AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಮಾವಿನ ಕಾಂಡ ಕೊರಕದ ಜೀವನ ಚಕ್ರ
ಕೀಟಗಳ ಜೀವನ ಚಕ್ರಭಾ.ಕೃ.ಅ.ಸಂ -CISH ಲಕ್ನೋ.
ಮಾವಿನ ಕಾಂಡ ಕೊರಕದ ಜೀವನ ಚಕ್ರ
ಇದು ಸಾಂದರ್ಭಿಕ ಆದರೆ ಅತ್ಯಂತ ಗಂಭೀರವಾದ ಮಾವಿನ ಹಣ್ಣಿನ ಬೆಳೆಯ ಕೀಟವಾಗಿದೆ. ಆಮ್ಲೆಟ್ ಮತ್ತು ಮುಲ್ಗೊವಾ ಹೆಚ್ಚು ಬಾಧೆಗೆ ಒಳಗಾಗುವ ತಳಿಗಳಾಗಿವೆ. ಅಂಜೂರ, ರಬ್ಬರ್, ಜ್ಯಾಕ್, ನೀಲಗಿರಿ ಇತ್ಯಾದಿಗಳ ಮೇಲೂ ದಾಳಿ ಮಾಡುತ್ತದೆ. ಈ ದುಂಬಿಗಳು ಜುಲೈ-ಆಗಸ್ಟ್ನಲ್ಲಿ ಹೊರಹೊಮ್ಮುತ್ತವೆ. ಸೆಪ್ಟೆಂಬರ್-ಅಕ್ಟೋಬರ್ ವೇಳೆಯಲ್ಲಿ ಮಧ್ಯಮ ತಾಪಮಾನ ಮತ್ತು ಮಧ್ಯಮ ಆರ್ದ್ರತೆ ಇದ್ದಾಗ ಬಾಧೆಯು ಹೆಚ್ಛಾಗುತ್ತದೆ. ಜೀವನ ಚಕ್ರ: ಮೊಟ್ಟೆಗಳನ್ನು ತೊಗಟೆಯ ಮೇಲೆ ಇಡುತ್ತವೆ ಮತ್ತು ಮೊಟ್ಟೆಯ ಕಾವಿನ ಕಾಲಾವಧಿ 7-13 ದಿನಗಳು. ಮರಿಹುಳುವಿನ ಅವಧಿ ಮತ್ತು ಕೋಶಾವಸ್ಥೆಯ ಅವಧಿ 140-160 ದಿನಗಳಿಂದ ಇರುತ್ತದೆ. ಕಾಂಡದ ಸುರಂಗದ ಒಳಗೆ ಕೋಶಾವಸ್ಥೆಗೆ ಹೋಗುತ್ತದೆ, ಇದು ಸುಮಾರು 20-25 ದಿನಗಳನ್ನು ತೆಗೆದುಕೊಳ್ಳುತ್ತದೆ. ಪ್ರೌಢ ಕೀಟದ ಅವಧಿ: ಕೋಶಾವಸ್ಥೆಯಿಂದ ಸುಮಾರು 120 -270 ದಿನಗಳಲ್ಲಿ ಹೊರಹೊಮ್ಮುತ್ತದೆ. ಒಂದು ವರ್ಷದಲ್ಲಿ ಕೀಟಗಳ ಒಂದು ಜೀವನ ಚಕ್ರ ಮಾತ್ರ ಮುಗಿಯುತ್ತದೆ.
ನಿರ್ವಹಣೆ:_x000D_ ತೋಟಗಳನ್ನು ಸ್ವಚ್ಛವಾಗಿಡಿ._x000D_ ಕಬ್ಬಿಣದ ತಂತಿ / ಕೊಕ್ಕೆ ಬಳಸಿ ಬಾಧೆಗೊಂಡ ಕಾಂಡದ ರಂಧ್ರಗಳಿಂದ ಮರಿಹುಳುಗಳನ್ನು ಯಾಂತ್ರಿಕವಾಗಿ ತೆಗೆದುಹಾಕಬೇಕು._x000D_ ಬಾಧೆಗೊಂಡ ಕೊಂಬೆಗಳನ್ನು ಕತ್ತರಿಸಿ ಮತ್ತು ನಾಶಪಡಿಸಿ._x000D_ ರಂಧ್ರಗಳನ್ನು ಸ್ವಚ್ಛಗೊಳಿಸಿ ಮತ್ತು ಡೈಕ್ಲೋರವಾಸ್ 76 ಇಸಿ (5 ಮಿಲಿ / ಲೀಟರ್) ದ್ರಾವಣದಲ್ಲಿ ನೆನೆಸಿದ ಹತ್ತಿ ಉಂಡೆಯನ್ನು ರಂಧ್ರಕ್ಕೆ ಸೇರಿಸಿ ಮತ್ತು ಮಣ್ಣಿನಿಂದ ರಂಧ್ರಗಳನ್ನು ಮುಚ್ಚಿ._x000D_ _x000D_ ಮೂಲ: ಭಾ.ಕೃ.ಅ.ಸಂ -CISH ಲಕ್ನೋ._x000D_ ನೀವು ಈ ಮಾಹಿತಿಯನ್ನು ಉತ್ತಮ ಎಂದು ಬಯಸಿದರೆ, ನಿಮ್ಮ ಹತ್ತಿರದ ರೈತರೊಂದಿಗೆ ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ._x000D_
15
0