ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಭತ್ತದ ಪ್ರಮುಖ ಕೀಟಪೀಡೆಗಳು ಮತ್ತು ಹತೋಟಿ
ದೇಶದ ಹೆಚ್ಚಿನ ಭಾಗಗಳಲ್ಲಿ ಭತ್ತ ನಾಟಿ ಮುಗಿದಿದೆ, ಮತ್ತು ತೆನೆ ಬರುವ ಹಂತ ಕೆಲವು ಪ್ರದೇಶಗಳಲ್ಲಿ ಪ್ರಾರಂಭವಾಗಲಿದೆ. ಈ ಹಂತದಲ್ಲಿ ಅಸಮರ್ಪಕ ಆರೈಕೆಯ ಸಂದರ್ಭದಲ್ಲಿ, ರೈತರು ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಈ ಹಂತದಲ್ಲಿ ಬಾಧಿಸುವ ಕೀಟಪೀಡೆಗಳು ಮತ್ತು ಭತ್ತದ ಕೀಟಪೀಡೆಗಳ ನಿರ್ವಹಣೆಯನ್ನು ವಿಶ್ಲೇಷಿಸೋಣ. • ಭತ್ತದ ಹಳದಿ ಕಾಂಡ ಕೊರೆಕ: ಕಾಂಡದೊಳಗಿನ ಮರಿಹುಳುವಿನ ಬಾಧೆಯಿಂದಾಗಿ ಸುಳಿ ಒಣಗುತ್ತದೆ. ಇದರ ಪರಿಣಾಮವಾಗಿ, ತೆನೆ ಬಂದ ಮೇಲೆ ಯಾವುದೇ ತೆನೆಗಳು ಬೀಜದಿಂದ ಕೂಡಿರುವುದಿಲ್ಲ ಬಿಳಿಯಾಗಿರುತ್ತದೆ. ಬಾಧೆಗೊಂಡಿರುವ ಸುಳಿಗಳು ಕೈಗಳಿಂದ ಸುಲಭವಾಗಿ ಕಿತ್ತು ತೆಗೆಯಬಹುದು. • ಭತ್ತದ ಎಲೆ ಮಡಚುವ ಕೀಟ: ಮರಿಹುಳುಗಳು ಎಲೆಯ ಅಂಚುಗಳನ್ನು ಮಡಚುವ ಮೂಲಕ ಹಸಿರು ಪತ್ರ ಹರಿತ್ತನ್ನು ತಿಂದು ಭತ್ತದ ಎಲೆಗಳನ್ನು ಬಾಧಿಸುತ್ತವೆ. ಎಲೆಗಳ ಮೇಲೆ ಬಾಧೆಯ ಲಕ್ಷಣಗಳು ಕಂಡು ಬರುತ್ತವೆ, ಮತ್ತು ಬಾಧೆಯು ಹೆಚ್ಚಾದಾಗ, ಎಲೆಗಳು ಬಿಳಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಕೊನೆಯದಾಗಿ ಒಣಗುತ್ತವೆ. • ಭತ್ತದ ಹಸಿರು ಜಿಗಿ ಹುಳು: ಕಾಂಡಗಳ ಕೆಳಗಿನಿಂದ ಜಿಗಿ ಹುಳು ರಸವನ್ನು ಹೀರುತ್ತವೆ. ಇದರ ಪರಿಣಾಮವಾಗಿ, ಹಳದಿ ಬಣ್ಣದ ಬಾಧೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಅದು ಶೀಘ್ರದಲ್ಲೇ ಕಂದು ಬಣ್ಣಕ್ಕೆ ತಿರುಗುತ್ತದೆ ಮತ್ತು ಒಣಗಲು ಕಾರಣವಾಗುತ್ತದೆ. ಸಸ್ಯದ ಮೇಲೆ ಸುಟ್ಟಂತೆ ಕಂಡುಬರುವ ಲಕ್ಷಣಗಳನ್ನು ಹಾಪರ್ ಬರ್ನ್ ಎಂದು ಕರೆಯಲಾಗುತ್ತದೆ. ಬಾಧೆಯು ಸಾಮಾನ್ಯವಾಗಿ ಕ್ಷೇತ್ರದ ಮಧ್ಯದಿಂದ ಪ್ರಾರಂಭವಾಗುತ್ತದೆ ಮತ್ತು ವೃತ್ತಾಕಾರದ ರೀತಿಯಲ್ಲಿ ಹರಡುತ್ತದೆ. ತೆನೆಯಾಗುವಿದಿಲ್ಲ. • ಭತ್ತದ ಪಾತರಗಿತ್ತಿ : ಮರಿಹುಳುಗಳು ಎಲೆಯ ಅಂಚುಗಳನ್ನು ಒಳಗೆ ಮಡಚಿ ಮತ್ತು ಮಡಚಿದ ಎಲೆಯೊಳಗೆ ಇದ್ದು ಹಸಿರು ಪತ್ರ ಹರಿತ್ತನ್ನು ತಿಂದು ಬಾಧಿಸುತ್ತದೆ. • ನೀಲಿ ದುಂಬಿ : ಕೀಟವು ಎಲೆಗಳ ಹಸಿರು ಪತ್ರ ಹರಿತ್ತನ್ನು ತಿಂದು ಬಾಧಿಸುತ್ತದೆ. ಇದರ ಆಹಾರ ಪದ್ಧತಿಯನ್ನು ಗಮನಿಸಿದರೆ, ಬಿಳಿ ತೇಪೆಗಳು ಎಲೆಯ ಮಧ್ಯದ ಸಿರನಾಳಕ್ಕೆ ಸಮಾನಾಂತರವಾಗಿ ಕಂಡುಬರುತ್ತವೆ. • ಗಂಧಿ ತಿಗಣೆ : ಕೀಟವು ಘಾಟದ ವಾಸನೆಯನ್ನು ಹೊರಸೂಸುತ್ತದೆ ಮತ್ತು ಆದ್ದರಿಂದ ಇದನ್ನು "ಗಂಧಿ ತಿಗಣೆ" ಎಂದೂ ಕರೆಯುತ್ತಾರೆ. ಅಪ್ಸರೆ ಮತ್ತು ಪ್ರೌಢ ಕೀಟ ತೆನೆ ಬರುವ ಹಂತದಲ್ಲಿ ಭತ್ತದ ತೆನೆಯ ರಸ ಹೀರುವುದರ ಮೂಲಕ ಬಾಧಿಸುತ್ತವೆ. ಬಾಧೆಯ ಪರಿಣಾಮವಾಗಿ, ಧಾನ್ಯಗಳು ಪಕ್ವತೆಯಾಗುವುದಿಲ್ಲ ಮತ್ತು ತೆನೆಗಳು ಖಾಲಿಯಾಗಿರುತ್ತವೆ. • ಸೈನಿಕ ಕೀಟ: ಇದನ್ನು "ತೆನೆ ಕತ್ತರಿಸುವ ಕೀಟ " ಎಂದೂ ಕರೆಯುತ್ತಾರೆ. ಮರಿಹುಳುಗಳು ತೆನೆಗಳನ್ನು ಕತ್ತರಿಸುತ್ತವೆ, • ಮೈಟ್ ನುಶಿ: ಈ ಕೀಟವು ಎಲೆಗಳಿಂದ ರಸ ಹೀರುವುದರ ಮೂಲಕ ಬಾಧಿಸುತ್ತದೆ ಮತ್ತು ಇದರ ಬಾಧೆಯಿಂದಾಗಿ ಶಿಲೀಂಧ್ರವು ಎಲೆಯನ್ನು ಪ್ರವೇಶಿಸಲು ಸುಲಭ ಮತ್ತು ವೇಗವಾಗಿ ಮಾಡುತ್ತದೆ. ನೇರ ಪರಿಣಾಮವಾಗಿ, ಎಲ್ಲಾ ಧಾನ್ಯಗಳು ಕಂದು ಬಣ್ಣಕ್ಕೆ ತಿರುಗುತ್ತದೆ. • ಏಡಿಗಳು: ಅವು ನೀರಿನ ಮಟ್ಟವನ್ನು ಸಮೀಪವಿರುವ ಸಸ್ಯವನ್ನು ಕತ್ತರಿಸುತ್ತವೆ. ಇದಲ್ಲದೆ, ಬದುಗಳಲ್ಲಿ ಬಿಲಗಳನ್ನು ಸಹ ಮಾಡುತ್ತವೆ, ಇದರಿಂದಾಗಿ ಭತ್ತದ ಗದ್ದೆಯಿಂದ ನೀರು ಹರಿದು ಹೋಗಲು ಸಹಾಯವಾಗುತ್ತದೆ. • ಇಲಿಗಳು: ಬೆಳೆದು ನಿಂತ ಭತ್ತದ ತೆನೆಯನ್ನು ಕತ್ತರಿಸಿ ತನ್ನ ಬಿಲಗಳಲ್ಲಿ ಸಂಗ್ರಹಿಸುತ್ತವೆ.
ರಾಸಾಯನಿಕ ಔಷದಗಳಿಂದ ಹತೋಟಿ : ಮೊಳಕೆಯ ಬೇರುಗಳನ್ನು ಕ್ಲೋರ್ಪಿರಿಫೋಸ್ 20 ಇಸಿ @ 0.02% + ಯೂರಿಯಾ 1% ನಲ್ಲಿ 4 ಗಂಟೆಗಳ ಕಾಲ ಅದ್ದು ನಾಟಿ ಮಾಡುವ ಮೊದಲು ಉಪಚರಿಸಬೇಕು. ನಾಟಿ ಮಾಡಿದ 10 ದಿನಗಳ ನಂತರ 15 - ಹೆಕ್ಟೇರಿಗೆ 1.0 ಕೆಜಿ / ಹೆಕ್ಟೇರ್‌ನಲ್ಲಿ ಕ್ವಿನಾಲ್ಫೋಸ್ ಹರಳುಗಳನ್ನು ಒದಗಿಸಬೇಕು. ಹೊಸದಾಗಿ ಮೊಟ್ಟೆಯಿಂದ ಹೊರ ಬಂದ ಕಾಂಡ ಕೊರೆಯುವ ಮರಿಹುಳುಗಳನ್ನು ಹತೋಟಿ ಮಾಡಲು 7 ದಿನಗಳ ಮಧ್ಯಂತರದಲ್ಲಿ 2 ಸಲ ಕ್ವಿನಾಲ್ಫೋಸ್ ಅಥವಾ ಫಾಸ್ಫೊಮಿಡಾನ್‌ನೊಂದಿಗೆ 0.5 ಕೆಜಿ / ಹೆಕ್ಟೇರ್‌ಗೆ ಸಿಂಪಡಣೆ ಮಾಡಬೇಕು. ಸೈನಿಕ ಹುಳುವಿನ ಬಾಧೆಯ ಸಂದರ್ಭದಲ್ಲಿ, ನುವಾನ್ 0.5 ಕೆಜಿ / ಹೆಕ್ಟೇರ್ಗೆ ಸೂರ್ಯ ಮುಳುಗಿದ ನಂತರ ಸಂಜೆ ವೇಳೆಯಲ್ಲಿ ಬೆಳೆಗೆ ಸಿಂಪಡಿಸಿ ಜೈವಿಕ ಹತೋಟಿ : ವಾರದ ಮಧ್ಯಂತರದಲ್ಲಿ ಮೊಟ್ಟೆಯ ಪರಾವಲಂಬಿ ಕೀಟವಾದ ಟ್ರೈಕೊಗ್ರಾಮಾ ಜಪೋನಿಕಮ್ ಹೊಲದಲ್ಲಿ ಭತ್ತದ ಹಳದಿ ಕಾಂಡ ಕೊರಕದ ಮೊಟ್ಟೆಯ ಇಡುವ ಹಂತದಲ್ಲಿ 50,000 ಪ್ರತಿ ಹೆಕ್ಟೇರ್ಗೆ ಬಿಡುಗಡೆ ಮಾಡಬೇಕು. ಮಿರಿಡ್ ತಿಗಣೆ ಸೈಟೊರಿಹಿನಸ್ ಲಿವಿಡಿಪೆನ್ನಿಸ್ ಎಂಬ ಪರಭಕ್ಷಕವನ್ನು 50 - 75 ಮೊಟ್ಟೆ / ವರ್ಗ ಮೀಟರ್ಗೆ ಬಿಡುಗಡೆ ಮಾಡಬೇಕು. ಮೂಲ: ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
378
5
ಇತರ ಲೇಖನಗಳು