AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಮಣ್ಣಿನಲ್ಲಿ ಜಿಪ್ಸಮ್ ಬಳಕೆಯ ಪ್ರಯೋಜನಗಳು
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಮಣ್ಣಿನಲ್ಲಿ ಜಿಪ್ಸಮ್ ಬಳಕೆಯ ಪ್ರಯೋಜನಗಳು
 ಕೃಷಿ ಭೂಮಿಯಲ್ಲಿನ ಬೆಳೆಗಳಿಗೆ ಇದು ಕ್ಯಾಲ್ಸಿಯಂ ಮತ್ತು ಗಂಧಕದ ಸಂಪೂರ್ಣ ಅವಶ್ಯಕತೆಗಳನ್ನು ಒದಗಿಸುತ್ತದೆ._x005F_x000D_  ಇದು ಬೆಳೆಯ ಬೇರುಗಳ ಸಾಮಾನ್ಯ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಸಹಾಯ ಮಾಡುತ್ತದೆ._x005F_x000D_  ಜಿಪ್ಸಮ್ನ್ನು ಬೆಳೆ ಸಂರಕ್ಷಣೆಯಲ್ಲಿ ಬಳಸಬಹುದು ಏಕೆಂದರೆ ಇದು ಸೂಕ್ತವಾದ ಗಂಧಕವನ್ನು ಹೊಂದಿರುತ್ತದೆ._x005F_x000D_  ಬೀಜ ಉತ್ಪಾದನೆ ಮತ್ತು ಸಸ್ಯಗಳು ಮತ್ತು ಎಣ್ಣೆಗಳಿಂದ ವಿಶೇಷ ಸುವಾಸನೆಗಾಗಿ ಮುಖ್ಯವಾಗಿ ತೈಲಬೀಜ ಬೆಳೆಗಳಿಗೆ ಜಿಪ್ಸಮ್ನ ಬಳಕೆಯು ಕಾರ್ಯ ನಿರ್ವಹಿಸುತ್ತದೆ._x005F_x000D_  ಮಣ್ಣಿನಲ್ಲಿ ಜಿಪ್ಸಮ್ನ ಬಳಕೆ ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳನ್ನು ಸಾಮಾನ್ಯವಾಗಿ ಸಾರಜನಕ, ರಂಜಕ , ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಗಂಧಕದ ಲಭ್ಯತೆಯನ್ನು ಹೆಚ್ಚಿಸುತ್ತದೆ._x005F_x000D_  ಜಿಪ್ಸಮ್ ಕ್ಯಾಲ್ಸಿಯಂನ ಪ್ರಮುಖ ಮೂಲವಾಗಿದೆ, ಇದು ಮಣ್ಣು ಜೇಡಿ ಕಣಗಳಿಗೆ ಸಾವಯವ ವಸ್ತುಗಳನ್ನು ಬಂಧಿಸುತ್ತದೆ, ಮಣ್ಣಿನ ಕಣಗಳಲ್ಲಿ ಸ್ಥಿರತೆಯನ್ನು ಒದಗಿಸುತ್ತದೆ ಮತ್ತು ಮಣ್ಣಿನ ಗಾಳಿಯನ್ನು ನಿರ್ವಹಿಸುತ್ತದೆ._x005F_x000D_  ಜಿಪ್ಸಮ್ ಮಣ್ಣಿನಲ್ಲಿ ಗಟ್ಟಿಯಾದ ಪದರದ ರಚನೆಯನ್ನು ತಡೆಯುತ್ತದೆ ಮತ್ತು ಮಣ್ಣಿನಲ್ಲಿ ನೀರಿನ ಇಂಗುವಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ._x005F_x000D_  ಕ್ಯಾಲ್ಸಿಯಂ ಕೊರತೆಯಿಂದಾಗಿ, ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ, ಸಸ್ಯಗಳ ಬೆಳವಣಿಗೆಯನ್ನು ಸ್ಥಗಿತಗೊಳ್ಳದೆ ಇರುವುದಕ್ಕೆ ಜಿಪ್ಸಮ್ ಕ್ಯಾಲ್ಸಿಯಂ ಲಭ್ಯತೆಗೆ ಸಹಾಯ ಮಾಡುತ್ತದೆ.ಕ್ಷಾರೀಯ ಮಣ್ಣಿನ ಸುಧಾರಣೆಗೆ ಜಿಪ್ಸಮ್ ಒಳ್ಳೆಯ ಕಾರ್ಯ ಮಾಡುತ್ತದೆ.ಜಪ್ಸಮ್ ಆಮ್ಲೀಯ ಮಣ್ಣುಗಳ ಮೇಲೆ ಅಲ್ಯೂಮಿನಿಯಂನ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ._x005F_x000D_  ಇದು ಇಳುವರಿಯನ್ನು ಹೆಚ್ಚಿಸಲು ಮತ್ತು ಬೆಳೆ ಇಳುವರಿ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
18
0