ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಸಲಹಾ ಲೇಖನಅಪನಿ ಖೇತಿ
(ಭಾಗ-2) ಅಶ್ವಗಂಧ ಕೃಷಿ ವಿಧಾನಗಳು: ಔಷಧೀಯ ಸಸ್ಯ
ನರ್ಸರಿ ನಿರ್ವಹಣೆ ಮತ್ತು ನಾಟಿಕೆ: ಉತ್ತಮ ಉಳುಮೆಗಾಗಿ ಬಿತ್ತನೆ ಮಾಡುವ ಮೊದಲು ಹೊಲದಲ್ಲಿ ಎರಡು ಬಾರಿ ನೇಗಿಲು ಮತ್ತು ಕುಂಟೆ ಹೊಡೆಯಬೇಕು ಮತ್ತು ಅದರ ಪೋಷಕಾಂಶ ಹೆಚ್ಚಿಸಲು ಅನೇಕ ಸಾವಯವ ಗೊಬ್ಬರ ಹಾಕಬೇಕು. ಬೀಜೋಪಚಾರ ಮಾಡಿದ ಬೀಜಗಳನ್ನು ನರ್ಸರಿ ಮಡಿಗಳಲ್ಲಿ ಬಿತ್ತನೆ ಮಾಡಬೇಕು. ನಾಟಿ ಮಾಡುವ ಮೊದಲು, 10-20 ಟನ್ ಕೊಟ್ಟಿಗೆ ಗೊಬ್ಬರ, 15 ಕೆಜಿ ಯೂರಿಯಾ, ಮತ್ತು 15 ಕೆಜಿ ರಂಜಕ ರಸ ಗೊಬ್ಬರದ ಪ್ರಮಾಣವನ್ನು ಸಿಂಪಡಿಸಿ. ಬೀಜಗಳು 5-7 ದಿನಗಳಲ್ಲಿ ಮೊಳಕೆಯೊಡೆಯಲು ಪ್ರಾರಂಭಿಸುತ್ತವೆ ಮತ್ತು ಸುಮಾರು 35 ದಿನಗಳಲ್ಲಿ ನಾಟಿ ಮಾಡಲು ಸಿದ್ಧವಾಗುತ್ತವೆ. ನಾಟಿ ಮಾಡುವುದಕ್ಕಿಂತ ಮುಂಚಿತವಾಗಿ, ಸಾಕಷ್ಟು ನೀರು ಹಾಯಿಸಿ ಇದರಿಂದ ಸಸಿಗಳನ್ನು ಸುಲಭವಾಗಿ ಕೀಳಬಹುದು. ಹೊಲದಲ್ಲಿ 40 ಸೆಂ.ಮೀ ಅಗಲವಾದ ಸಾಲುಗಳಲ್ಲಿ ನೇಗಿಲುನ್ನು ಹೊಡೆಯಬೇಕು. ರಸಗೊಬ್ಬರ ನಿರ್ವಹಣೆ: ಬಿತ್ತನೆಗಾಗಿ ಭೂಮಿಯನ್ನು ತಯಾರಿಸುವಾಗ ಎಕರೆಗೆ ಸುಮಾರು 4-8 ಟನ್ ಕೊಟ್ಟಿಗೆ ಗೊಬ್ಬರವನ್ನು ಹಾಕಬೇಕು. ನಂತರ ಹೊಲವನ್ನು ಮರದ ಹಲಗೆಯಿಂದ(ಫಳಿ) ಸಮ ಮಾಡಬೇಕು, ಫಳಿ ಹೊಡೆಯುವುದರಿಂದ ಹೊಲ ಸಮನಾಗುತ್ತದೆ. ಇದು ಔಷಧೀಯ ಸಸ್ಯವಾಗಿರುವುದರಿಂದ ಸಾವಯವ ಕೃಷಿಯ ಮೂಲಕ ಬೆಳೆಸಲಾಗುತ್ತದೆ, ಇದರಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಉಪಯೋಗ ಮಾಡುವುದಿಲ್ಲ. ಕೆಲವು ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ (ಎಫ್‌ವೈಎಂ), ವರ್ಮಿ-ಕಾಂಪೋಸ್ಟ್ (ಮಿಶ್ರಗೊಬ್ಬರ), ಮತ್ತು ಹಸಿರು ಗೊಬ್ಬರ ಇತ್ಯಾದಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ಬಳಸಲಾಗುತ್ತದೆ. ಮಣ್ಣು ಅಥವಾ ಬೀಜದಿಂದ ಹರಡುವ ರೋಗಗಳನ್ನು ತಪ್ಪಿಸಲು ಬೇವು, ಚಿತ್ರಮೂಲಿಕಾ, ಧತುರಾ, ಹಸುವಿನ ಮೂತ್ರ ಇತ್ಯಾದಿಳನ್ನು ಉಪಯೋಗಿಸಿ ಕೆಲವು ಜೈವಿಕ ಕೀಟನಾಶಕಗಳನ್ನು ತಯಾರಿಸಲಾಗುತ್ತದೆ. ಫಲವತ್ತಾದ ಭೂಮಿಯಿಂದ ಹೆಚ್ಚಿನ ಇಳುವರಿ ಪಡೆಯಲು ಎಕರೆಗೆ 6 ಕಿ.ಗ್ರಾಂ. ಸಾರಜನಕ (ಯೂರಿಯಾ @ 14 ಕಿ.ಗ್ರಾಂ.) ಮತ್ತು ಎಕರೆಗೆ 6 ಕಿ.ಗ್ರಾಂ. ರಂಜಕ (ಎಸ್‌ಎಸ್‌ಪಿ @ 38 ಕಿ.ಗ್ರಾಂ.) ಪ್ರಮಾಣದಲ್ಲಿ ಹಾಕಬೇಕು. ಕಡಿಮೆ ಫಲವತ್ತಾದ ಭೂಮಿಯಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಲು ಹೆಕ್ಟೇರಿಗೆ 40 ಕೆಜಿ ಸಾರಜನಕ ಮತ್ತು ರಂಜಕ ಹಾಕಿದರೆ ಸಾಕು. ಕಳೆ ನಿಯಂತ್ರಣ: ಕೃಷಿ ಭೂಮಿಯನ್ನು ಕಳೆ ಮುಕ್ತವಾಗಿರಿಸಲು ಸಾಮಾನ್ಯವಾಗಿ ಎರಡು ಬಾರಿ ಕಳೆ ತೆಗೆಯಬೇಕು. ಮೊದಲ ಬಾರಿ ಬಿತ್ತನೆಯ ಸುಮಾರು 20-25 ದಿನಗಳಲ್ಲಿ ಒಮ್ಮೆ ತೆಗೆಯಬೇಕು ಮತ್ತು ಮೊದಲ ಸಲ ಕಳೆ ತೆಗೆದ 20-25 ದಿನಗಳ ನಂತರ ಎರಡನೇ ಬಾರಿ ಕಳೆ ತೆಗೆಯಬೇಕು. ಕಳೆಗಳನ್ನು ನಿಯಂತ್ರಿಸಲು ಬೀಜಗಳನ್ನು ಬಿತ್ತನೆ ಮಾಡುವ ಮೊದಲು, ಪ್ರತಿ ಎಕರೆಗೆ ಐಸೊಪ್ರೊಟುರಾನ್ 200 ಗ್ರಾಂ ಮತ್ತು ಗ್ಲೈಫೋಸೇಟ್ 600 ಗ್ರಾಂ ಪ್ರಮಾಣದಂತೆ ಬಳಸಿ. ನೀರಾವರಿ: ಅತಿಯಾದ ನೀರು ಅಥವಾ ಮಳೆ ಬೆಳೆಗಳಿಗೆ ಹಾನಿಕಾರಕ. ಭಾರೀ ಮಳೆಯ ಸಂದರ್ಭದಲ್ಲಿ, ನೀರು ಹಾಯಿಸುವ ಅಗತ್ಯವಿಲ್ಲ, ಬೇಕಿದ್ದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಹಾಯಿಸಬೇಕು. ನೀರಾವರಿ ಸಂದರ್ಭದಲ್ಲಿ 10-15 ದಿನಗಳಿಗೊಮ್ಮೆ ಬೆಳೆಗೆ ನೀರು ಹಾಯಿಸಬೇಕು. ಮೊದಲ ನೀರಾವರಿ ಮೊಳಕೆಯೊಡೆದ 30-35 ದಿನಗಳ ನಂತರ ಮತ್ತು ನಂತರ 60-70 ದಿನಗಳ ನಂತರ ಎರಡನೇ ಬಾರಿ ನೀರು ಹಾಯಿಸಬೇಕು. ಕೊಯ್ಲು: ಬೆಳೆಗಳು 160-180 ದಿನಗಳಲ್ಲಿ ಪಕ್ವಗೊಳ್ಳಲು ಪ್ರಾರಂಭಿಸುತ್ತವೆ. ಸಸ್ಯವನ್ನು ಕೈಯಿಂದ ಕೀಳುವ ಮೂಲಕ ಅಥವಾ ಬೇರುಗಳಿಗೆ ಹಾನಿಯಾಗದಂತೆ ಪವರ್ ಟಿಲ್ಲರ್ ಅಥವಾ ಕಂಟ್ರಿ ನೇಗಿಲಿನಂತಹ ಯಂತ್ರಗಳಿಂದ ಕೊಯ್ಲು ಮಾಡಲಾಗುತ್ತದೆ. ಮೂಲ: ಅಪ್ನಿ ಖೇತಿ
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
332
0
ಕುರಿತು ಪೋಸ್ಟ್