AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
(ಭಾಗ 1) ಟೊಮೆಟೊದಲ್ಲಿ ತ್ರಿವರ್ಣ ಸಮಸ್ಯೆ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
(ಭಾಗ 1) ಟೊಮೆಟೊದಲ್ಲಿ ತ್ರಿವರ್ಣ ಸಮಸ್ಯೆ
ಟೊಮೆಟೊಗಳಲ್ಲಿ ತ್ರಿವರ್ಣ ಸಮಸ್ಯೆಗಳನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಎರಡು ಹಂತಗಳಲ್ಲಿ ಯೋಜನೆ ಮಾಡಬೇಕು. ಮೊದಲ ಹಂತದಲ್ಲಿ, ಸಮಸ್ಯೆಗಳು ಹುಟ್ಟುವ ಮೊದಲೇ ತಡೆಗಟ್ಟಲು ನಾವು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಎರಡನೇ ಹಂತದಲ್ಲಿ, ಈ ಸಮಸ್ಯೆಗಳನ್ನು ಕಂಡುಬಂದರೆ, ನಾವು ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡಲು ಕೆಲವು ತಕ್ಷಣದ ಕ್ರಮ ತೆಗೆದುಕೊಳ್ಳಬೇಕು. ರೋಗಗಳ ಲಕ್ಷಣಗಳು: ಹಣ್ಣಿನ ಬಹುಪಾಲು ಹಳದಿಯಾಗಿ ಉಳಿಯುವ ಮೂಲಕ, ಹಣ್ಣುಗಳು ಸಂಪೂರ್ಣವಾಗಿ ಬೆಳೆಯಲು ವಿಫಲಗೊಳ್ಳುತ್ತದೆ. ತಪ್ಪು ಕಲ್ಪನೆ: ತ್ರಿವರ್ಣ ಹಣ್ಣಿನ ಪ್ರಭೇದ/ ಜಾತಿ ಕಾರಣದಿಂದಾಗಿ ಉಂಟಾಗುತ್ತದೆ ಮತ್ತು ಇದು ನಂಜಾಣು ರೋಗಗಳಿಗೆ ಕಾರಣವಾಗಿದೆ. ಕಾರಣಗಳು: ಈ ಸಮಸ್ಯೆಯ ಸರಿಯಾದ ಕಾರಣವನ್ನು ಗುರುತಿಸಲು ಸ್ವಲ್ಪ ಕಷ್ಟವಾಗಿದ್ದರೂ, ಕೆಳಗೆ ತಿಳಿಸಲಾದ ಕೆಲವು ಕಾರಣಗಳಿಂದ ಇದು ಸಂಭವಿಸುತ್ತದೆ. 1. ಕಡಿಮೆ ಗುಣಮಟ್ಟದ / ಕಡಿಮೆ ಫಲವತ್ತಾದ ಭೂಮಿಯನ್ನು ಆಯ್ಕೆ ಮಾಡುವುದು ಟೊಮೆಟೊ ಕೃಷಿಗಾಗಿ ಬಳಸಲಾಗುತ್ತದೆ 2. ಅಸಮತೋಲನ ಪೋಷಕಾಂಶಗಳನ್ನು ಬಳಸುವುದು. 3. ರಸ ಹೀರುವ ಕೀಟ ಬಾಧೆ. 4. ನಂಜಾಣು ರೋಗಬಾಧೆ 5. ಅನಿಯಮಿತ ಮತ್ತು ಹೆಚ್ಚು / ಕಡಿಮೆ ನೀರಿನ ನಿರ್ವಹಣೆ 6. ತೀವ್ರತರವಾದ ತಾಪಮಾನದಲ್ಲಿ ಅನುಚಿತ ಆರೈಕೆ
ಮೊದಲ ಹಂತದಲ್ಲಿ ಸಮಸ್ಯೆಗಳನ್ನು ತಡೆಗಟ್ಟುವ ಕ್ರಮಗಳು:_x005F_x000D_ _x005F_x000D_ 1.ಭೂಮಿ ಆಯ್ಕೆ- ಟೊಮೆಟೊ ಬೆಳೆಯನ್ನು ಬೆಳೆಸಲು ಭೂಮಿ ಫಲವತ್ತಾಗಿರಬೇಕು, ಪೋಷಕಾಂಶಗಳೊಂದಿಗೆ ಸಮೃದ್ಧವಾರಬೇಕು ಮತ್ತು ನೀರು ಅದರಿಂದ ಹರಿದುಹೋಗಬೇಕು. ವಿಶಾಲ ಎತ್ತರದ ಮಡಿಗಳನ್ನು ಮಾಡಿ, ಇದರಿಂದಾಗಿ ಬೇರುಗಳ ಬಳಿ ಮಣ್ನಿನಲ್ಲಿ ಗಾಳಿಯಾಡುತ್ತದೆ. ಕೃಷಿಗಾಗಿ, ಹನಿ ನೀರಾವರಿ ಬಳಸಿ. ಮಡಿ 0.5 ಅಡಿ ಎತ್ತರ ಮತ್ತು 3 ಅಡಿ ಅಗಲವನ್ನು ಹೊಂದಿದ್ದರೆ, ಬಿಳಿ ಬೇರುಗಳು ಸಕ್ರಿಯಗೊಳ್ಳುತ್ತವೆ ಮತ್ತು ಪೋಷಕಾಂಶಗಳ ಸರಬರಾಜು ಉತ್ತಮವಾಗಿ ನಿರ್ವಹಿಸಲ್ಪಡುತ್ತದೆ._x005F_x000D_ _x005F_x000D_ 2. ಸಮತೋಲಿತ ಪೋಷಕಾಂಶಗಳ ಬಳಕೆ- ಸಾಧ್ಯವಾದಲ್ಲಿ, ಮಣ್ಣಿನಲ್ಲಿರುವ ಪೋಷಕಾಂಶಗಳ ತಿಳಿದುಕೊಳ್ಳಿ ಮತ್ತು ಟೊಮೆಟೊ ಬೆಳೆಯುವ ಮೊದಲು ಮಣ್ಣನ್ನು ಪರೀಕ್ಷಿಸಿ. ಜೊತೆಗೆ, ಮಡಿಗಳನ್ನು ಮಾಡುವ ಸಮಯದಲ್ಲಿ, ರಸಗೊಬ್ಬರದ ಮೂಲ ಪ್ರಮಾಣವನ್ನು (ಸಾವಯವ ಗೊಬ್ಬರ, ನೀಮ್ ಕೇಕ್ , ಸಾರಜನಕ, ರಂಜಕ , ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಮೂಲ ಪ್ರಮಾಣದಲ್ಲಿ ಗಂಧಕ ಸೇರಿವೆ.) ಟೊಮೆಟೊ ಬೆಳೆಯಲ್ಲಿ ಸಾಮಾನ್ಯವಾಗಿ ಕರಗುವ ರಸಗೊಬ್ಬರಗಳನ್ನು ನೀರಾವರಿ ಮೂಲಕ ನೀಡಬೇಕು._x005F_x000D_ _x005F_x000D_ 3.ಋತುವಿನ ಪ್ರಕಾರ ಸರಿಯಾದ ತಳಿಗಳನ್ನುಗಳ ಆಯ್ಕೆ - ಉತ್ತಮ ಟೊಮೆಟೊ ಇಳುವರಿಗಾಗಿ ಹೈಬ್ರಿಡ್ ಪ್ರಭೇದಗಳನ್ನು ಆರಿಸುವಾಗ, ಕೆಳಗಿನ ಚಟುವಟಿಕೆಗಳನ್ನು ಪರಿಗಣಿಸಿ. ದಿನ ಕಡಿಮೆ ಮತ್ತು ರಾತ್ರಿ ದೊಡ್ಡದಾಗಿದ್ದಾಗ ಬೇಸಿಗೆಯ ತಳಿಗಳನ್ನು ಆಯ್ಕೆ ಮಾಡಿವುದರಿಂದ ಉತ್ಪಾದನೆ ಬರುವುದಿಲ್ಲ . ಆದ್ದರಿಂದ, ಸೆಮಿನಿಸ್- ಅನ್ಸಾಲ್, ಆಯುಶ್ಮನ್, ಸಿಂಜೆಂಟಾ -6242, 1057, ಬಾಯರ್ -1143, ಬಯೋಸೀಡ್ ವೀರ್, ಜೆ ಕೆ -811 ನಂತಹ ಬೇಸಿಗೆಯ ಕೃಷಿ ತಳಿಗಳನ್ನು ಪರಿಗಣಿಸಬೇಕು. ಮುಂಗಾರು ಅಥವಾ ಮುಂಗಾರಿನ ಕೊನೆಯಲ್ಲಿ ಋತುವಿಗಾಗಿ, ಸಿಂಜೆಂಟಾ -204ನ8, ಸೆಮಿನಿಸ್-ಗರ್ವಾ, ನಂಧಾರಿ 629 ನಂತಹ ವಿಧಗಳನ್ನು ಪರಿಗಣಿಸಬೇಕು._x005F_x000D_ _x005F_x000D_ _x005F_x000D_ ಉಲ್ಲೇಖ- ತೇಜಸ್ ಕೋಲ್ಹೆ, ಹಿರಿಯ ಬೇಸಾಯ ತಜ್ಞರು _x005F_x000D_ _x005F_x000D_ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
315
0