AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಮಾವಿನಲ್ಲಿ ಅಧಿಕ ಸಾಂದ್ರತೆಯ ನಾಟಿ  ಕೃಷಿಯ ಮಾಹಿತಿ
ಸಲಹಾ ಲೇಖನಕೃಷಿ ಸಂದೇಶ್
ಮಾವಿನಲ್ಲಿ ಅಧಿಕ ಸಾಂದ್ರತೆಯ ನಾಟಿ ಕೃಷಿಯ ಮಾಹಿತಿ
ಮಾವು ಬೆಳೆಯನ್ನು ಜೇಡಿ ಮಣ್ಣು ಅಥವಾ ಅತಿಯಾದ ಮರಳು ಇರುವ ಮಣ್ಣು ಅಥವಾ ಸುಣ್ಣಯುಕ್ತ, ಕ್ಷಾರೀಯ ಮಣ್ಣು ಮತ್ತು ನೀರು ನಿಂತ ಭೂಮಿ ಹೊರತುಪಡಿಸಿ ಬೇರೆ ಎಲ್ಲ ರೀತಿಯ ಮಣ್ಣಿನಲ್ಲಿಯು ಬೆಳೆಯಬಹುದು. 6.5 ರಿಂದ 7.5 ರಸ ಸಾರ (pH) ಇರುವ ಮಣ್ಣಿಗೆ ಆದ್ಯತೆ ನೀಡಲಾಗುತ್ತದೆ. ಅಧಿಕ ಸಾಂದ್ರತೆಯ ನಾಟಿ ಕೃಷಿಯ ಅಡಿಯಲ್ಲಿ, ಮಾವಿನ ಸಸಿಯನ್ನು 3 × 2 ಮೀಟರ ಅಂತರದಲ್ಲಿ ನೆಡಲಾಗುತ್ತದೆ, ಹೀಗಾಗಿ ಪ್ರತಿ ಎಕರೆಗೆ ಸುಮಾರು 674 ಸಸಿಗಳನ್ನು ನೆಡಬಹುದು. ಗುಂಡಿ ಅಗೆಯುವುದಕ್ಕಿಂತ ಮುಂಚೆ 3 × 2 ಮೀಟರ್ನಲ್ಲಿ ಗುರುತು ಮಾಡಿಕೊಳ್ಳಬೇಕು ಮತ್ತು ಗುರುತಿಸಿದ ಸ್ಥಳಗಳಲ್ಲಿ 1 × 1 × 1 ಮೀಟರ ಗುಂಡಿಯನ್ನು ಅಗೆಯಬೇಕು. ಪರ್ಯಾಯವಾಗಿ, ಪ್ರತಿ ಮೂರು ಮೀಟರ್ ಅಂತರದಲ್ಲಿ ಒಂದು ಮೀಟರ್ ಆಳ, ಮತ್ತು ಒಂದು-ಮೀಟರ್ ಅಗಲವಾದ ಗುಂಡಿಯನ್ನು ಅಗೆಯಬಹುದು. ಗುಂಡಿಯನ್ನು ಮುಚ್ಚುವ ಮೊದಲು ಕೆಲವು ವಾರಗಳವರೆಗೆ ಗಾಳಿಯಾಡಲು ಬಿಡಬೇಕು. ಗುಂಡಿಯಲ್ಲಿ 40-50 ಕಿ.ಗ್ರಾಂ. ಮಣ್ಣು ,0.5-1.0 ಕಿ.ಗ್ರಾಂ. ಸಿಂಗಲ್ ಸೂಪರ್ ಫಾಸ್ಫೇಟ್, 0.25 ಕಿ.ಗ್ರಾಂ. ನೀಮ್ ಕೇಕ್, 20 ಕಿ.ಗ್ರಾಂ. ಕಾಂಪೋಸ್ಟ್(ಕೊಟ್ಟಿಗೆ ಗೊಬ್ಬರ) ಮತ್ತು 10-15 ಗ್ರಾಂ. ಥೀಮೆಟ್ ಹಾಕಬೇಕು. ಕಸಿಮಾಡಿದ ಸಸಿಗಳನ್ನು ಬಳಸಿ ಮರಗಳನ್ನು ಬೆಳೆಸಬೇಕು. ಅಧಿಕ ಸಾಂದ್ರತೆಯ ನಾಟಿ ಕೃಷಿಗೆ ಎಪಿಕೊಟೈಲ್ ಕಸಿ ಮಾಡುವಿಕೆಯನ್ನು ಶಿಫಾರಸ್ಸು ಮಾಡಲಾಗಿದೆ ಏಕೆಂದರೆ ಮರದ ಆರೈಕೆ ಮೊದಲ ಹಂತದಲ್ಲಿಯೇ ಪ್ರಾರಂಭವಾಗುತ್ತದೆ. ಹೊಸದಾಗಿ ಕಸಿ ಮಾಡಿದ ಸಸಿಗಳಿಗೆ ಬಿದಿರಿನ ಕಟ್ಟಿಗೆಯ ಆಧಾರ/ಬೆಂಬಲ ತುಂಬಾ ಅವಶ್ಯಕ. ಅಧಿಕ ಸಾಂದ್ರತೆಯ ನಾಟಿ ಕೃಷಿತಂತ್ರಜ್ಞಾನದ ಮುಖ್ಯ ಅಂಶವೆಂದರೆ ಅದರ ಒಳಘಟಕಗಳ ನಿರ್ವಹಣೆ: ಇದಲ್ಲದೆ ಮರದ ಚಾವಣಿಯ ನಿರ್ವಹಣೆಯಾಗಿದೆ. ಹನಿ ನೀರಾವರಿ ಮೂಲಕ ನೀರು ಮತ್ತು ರಸಗೊಬ್ಬರ, ಈ ಎರಡು ಘಟಗಳನ್ನು ಒದಗಿಸಬೇಕು.
ಅಧಿಕ ಸಾಂದ್ರತೆಯ ಕೃಷಿಗೆ ಸೂಕ್ತವಾದ ಮಾವಿನ ತಳಿಗಳು: ಕೆಳಕಂಡ ಪಟ್ಟಿಯಲ್ಲಿ, ಬೇರೆ ಬೇರೆ ರಾಜ್ಯಗಳಿಗೆ ಅನುಗುಣವಾಗಿ ಅಧಿಕ ಸಾಂದ್ರತೆಯ ಪದ್ದತಿಯಲ್ಲಿ ಬೆಳೆಯುವ ವಿವಿಧ ಮಾವಿನ ತಳಿಗಳು; ಆಂಧ್ರ ಪ್ರದೇಶ:- ಅಲ್ಫಾನಸೊ , ಆಲಂಪುರ, ಬನೇಶಾನ್, ತೋತಾಪುರಿ ಬಿಹಾರ:- ಬೊಂಬಾಯಿ, ಹಿಮಸಾಗರ, ಲಂಗ್ರಾ, ಚಾಸಾ ಗೋವಾ:- ಮಂಕುರಡ ಗುಜರಾತ:- ಅಲ್ಫಾನಸೊ, ಕೇಸರ ಕರ್ನಾಟಕ:- ಅಲ್ಫಾನಸೊ, ಬಂಗಲೋರಾ, ನೀಲಮ್, ಮಲ್ಲಿಕಾ ತಮಿಳನಾಡು:- ಅಲ್ಫಾನಸೊ, ಬಂಗಾನಪಳ್ಳಿ, ನೀಲಮ್ ಉತ್ತರ ಪ್ರದೇಶ:- ಬಾಂಬೆ ಗ್ರೀನ್, ದಾಶೇರಿ, ಲಂಗ್ರಾ, ಮಹಾರಾಷ್ಟ್ರ:- ಅಲ್ಫಾನಸೊ  , ಕೇಸರ್, ರತ್ನಾ ಮೂಲ: ಕೃಷಿ ಸಂದೇಶ್ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
27
0