಿ ಬೇರೆಸಿ ಸಿಂಪಡಿಸಬೇಕು. ಈ ಕಷಾಯದಿಂದಾಗಿ ನಿಯಂತ್ರಣಕ್ಕೆ ಬರುವ ಕೀಟಗಳೆಂದರೆ ಕೊರಕ ಕೀಟಗಳ ಸಣ್ಣ ಮತ್ತು ಮಧ್ಯಮ ಗಾತ್ರದ ಮರಿಹುಳುಗಳು,ಥ್ರಿಪ್ಸ್ ನುಶಿ,ಮೈಟ್ ನುಶಿ ಅಥವಾ ಕೆಂಪು ಮೈಟ್ ನುಶಿ,ಜೇಡರ ನುಶಿಗಳನ್ನು ನಿರ್ವಹಣೆ ಮಾಡಬಹುದು. ಮೂಲ: ವಸುಧಾ ಒರ್ಗ್ಯಾನಿಕ್ಸ್ ಈ ಪ್ರಮುಖ ಮಾಹಿತಿಯನ್ನು ನಿಮ್ಮ ಕೃಷಿ ಸ್ನೇಹಿತರೊಂದಿಗೆ ಶೇರ್ ಮಾಡಿ.
109
7