ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಮಾವಿನ ಎಲೆ ಸುರುಳಿ ಮಾಡುವ ಹುಳುವಿನ ಭಾದೆ
ಕಳೆದ 20-25 ವರ್ಷಗಳ ನಂತರ ಎಲೆ ಸುರುಳಿ ಮಾಡುವ ಹುಳುವನ್ನು ಗಮನಿಸಲಾಗಿದೆ ಆದರೆ ಇಲ್ಲಿಯವರೆಗೆ ಅವು ಯಾವುದೇ ಹಾನಿಗೆ ಕಾರಣವಾಗಿಲ್ಲ; ಆದಾಗ್ಯೂ, ಗುಜರಾತನ ಸೌರಾಷ್ಟ್ರದಲ್ಲಿ ಮೊದಲ ಬಾರಿಗೆ ಮಾವಿನ ಹಣ್ಣು ಮತ್ತು ಎಲೆಗಳಿಗೆ ಹಾನಿ ಉಂಟಾಗಿದೆ. ಈ ಸೋಂಕು ಇತರ ಪ್ರದೇಶಗಳಲ್ಲಿ ಮತ್ತು ನೆರೆಯ ರಾಜ್ಯಗಳಲ್ಲಿ ಸಹ ಹರಡಬಹುದು. ಭಾದೆಯು ಸಾಮಾನ್ಯವಾಗಿ ಏಪ್ರಿಲ ನಿಂದ ನವೆಂಬರನ ಕಾಲಾವಧಿಯಲ್ಲಿ ಸಂಭವಿಸುವ ಸಾಧ್ಯತೆಯಿದೆ. ಹಾನಿ: ಆರಂಭದ ಹಂತದಲ್ಲಿ ಮರಿಹುಳುಗಳು ಮೇಲ ಪದರದ ಭಾಗವನ್ನು(ಎಪಿಡರ್ಮಿಸ್) ಹಾನಿಗೊಳಿಸುವುದರ ಮೂಲಕ ಎಲೆಗಳನ್ನು ಬಾಧಿಸುತ್ತವೆ. ಇದು ನಂತರ ಎಲೆ ಸುರುಳಿ ಮಾಡಿ ಒಳ ಭಾಗವನ್ನು ತಿನ್ನುತ್ತದೆ. ಈ ವರ್ಷ ಮಾವಿನ ಹಣ್ಣಿನ ಸಿಪ್ಪೆಯನ್ನು ತಿನ್ನುವ ಮೂಲಕ ಹಾನಿ ಮಾಡುವುದು ಕಂಡು ಬಂದಿದೆ. ಬಾಧೆಯು ಹಣ್ಣಿನ ಮೇಲಿನ ಭಾಗದಿಂದ ಆರಂಭವಾಗಿದ್ದರೆ, ಹಣ್ಣುಗಳು ಉದುರಬಹುದು. ಇದರ ಪರಿಣಾಮವಾಗಿ, ಹಣ್ಣಿನ ಗುಣಮಟ್ಟ ಕ್ಷೀಣಿಸುತ್ತದೆ ಮತ್ತು ಮಾರಾಟ ಮಾಡಲು ಮತ್ತು ಬಳಕೆಗೆ ಉಪಯುಕ್ತವಿರುವುದಿಲ್ಲ.
_x000D_ ಸಮಗ್ರ ನಿರ್ವಹಣೆ:_x000D_  ಕೊಳೆತ ಹಣ್ಣುಗಳನ್ನು ನಿಯಮಿತವಾಗಿ ಸಂಗ್ರಹಿಸಿ ನಾಶಮಾಡಿ._x000D_  ನಿಯಮಿತವಾಗಿ ಹಾನಿಗೊಳಗಾದ ಮತ್ತು ಮರಿಹುಳುಗಳಿಂದ ವೆಬಗಳನ್ನು ಮಾಡಿದ ಚಿಗುರುಗಳನ್ನು ಕಿತ್ತು ನಾಶಪಡಿಸಬೇಕು. _x000D_  ಸಾಕಷ್ಟು ಗಾಳಿಯಾಡಲು ಮತ್ತು ಸೂರ್ಯನ ಬೆಳಕು ದೊರೆಯಲು ನಿಯಮಿತವಾಗಿ ಮರದ ಚಾಟನಿಯನ್ನು ಮಾಡಿ._x000D_  ಏಪ್ರಿಲ್ ನಿಂದ ನವೆಂಬರಿನ ಕಾಲವಧಿಯಲ್ಲಿ ತೋಟದಲ್ಲಿ ಬೆಳಕಿನ ಬಲೆಗಳನ್ನು ಬಳಸಿ._x000D_  ಬೆವೇರಿಯಾ ಬೆಸ್ಸಿಯಾನ @ 40 ಗ್ರಾಂ/10 ಲೀಟರ್ ನೀರನ್ನು ಅಥವಾ ಬೇವಿನ ಬೀಜದ ಕಷಾಯವನ್ನು @ 5% ಅಥವಾ ಪ್ರತಿ 10-15 ಲೀಟರಿಗೆ ಬೇವಿನಾಧಾರಿತ ಸೂತ್ರೀಕರಣವನ್ನು 1500 ಪಿಪಿಎಂ ಅಥವಾ 10000 ಪಿಪಿಎಂ @10 ಮಿ.ಲೀ. ದಿಂದ 40 ಮಿ.ಲೀ. ನೀರನ್ನು 10-೧೫ ದಿನಗಳ ಅಂತರದಲ್ಲಿ ಸಿಂಪಡನೆ ಮಾಡಿ._x000D_  ಕೀಟಭಾದೆ ಹೆಚ್ಚಾದಲ್ಲಿ, ಪ್ರೋಫೆನೋಫೋಸ್ 50 ಇಸಿ @ 10 ಮಿ.ಲಿ. ಅಥವಾ ನೋವಲುರಾನ್ 10 ಇಸಿ @ 10 ಮಿ.ಲಿ. ಅಥವಾ ಲ್ಯಾಂಬ್ಡಾ ಸೈಹೆಥೋರಿನ್ 5 ಇಸಿ @ 10 ಮಿ.ಲಿ. 10-ಲೀಟರ್ ನೀರಿಗೆ ಬೇರೆಸಿ ಸಿಂಪಡನೆ ಮಾಡಿ._x000D_  ಸಿಂಪಡನೆ ಮತ್ತು ಮಾವಿನ ಹಣ್ಣುಗಳ ಕೊಯ್ಲಲಿನ ನಡುವೀನ ಸರಿಯಾದ ಅಂತರವನ್ನು ಗಮನಿಸಬೇಕು/ಲಕ್ಷದಲ್ಲಿಡಬೇಕು. _x000D_ ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
203
0
ಇತರ ಲೇಖನಗಳು