AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಮಣ್ಣಿನ ಪರೀಕ್ಷೆಗಾಗಿ, ಮಣ್ಣಿನ ಮಾದರಿಯನ್ನು ಹೇಗೆ ತೆಗೆದುಕೊಳ್ಳುವುದು?
ಸಲಹಾ ಲೇಖನವಾರದ ರೈತ
ಮಣ್ಣಿನ ಪರೀಕ್ಷೆಗಾಗಿ, ಮಣ್ಣಿನ ಮಾದರಿಯನ್ನು ಹೇಗೆ ತೆಗೆದುಕೊಳ್ಳುವುದು?
ಇತ್ತೀಚಿನ ದಿನಗಳಲ್ಲಿ, ರೈತರು ಮಣ್ಣಿನ ಆರೋಗ್ಯವನ್ನು ನಿರ್ಲಕ್ಷಿಸುತ್ತಿರುವದನ್ನು ಕಾಣಬಹುದು. ರಾಸಾಯನಿಕ ರಸಗೊಬ್ಬರಗಳ ಅಸಮತೋಲಿತ ಬಳಕೆ ಮತ್ತು ಸಾವಯವ ರಸಗೊಬ್ಬರಗಳ ಕೊರತೆಯಿಂದಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ. ಆದ್ದರಿಂದ ಪ್ರತಿ ಎರಡು ವರ್ಷಕೊಮ್ಮೆಯಂತೆ ರೈತನು ತನ್ನ ಹೊಲದ ಮಣ್ಣನ್ನು ಪರೀಕ್ಷಿಸುವುದು ಅವಶ್ಯಕವಾಗಿದೆ. ಮಣ್ಣಿನ ಮಾದರಿಯನ್ನು ಹೇಗೆ ತೆಗೆದುಕೊಳ್ಳುವುದು? 1. ಫಸಲಿನ ಕಟಾವು ಅಥವಾ ಬಿತ್ತನೆ ಮಾಡುವ ಮೂರು ತಿಂಗಳ ನಂತರ, ಅಥವಾ ಸಾವಯವ ಅಥವಾ ರಾಸಾಯನಿಕ ಗೊಬ್ಬರಗಳನ್ನು ಸಿಂಪಡಿಸುವ ಮೊದಲು ಅಥವಾ ಸಿಂಪಡಿಸಿದ ಮೂರು ತಿಂಗಳ ನಂತರ ಮಣ್ಣಿನ ಮಾದರಿಯನ್ನು ತೆಗೆದುಕೊಳ್ಳಬೇಕು. ಮಣ್ಣಿನ ಮಾದರಿಗಾಗಿ, ಅರ್ಧ ಕೆಜಿಯಷ್ಟು ಮಣ್ಣು ಬೇಕಾಗುತ್ತದೆ. 2. ಮಣ್ಣಿನ ಪರೀಕ್ಷೆಗಾಗಿ, ಮಣ್ಣಿನ ಮಾದರಿಯನ್ನು ಯಾದೃಚ್ಛಿಕ ತರಂಗಗಳ ರೀತಿಯಲ್ಲಿ, 8 ರಿಂದ 10 ಕಡೆಗಳಿಂದ ತೆಗೆದುಕೊಳ್ಳಿ. 3. ಮಣ್ಣಿನ ಮಾದರಿಯನ್ನು ತೆಗೆದುಕೊಳ್ಳುವಾಗ, 15-20 ಸೆಂಟಿಮೀಟರ್ ಆಳವಿರುವ ‘ವಿ’ ಆಕಾರದ ಗುಂಡಿಯನ್ನು ತೆಗೆಯಿರಿ, ಮಣ್ಣನ್ನು ಒಂದು ಕಡೆಯಿಂದ ಮಾತ್ರ ತೆಗೆದುಕೊಳ್ಳಿ. 2 -3 ಸೆ.ಮೀ ದಪ್ಪವಿರುವ ಮಣ್ಣನ್ನು ತೆಗೆದುಕೊಳ್ಳಿ.
4. ಹೊಲದ 8 ರಿಂದ 10 ಭಾಗಗಳಿಂದ ಮಣ್ಣಿನ ಮಾದರಿಯನ್ನು ತೆಗೆದುಕೊಂಡ ನಂತರ, ಆ ಮಣ್ಣಿನಲ್ಲಿರುವ ಕಲ್ಲು, ಕಸ, ಕಡ್ಡಿಗಳನ್ನು ತೆಗೆಯಿರಿ. 5. ಎಲ್ಲಾ ಜಾಗಗಳಿಂದ ತೆಗೆದುಕೊಂಡ ಮಣ್ಣನ್ನು ಒಂದು ಸ್ಟೀಲಿನ ಬಟ್ಟಲಿನಲ್ಲಿ ಹಾಕಿ, ಚೆನ್ನಾಗಿ ಬೆರೆಸಿ ನಂತರ ಅದನ್ನು ಜರಡಿ ಮಾಡಿ ಅದರಿಂದ ಕೇವಲ ಅರ್ಧ ಕೆಜಿ ಮಣ್ಣನ್ನು ಮಾತ್ರ ಚೀಲದಲ್ಲಿ ತೆಗೆದಿಟ್ಟುಕೊಳ್ಳಿ. ಈಗ ರೈತನ ಹೆಸರು, ಊರಿನ ಹೆಸರು, ಮತ್ತು ಮಣ್ಣನ್ನು ತೆಗೆದುಕೊಂಡ ಹೊಲದ ಸರ್ವೆ ಸಂಖ್ಯೆಯನ್ನು ಒಂದು ಕಾಗದದ ಮೇಲೆ ಬರೆದು ಅದನ್ನು ಆ ಮಣ್ಣಿನ ಮಾದರಿ ಚೀಲದ ಮೇಲೆ ಅಂಟಿಸಿ ಅಥವಾ ಅದರಲ್ಲಿ ಹಾಕಿ. ಈಗ ಇದನ್ನು ನೀವು ಮಣ್ಣಿನ ಪರೀಕ್ಷೆಗಾಗಿ ಕಳುಹಿಸಿ. ಮಣ್ಣಿನ ಪರೀಕ್ಷೆಯ ಉದ್ದೇಶ: ಬೆಳೆ ಬೆಳವಣಿಗೆಗೆ ಅಗತ್ಯವಿರುವ ಪೌಷ್ಟಿಕಾಂಶಗಳ ಕೊರತೆಯನ್ನು ತಿಳಿಯಲು ಮತ್ತು ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತಿಳಿಯಲು, ಮಣ್ಣಿನ ಪರೀಕ್ಷೆ ಅವಶ್ಯಕವಾಗಿದೆ. ವಾರದ ರೈತ
265
0