ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಪಶುಸಂಗೋಪನೆಕೃಷಿ ಜಾಗರಣ್
ಮನೆಯಲ್ಲಿ ತಯಾರಿಸುವಂತಹ ಸಮತೋಲಿತ ಪಶುಆಹಾರದ ಬಗ್ಗೆ ಮಾಹಿತಿ
ಸಮತೋಲಿತ ಆಹಾರವು ಪ್ರಾಣಿಗಳಲ್ಲಿ ಹಾಲು ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಪ್ರಾಣಿಗಳಿಗೆ ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು, ಸಮತೋಲಿತ ಪಶುಆಹಾರವನ್ನು ತಯಾರಿಸುವುದು ಬಹಳ ಸುಲಭವಾದ ಕೆಲಸವಾಗಿದೆ. ಇದು ಕಷ್ಟಕರವಾದ ಕೆಲಸವಲ್ಲ. ಮನೆಯಲ್ಲಿ ಸಮತೋಲಿತ ಪ್ರಾಣಿಯನ್ನು ತಯಾರಿಸಲು ಕೆಲವು ಉಪಾಯಗಳು ಇಲ್ಲಿದೆ. 100 ಕೆ.ಜಿ ಸಮತೋಲಿತ ಆಹಾರವನ್ನು ಮಾಡುವ ವಿಧಾನ:  ಏಕದಳ ಧಾನ್ಯಗಳ (ಮೆಕ್ಕೆಜೋಳ, ಬಾರ್ಲಿ, ಗೋಧಿ, ರಾಗಿ) ಪ್ರಮಾಣವು ಸುಮಾರು 35 ಪ್ರತಿಶತ ಇರಬೇಕು.  ಸಾಸಿವೆ (ಸಾಸಿವೆ ಸಿಪ್ಪೆ, ನೆಲಗಡಲೆಯ ಸಿಪ್ಪೆ) ಪ್ರಮಾಣ ಸುಮಾರು 32 ಕೆ.ಜಿ. ನೆಲಗಡಲೆಯ ಸಿಪ್ಪೆಯನ್ನು ಒಂದು ಧಾನ್ಯದಲ್ಲಿ ಬೆರೆಸಬಹುದು.  ಧಾನ್ಯಗಳ ತವಡು (ಗೋಧಿ ಹೊಟ್ಟು, ಕಡಲೆಬೆಳೆ ನುಚ್ಚು, ಅಕ್ಕಿ ನುಚ್ಚು) ಪ್ರಮಾಣ ಸುಮಾರು 35 ಕೆ.ಜಿ.  2 ಕೆಜಿ ಖನಿಜಾಂಶಗಳು, ಉಪ್ಪಿನಂಶ 2 ಕೆಜಿ, ಉಪ್ಪು 1 ಕೆಜಿ.  ಈ ಮೇಲೆ ಬರೆದಿರುವ ಧಾನ್ಯಗಳ ಪ್ರಮಾಣಗಳನ್ನು ಅಳತೆಗೆ ಅನುಗುಣವಾಗಿ ತೆಗೆದುಕೊಂಡು ಪಶುಆಹಾರವಾಗಿ ನೀಡಿ. ಸಮತೋಲಿತ ಪಶುಆಹಾರದ ಪ್ರಮಾಣವನ್ನು ಎಷ್ಟು ಕೊಡಬೇಕು?  ಹಸುವಿಗೆ-1.5 ಕೆ.ಜಿ ಮತ್ತು ಎಮ್ಮೆಗೆ-2 ಕೆ.ಜಿ ಪ್ರತಿ ದಿನಕ್ಕೆ ಕೊಡಬೇಕು.  ಹಾಲು ನೀಡುವ ಹಸುವಿಗೆ ಒಂದು ಲೀಟರ್ ಹಾಲು ಕೊಡುತ್ತಿದ್ದರೆ ಅದಕ್ಕೆ 1 ಲೀಟರ್ ಹಾಲಿನ ಹಿಂದೆ 400 ಗ್ರಾಂ ಮತ್ತು ಎಮ್ಮೆಗಳು ಒಂದು ಲೀಟರ್ ಹಾಲು ಕೊಡುತ್ತಿದ್ದರೆ ಅದಕ್ಕೆ 500 ಗ್ರಾಂ ನಷ್ಟು ಹೆಚ್ಚಿನ ಧಾನ್ಯವನ್ನು ನೀಡಬೇಕು.  ಆರು ತಿಂಗಳ ಗರ್ಭಿಣಿ ಹಸುವಿಗೆ ಅಥವಾ ಎಮ್ಮೆಗೆ ಪ್ರತಿದಿನ 1 -1.5 ಕೆಜಿ ಧಾನ್ಯವನ್ನು ನೀಡಿ.  ಕರುಗಳಿಗೆ, ಅದರ ವಯಸ್ಸು ಮತ್ತು ತೂಕಕ್ಕೆ ಅನುಗುಣವಾಗಿ ದಿನಕ್ಕೆ ಒಂದು ಕೆ. ಜಿ ಯಿಂದ 2.5 ಕೆಜಿ ಧಾನ್ಯವನ್ನು ನೀಡಬೇಕು. ಮೂಲ: ಕೃಷಿ ಜಾಗರಣ
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
575
1
ಕುರಿತು ಪೋಸ್ಟ್